ಬೆಂಗಳೂರು: ಮುಡಾ ಹಗರಣದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೊಂದು ಸಂಕಷ್ಟ ಎದುರಾಗಿದೆ. ಬೆಂಗಳೂರಿನ ಅರ್ಕಾವತಿ ಬಡಾವಣೆಯ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದ್ದು, ಈ ಕುರಿತು ರಾಜ್ಯಪಾಲರಿಗೆ ದೂರು ಸಲ್ಲಿಸಲಾಗಿದೆ.
ಅರ್ಕಾವತಿ ಲೇಔಟ್‌ನ ನಿವೇಶನ ಹಂಚಿಕೆಯಲ್ಲಿ ಅಕ್ರಮ ಆರೋಪಿಸಿ, ನಿವೇಶನದ ಮಾಲೀಕರಾದ ಎಂ.ಎಸ್. ಶಿವಲಿಂಗಪ್ಪ, ಎಂ. ಚಂದ್ರಶೇಖರನ್, ಕೆ. ರಾಮಚಂದ್ರಯ್ಯ ಮತ್ತು ಡಾ. ವೆಂಕಟಕೃಷ್ಣಪ್ಪ ಎಂಬವರು ಸಿಎಂ ಸಿದ್ದರಾಮಯ್ಯ, ಇತ್ತೀಚಿನ ಬಿಡಿಎ ಆಯುಕ್ತ ಶ್ಯಾಂಭಟ್ ಮತ್ತು ಭೂಸ್ವಾಧೀನಾಧಿಕಾರಿ ಬೋರಯ್ಯ ವಿರುದ್ಧ ದೂರು ನೀಡಿದ್ದಾರೆ.
ಇದನ್ನು ಓದಿ – ಸಿಎಂ ಸಿದ್ದರಾಮಯ್ಯ ಆಪ್ತ ಕೆ.ಮರೀಗೌಡ ಮುಡಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ
ಆರೋಪಗಳ ಪ್ರಕಾರ, ಅರ್ಕಾವತಿ ಲೇಔಟ್‌ನಲ್ಲಿ ವಶಪಡಿಸಿಕೊಂಡ ಜಾಗವು ಭೂಗಳ್ಳರ ಕೈಗೆ ಬೀಳುತ್ತಿದೆ, ಇದರಿಂದ ಮೂಲ ಫಲಾನುಭವಿ ನಿವೇಶನದಾರರಿಗೆ ತೊಂದರೆ ಆಗುತ್ತಿದೆ. ಲೇಔಟ್‌ಗೆ ಜಮೀನು ಕೊಟ್ಟ ಮಾಲೀಕರಿಗೂ ವಂಚನೆ ನಡೆದಿದೆ ಎಂದು ದೂರುದಾರರು ಆರೋಪಿಸಿದ್ದಾರೆ.
More Stories
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ