January 5, 2025

Newsnap Kannada

The World at your finger tips!

sowmy reddy

ಶಾಸಕಿ ಸೌಮ್ಯ ರೆಡ್ಡಿ ವಿರುದ್ದ ದೂರು:ಎಫ್ ಐಆರ್ ದಾಖಲು

Spread the love

ಮಹಿಳಾ ಪೋಲೀಸ್ ಮೇಲೆ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿ ಮಾಡಿದ ಜಯನಗರ ಶಾಸಕಿ ಸೌಮ್ಯ ರೆಡ್ಡಿ ವಿರುದ್ದ ಬೆಂಗಳೂರಿನ ಉಪ್ಪಾರಪೇಟೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

sowmy 1

ಶಾಸಕಿ ಯಿಂದ ಕೈ ಏಟು ತಿಂದ ಮಹಿಳಾ ಪೋಲಿಸ್ ಪೇದೆ ನೀಡಿದ ದೂರಿನ್ವಯ ಉದ್ದೇಶ ಪೂರ್ವಕವಾಗಿ ನೋವುಂಟು ಮಾಡಿರುವುದು IPC 323 ಹಾಗೂ ಕರ್ತವ್ಯಕ್ಕೆ ಅಡ್ಡಿ ಪಡಿಸಿದ (IPC 353 ಕಲಂ) ಕಾರಣಕ್ಕಾಗಿ ಎಫ್ ಐಆರ್ ಹಾಕಲಾಗಿದೆ.

ಕೇಂದ್ರ ಕೃಷಿ ಕಾನೂನು ಗಳನ್ನು ವಿರೋಧಿಸಿ ಕಳೆದ ಬುಧವಾರ ಕಾಂಗ್ರೆಸ್ ಬೃಹತ್ ಪ್ರತಿಭಟನೆ ‌ನಡೆಸಿತು. ಪ್ರತಿಭಟನಾಕಾರರು ರಾಜಭವನಕ್ಕೆ ತೆರಳವುದನ್ನು ಪೋಲಿಸರು ತಡೆದರು. ಈ ವೇಳೆ ಪ್ರತಿಭಟನಾಕಾರರನ್ನು ಮಹಾರಾಣಿ ಕಾಲೇಜು ಬಳಿ ಬಂಧಿಸಿ ಬಸ್ ಗೆ ತುಂಬುವ ವೇಳೆ ಶಾಸಕಿ ತಮ್ಮನ್ನು ಮಹಿಳಾ ಪೋಲಿಸ್ ತಳ್ಳಾಟ ಮಾಡಿದರು ಎಂದು ರಂಪಾಟ ಮಾಡಿ ಗಲಾಟೆಗೆ ಮುಂದಾದರು.

ಆಗ ಪೋಲಿಸರು ಹಾಗೂ ಶಾಸಕಿ ನಡುವೆ ವಾಗ್ಯುದ್ಧವೆ ನಡೆಯಿತು. ಈ ಸಮಯದಲ್ಲಿ ಶಾಸಕಿ ಸೌಮ್ಯ ರೆಡ್ಡಿ ಮಹಿಳಾ ಪೋಲಿಸ್ ಕೈಗೆ ಏಟು ಹೊಡೆದರು.

ಶಾಸಕಿ ಸೌಮ್ಯ ರೆಡ್ಡಿ ತಮ್ಮ ಹೊಸ ಕರ್ತವ್ಯಕ್ಕೆ ಅಡ್ಡಿಪಡಿಸಿದರು ಹಾಗೂ‌ ತಮಗೆ ನೋವುಂಟು ಮಾಡಿದರು ಎಂದು ಮಹಿಳಾ ಪೋಲಿಸ್ ಉಪ್ಪಾರ ಪೋಲಿಸ್ ಠಾಣೆಗೆ ದೂರು ನೀಡಿದರು.

Copyright © All rights reserved Newsnap | Newsever by AF themes.
error: Content is protected !!