January 13, 2025

Newsnap Kannada

The World at your finger tips!

doctor

ಮಂಡ್ಯದ ದಂತ ವೈದ್ಯ ಡಾ. ಅಪ್ಪಾಜಿಗೌಡರ ನಿಧನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ ವೈದ್ಯ ಸಮೂಹ

Spread the love

ಇತ್ತೀಚೆಗೆ ನಿಧನರಾದ ಮಂಡ್ಯದ ಖ್ಯಾತ ದಂತ ವೈದ್ಯ ಡಾ ಅಪ್ಪಾಜಿಗೌಡರಿಗೆ ಮಂಡ್ಯದ ವೈದ್ಯಕೀಯ ಸಂಘ ಹಾಗೂ ದಂತ ವೈದ್ಯರ ಸಂಘ ಪದಾಧಿಕಾರಿಗಳು ಹಾಗೂ ಸದಸ್ಯರು ಜಂಟಿಯಾಗಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

ನಗರದ ಐಎಂಎ ಹಾಲ್ ನಲ್ಲಿ ಐಎಂಎ ಅಧ್ಯಕ್ಷ ಡಾ. ಮರೀಗೌಡ ಹಾಗೂ ಡಾ. ಅರುಣಾನಂದ ಜಂಟಿ ಏರ್ಪಡಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮ ದಲ್ಲಿ ಮಾತನಾಡಿದ ವೈದ್ಯರ‌ ಸಮೂಹ ಎಂದು
ಡಾ ಅಪ್ಪಾಜಿನಗೌಡರು ಮಂಡ್ಯದ ಪ್ರಥಮ ದಂತ ವೈದ್ಯ ರು ಎಂಬ ಹೆಗ್ಗಳಿಕೆ ಇದೆ ಎಂದು ಗಣಗಾನ‌ ಮಾಡಿದರು.‌

ಮಿತ ಭಾಷಿ, ಹೃದಯವಂತ ಅಪ್ಪಾಜಿ ಗೌಡರಿಗೆ ಶಿಸ್ತು, ಬದ್ದತೆ ಅವರಿಗೆ ವರದಾನವಾಗಿತ್ತು. ಸಾಮಾಜಿಕ ಕಳಕಳಿಯೊಂದಿಗೆ ಮಗು ಮನಸ್ಸಿನ ಗೌಡರು ಎಲೆ ಮೆರೆಯಕಾಯಿ ನಿರಂತರ ಸೇವೆ ಮಾಡಿದ್ದು ವೈದ್ಯ ಲೋಕಕ್ಕೆ ಮಾದರಿಯಾಗಿದೆ ಎಂದು ಹಿರಿಯ
ವೈದ್ಯ ರು ಸ್ಮರಿಸಿದರು.

ಸಂಜೆ ನಿಧನರಾದ ಡಾ.ಅಪ್ಪಾಜಿಗೌಡರು ಬೆಳಿಗ್ಗೆಯೂ ಕೂಡ ಶಾಲೆ ಮಕ್ಕಳಿಗೆ ಉಚಿತ ತಪಾಸಣೆ ಮಾಡಿ ಬಂದಿದ್ದರು. ತಾವು ಮಾಡಿದ ಯಾವುದೇ ಸೇವಾ ಕಾರ್ಯ ಸಾರ್ವಜನಿಕ ವಾಗಿದ್ದರೂ ಹೇಳಿಕೊಳ್ಳುವ ಸ್ವಭಾವ ಅಪ್ಪಾಜಿಗೌಡರ ದ್ದಾಗಿರಲಿಲ್ಲ ಎಂದು ಸ್ಮರಿಸಿದರು.

ಈ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಐಎಂಎ ಅಧ್ಯಕ್ಷ ಡಾ. ಟಿ .ಎನ್. ಮರೀಗೌಡ, ದಂತ ವೈದ್ಯರ ಸಂಘದ ಅಧ್ಯಕ್ಷ ಡಾ. ಅರುಣಾನಂದ, ಡಾ. ಚಂದ್ರ ಶೇಖರ್. ಡಾ. ಆವಂತಿ ಚಂದ್ರಶೇಖರ್ , ಡಾ.. ರಾಮಲಿಂಗೇಗೌಡ, ಡಾ. ಜಗದೀಶ್, ಡಾ ಸತ್ಯನಾರಾಯಣ, ಡಾ. ಬಿ ಡಿ ಕೃಷ್ಣಪ್ಪ, ಡಾ. ವಸುಮತಿ ರಾವ್ ಸೇರಿದಂತೆ ವೈದ್ಯರು ಹಾಗೂ ಅಪ್ಪಾಜಿ ಗೌಡರ ಕುಟುಂಬ ವರ್ಗದವರು ಪಾಲ್ಗೊಂಡಿದ್ದರು.

Copyright © All rights reserved Newsnap | Newsever by AF themes.
error: Content is protected !!