IPS ಅಧಿಕಾರಿ ರವಿ ಚನ್ನಣ್ಣನವರ್ ಸೇರಿ ಸಹೋದರ ರಾಘವೇಂದ್ರ ಡಿ ಚನ್ನಣ್ಣನವರ್ ವಿರುದ್ಧ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಹಾಗೂ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರಾಘವೇಂದ್ರ ಡಿ ಚನ್ನಣ್ಣನವರ್ ಪತ್ನಿ ರೋಜಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನನ್ನ ಪತಿ ಮದುವೆಯಾಗಿ ಮತ್ತೊಂದು ಮಹಿಳೆಯ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆ ಎಂದು ದೂರಿನಲ್ಲಿ ಆರೋಪಿದ್ದಾರೆ.
2015 ರಲ್ಲಿ ರಾಘವೇಂದ್ರ ಡಿ ಚನ್ನಣ್ಣನವರ್ ರೋಜಾ ಎಂಬುವವರನ್ನು ಮದುವೆಯಾಗಿದ್ದರು. ಮದುವೆಯಾದ ಒಂದು ವರ್ಷದಲ್ಲೇ ಹೆಂಡತಿ ಬಿಟ್ಟು ಬೇರೊಂದು ಮಹಿಳೆ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದಾರೆಂದು ಆರೋಪ ಮಾಡಲಾಗಿದೆ.
ರಾಘವೇಂದ್ರ, ಅಣ್ಣನ ಹೆಸರು ಬಳಸಿ ಹಲವಾರು ಕ್ರೈಂ ನಲ್ಲಿ ಭಾಗಿಯಾಗಿದ್ದಾರೆ. ರುಕ್ಮಿಣಿ ಎಂಬ ಮಹಿಳೆ ಹಾಗೂ ಅವರ ಸಹೋದರರಿಂದ ನನಗೆ ಬೆದರಿಕೆ ಇದೆ. ನನ್ನ ತಂದೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿದ್ದಾರೆ. ಹಲವಾರು ಬಾರಿ ತಂದೆ ಬಳಿ ಹಣ ಪಡೆದು ಕೊಲೆ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ಹೇಳಿದ್ದಾರೆ
ಖುದ್ದು ರವಿ ಚನ್ನಣ್ಣನವರ್ ಅವರೇ ವಧುವನ್ನ ಹುಡುಕಿ ಮದುವೆ ಮಾಡಿದ್ದರು. ಆದರೆ ಇದೀಗ ಕೋರ್ಟ್ ಗೆ ಹೋಗು ಎಂದು ರವಿಚನ್ನಣ್ಣನವರ್ ಹೇಳುತ್ತಿದ್ದಾರೆ.
ಎ-1 ರಾಘವೇಂದ್ರ ಡಿ ಚನ್ನಣ್ಣನವರ್, ಎ-2 ಆಪಾಧಿತೆ ಮಹಿಳೆ, ಎ-3 ಹನುಮಂತ ತಿಮ್ಮಾಪುರ ಹಾಗೂ ರವಿ ಚೆನ್ನಣ್ಣನವರ್ ವಿರುದ್ಧ ದೂರು ರೋಜಾ ದೂರು ದಾಖಲಿಸಿದ್ದಾರೆ.
- ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ವಿಧಿವಶ
- ಹಾಲಿನ ದರ ಏರಿಕೆ? ಶೀಘ್ರದಲ್ಲೇ ಕೆಎಂಎಫ್ ನಿರ್ಣಯ
- ಮೈಸೂರಿನ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು: ಪ್ರತಾಪ್ ಸಿಂಹ-ಯದುವೀರ್ ನಡುವೆ ವಾಕ್ಸಮರ
- ವಾರಕ್ಕೆ 70 ಗಂಟೆ ಕೆಲಸದ ಮೇಲೆ ಉದ್ಯಮಿ ನಮಿತಾ ಥಾಪರ್ ಪ್ರತಿಕ್ರಿಯೆ
- ಸಿಲಿಂಡರ್ ಸ್ಫೋಟ ಪ್ರಕರಣ: ಇಬ್ಬರು ಅಯ್ಯಪ್ಪ ಮಾಲಾಧಾರಿಗಳ ದುರ್ಮರಣ
More Stories
ಸಿಲಿಂಡರ್ ಸ್ಫೋಟ ಪ್ರಕರಣ: ಇಬ್ಬರು ಅಯ್ಯಪ್ಪ ಮಾಲಾಧಾರಿಗಳ ದುರ್ಮರಣ
ಸಂಸತ್ ಭವನದ ಬಳಿಯ ದಾರುಣ ಘಟನೆ: ವ್ಯಕ್ತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ
ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ !