ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರ ವರ್ತನೆಯ ಕುರಿತಂತೆ ಸ್ಪೀಕರ್ ಹಾಗೂ ಮುಖ್ಯ ಕಾರ್ಯದರ್ಶಿ ಯವರಿಗೆ ಮಾತನಾಡಿ ದೂರು ನೋಡಿರುವುದಾಗಿ ಶಾಸಕ ಸಾ.ರಾ.ಮಹೇಶ್ ಹೇಳಿದರು.
ಚಾಮರಾಜನಗರ ಜಿಪಂ ಸಭಾಂಗಣದಲ್ಲಿ ಕಾಗದ ಪತ್ರ ಸಮಿತಿಯ ಸಭೆ ನಡೆಸುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಮಂಗಳವಾರ ಮೈಸೂರಿಗೆ ಸಮಿತಿ ಬಂದ ವೇಳೆ ಶಿಷ್ಟಾಚಾರ ಇರಲಿಲ್ಲ. ಶಿಷ್ಟಾಚಾರ ಉಲ್ಲಂಘನೆ ಮತ್ತು ಡಿಸಿ ವರ್ತನೆ ಬಗ್ಗೆ ಸ್ಪೀಕರ್, ಮುಖ್ಯ ಕಾರ್ಯದರ್ಶಿಗೆ ಅವರೊಟ್ಟಿಗೆ ಮಾತನಾಡುತ್ತೇನೆ ಎಂದರು.
ಅಂದಿನ ಸಭೆಯಲ್ಲಿ ಡಿಸಿ ಸಿಂಧೂರಿ ಸಭೆಗೆ ಬರುವ ಅವಶ್ಯಕತೆ ಇರಲಿಲ್ಲ, ಆದ್ದರಿಂದ ಸಮಯವಿದ್ದರೇ ಸಭೆಯಲ್ಲಿ ಇರಿ ಎಂದು ಹೇಳಿದೆ ಎಂದರು.
ಸಮಿತಿ ಅಧ್ಯಕ್ಷನಾಗಿ ಈಗ ಬಂದಿದ್ದೇನೆ. ಸಭೆ ಬಳಿಕ, ಶಾಸಕನ ಸ್ಥಾನದಲ್ಲಿ ಡಿಸಿ ಅವರ ಬಗ್ಗೆ, ರಾಜ್ಯ ರಾಜಕಾರಣದ ಬಗ್ಗೆ, ಎಚ್.ವಿಶ್ವನಾಥ್ ಹೇಳಿಕೆಗಳ ಬಗ್ಗೆ ಉತ್ತರ ನೀಡುತ್ತೇನೆ ಎಂದು ಹೇಳಿ ತೆರಳಿದರು.
- ವಿಮಾನ ಪತನ: ಕೊನೆಯ ಕ್ಷಣದಲ್ಲಿ ಲ್ಯಾಂಡಿಂಗ್ ಗೇರ್ ವೈಫಲ್ಯ; 179 ಮಂದಿ ದುರ್ಮರಣ!
- 2025ನೇ ಸಾಲಿನ ರೈಲ್ವೆ ಗ್ರೂಪ್-ಡಿ ಹುದ್ದೆಗಳಿಗೆ 32,000ಕ್ಕೂ ಹೆಚ್ಚು ನೇಮಕಾತಿ
- ವಿಚಾರ ಕ್ರಾಂತಿಯ ಯುಗಪುರುಷ ಕುವೆಂಪು
- SBIನಲ್ಲಿ 600 ಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
- ನಾಳೆಗಾಗಿ ಬಾಳಬೇಕು ಕೇಳು ನೊಂದ ಜೀವವೇ..!
More Stories
ವಿಮಾನ ಪತನ: ಕೊನೆಯ ಕ್ಷಣದಲ್ಲಿ ಲ್ಯಾಂಡಿಂಗ್ ಗೇರ್ ವೈಫಲ್ಯ; 179 ಮಂದಿ ದುರ್ಮರಣ!
2025ನೇ ಸಾಲಿನ ರೈಲ್ವೆ ಗ್ರೂಪ್-ಡಿ ಹುದ್ದೆಗಳಿಗೆ 32,000ಕ್ಕೂ ಹೆಚ್ಚು ನೇಮಕಾತಿ
ವಿಚಾರ ಕ್ರಾಂತಿಯ ಯುಗಪುರುಷ ಕುವೆಂಪು