January 29, 2026

Newsnap Kannada

The World at your finger tips!

police 1

ಕ್ಲಬ್‌ಹೌಸ್‌ನಲ್ಲಿ ಪಾಕಿಸ್ತಾನ ಪರ ಘೋಷಣೆ- ವಿಕೃತಿ ಮೆರೆದ ಕಿಡಿಗೇಡಿಗಳ ವಿರುದ್ಧ ದೂರು

Spread the love

ಸ್ವಾತಂತ್ರ್ಯ ಅಮೃತ ಮಹೋತ್ಸವದಂದು ಕ್ಲಬ್ ಹೌಸ್‌ನಲ್ಲಿ ಕಿಡಿಗೇಡಿಗಳ ಗುಂಪೊಂದು ಪಾಕ್ ಧ್ವಜ ಹಾಕಿ ಉದ್ಧಟತನ ತೋರಿದೆ. ಪಾಕಿಸ್ತಾನ ಜಿಂದಾಬಾದ್, ಭಾರತಕ್ಕೆ ನಿಂದನೆ ಮಾಡುವ ಕಾಮೆಂಟ್‌ಗಳನ್ನು ಕನ್ನಡದಲ್ಲಿ ಹಾಕಿ ವಿಕೃತಿ ಮೆರೆದಿದ್ದರು.

ಪಾಕಿಸ್ತಾನದ ರಾಷ್ಟ್ರಗೀತೆ ಸಹ ಅಪ್ಲೋಡ್ ಮಾಡಿ, ನಮ್ಮನ್ನು ಏನೂ ಮಾಡೋಕೆ ಆಗಲ್ಲ ಅಂತ ಜಂಬ ಮೆರೆದಿದ್ದಾರೆ. ಕಿಡಿಗೇಡಿಗಳ ವಿರುದ್ಧ ಐಪಿಸಿ 353A ಅಡಿ ಸಂಪಿಗೆಹಳ್ಳಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸದ್ಯ ಕಿಡಿಗೇಡಿಗಳು ಎಸ್ಕೇಪ್ ಆಗಿದ್ದಾರೆ.

ರಾಜ್ಯದಲ್ಲಿ ಮತ್ತೆ ಮೈಕ್ ದಂಗಲ್ ಶುರುವಾಗಿದೆ. ರಾಜ್ಯದಲ್ಲಿ ಅನಧಿಕೃತವಾಗಿ ಆಜಾನ್‌ಗೆ ಮೈಕ್ ಗಳನ್ನು ಬಳಸಲಾಗುತ್ತಿದೆ. ಆಜಾನ್‌ಗೆ ಬಳಸೋ ಧ್ವನಿವರ್ಧಕ ವಿರುದ್ಧ ಮತ್ತೊಂದು ಸುತ್ತಿನ ಹೋರಾಟಕ್ಕೆ ಶ್ರೀರಾಮಸೇನೆ ಸಜ್ಜಾಗಿದೆ.

ಆಗಸ್ಟ್ 23 ರಂದು ರಾಜ್ಯದ ಎಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡೋದಾಗಿ ಕಲಬುರಗಿಯಲ್ಲಿ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮಿ ಹೇಳಿದ್ದಾರೆ.

ಕೃಷ್ಣ ಜನ್ಮಾಷ್ಟಮಿ ( KRISHNA JANMASHTAMI )

ಸರ್ಕಾರದ ಸುತ್ತೋಲೆಯಂತೆ ಕಡಿಮೆ ಡೆಸಿಬಲ್ ಬಳಸುತ್ತಿಲ್ಲ. ಆಗಸ್ಟ್ 23 ರಂದು ಬೃಹತ್ ಪ್ರತಿಭಟನೆ ನಡೆಸುತ್ತೇವೆ ಅಂತ ಸಿದ್ದಲಿಂಗ ಸ್ವಾಮಿ ಹೇಳಿದ್ದಾರೆ.

error: Content is protected !!