ನಕಲಿ ದಾಖಲೆಯೊಂದನ್ನು ಸೃಷ್ಟಿಸಿ ಖಾತೆ ಬದಲಾವಣೆ ಮಾಡಿಕೊಂಡಿರುವು ದಾಗಿ ಕಾಗೋಡು ತಿಮ್ಮಪ್ಪ ಪತ್ನಿ , ತನ್ನ ಸಹೋದರಿ ವಿರುದ್ಧವೇ ಕಾಪು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಉಡುಪಿ ಜಿಲ್ಲೆಯ ಕಾಪುವಿನ ಟಿ.ಕೆ.ಕೋಟೆ ಗ್ರಾಮದಲ್ಲಿ ಕಾಗೋಡು ತಿಮ್ಮಪ್ಪ ಪತ್ನಿ ರೂಪ ಎಂಬುವರ ಹೆಸರಿನಲ್ಲಿ ತನ್ನ ತಾಯಿ ಹಕ್ಕಿನ ಜಮೀನನಲ್ಲಿ ವಾಸದ ಮನೆಯಿದೆ. ಈ ಮನೆಗೆ ಸಹೋದರಿ ಸುಶೀಲಾ ಕೂಡ ವಾರಸುದಾರರು. ಆದರೆ ಇನ್ನೊಬ್ಬ ಸಹೋದರಿಯಾದ ಕಲಾವತಿ ಎಂಬುವರು ನಕಲಿ ದಾಖಲೆ ಸೃಷ್ಟಿಸಿ ಖಾತೆ ಬದಲಾವಣೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ, ದೂರು ನೀಡಲಾಗಿದೆ.
ಆರೋಪಿಯು 2020 ಆಗಸ್ಟ್‌ನಲ್ಲಿ ತನ್ನ ಖಾತೆ ಬದಲಾವಣೆ ಮಾಡಿಕೊಳ್ಳುವ ಸಲುವಾಗಿ ಗ್ರಾಮ ಪಂಚಾಯತ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ವಿಷಯ ತಿಳಿದ ರೂಪ ಅವರು ಪರಿಶೀಲನೆ ನಡೆಸಿದಾಗ ಉಡುಪಿಯ ಉಪ ನೋಂದಣಿ ಕಚೇರಿಯಲ್ಲಿ ವಿಚಾರ ತಿಳಿದುಬಂದಿದೆ.
ಉಡುಪಿಯ ನೋಟರಿ ನಾರಾಯಣ ಶೆಟ್ಟಿ ಎಂಬುವರಿಂದ ನೋಟರಿ ಮಾಡಿಸಿದ ನಕಲಿ ಅಧಿಕಾರ ಪತ್ರದ ಆಧಾರದ ಮೇಲೆ ಕಲಾವತಿ ಫೆ.6 ರಂದು ಮನೆಯನ್ನು ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ತಮ್ಮ ಮೇಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಕಾಪು ಪೊಲೀಸರು ಪ್ರಕಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ.
- ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ದಂಪತಿ
- 2024-25ನೇ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನ
- 10ನೇ ತರಗತಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಅವಕಾಶ
- HMPV ವೈರಸ್ ಕರ್ನಾಟಕಕ್ಕೆ ಪ್ರವೇಶ: ಬೆಂಗಳೂರಿನಲ್ಲಿ 8 ತಿಂಗಳ ಮಗುವಿಗೆ ಸೋಂಕು ದೃಢ
- ಮಳೆ ನಿಂತರೂ ಮರದ ಹನಿ ನಿಲ್ಲದು
More Stories
ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ದಂಪತಿ
2024-25ನೇ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನ
10ನೇ ತರಗತಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಅವಕಾಶ