December 24, 2024

Newsnap Kannada

The World at your finger tips!

, suicide , ASI , crime

ಮಾಜಿ ನೌಕರನಿಂದ ಕಂಪನಿ ಎಂಡಿ, ಸಿಇಒ ಹಾಡಹಗಲೇ ಬರ್ಬರ ಹತ್ಯೆ

Spread the love

ಬೆಂಗಳೂರು: ಕಂಪನಿಯೊಂದರ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಹಾಗೂ ಮುಖ್ಯ ಕಾರ್ಯನಿರ್ವಾಹಕ (ಸಿಇಒ) ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ ಬೆಂಗಳೂರಿನ ಅಮೃತಹಳ್ಳಿಯಲ್ಲಿ ನಡೆದಿದೆ.

ಏರೋನಿಕ್ಸ್ ಇಂಟರ್​ನೆಟ್​ ಕಂಪನಿಯ ಎಂಡಿ ಫಣೀಂದ್ರ ಸುಬ್ರಹ್ಮಣ್ಯ, ಸಿಎಒ ವಿನು ಕುಮಾರ್ ಕೊಲೆಯಾದವರು.

ಈ ಕಂಪನಿಯ ಮಾಜಿ ನೌಕರ ಫೆಲಿಕ್ಸ್ ಎಂಬಾತ ಈ ಜೋಡಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಸ್ಥಳಕ್ಕೆ ಅಮೃತಹಳ್ಳಿ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಏರೋನಿಕ್ಸ್​ ಕಂಪನಿಯಿಂದ ಹೊರ ಬಂದ ಫೆಲಿಕ್ಸ್ ತನ್ನದೇ ಸ್ವಂತ ಕಂಪನಿ ಆರಂಭಿಸಿದ್ದ. ತನ್ನ ಉದ್ಯಮಕ್ಕೆ ಹಳೇ ಕಂಪನಿ ಎದುರಾಳಿ ಆಗಿದ್ದರಿಂದ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಕೊಲೆಗೆ ಸಂಚು ಹೂಡಿದ್ದ ಫೆಲಿಕ್ಸ್, ಇಂದು ಸಂಜೆ 4 ಗಂಟೆಗೆ ಚಾಕು ಮತ್ತು ತಲ್ವಾರ್​ನಿಂದ ಫಣೀಂದ್ರ ಮತ್ತು ವಿನು ಕುಮಾರ್ ಮೇಲೆ ದಾಳಿ ಮಾಡಿ, ಕೊಲೆಗೈದಿದ್ದ.

ಮೂವರು ಜತೆಯಾಗಿ ಈ ಕೃತ್ಯವೆಸಗಿದ್ದು, ಒಂದು ಕೊಲೆ ತಳಮಹಡಿಯಲ್ಲಿ ಇನ್ನೊಂದು ಕೊಲೆ ಮೂರನೇ ಮಹಡಿಯಲ್ಲಿ ನಡೆದಿದೆ.ಬಸ್ ಚಾಲಕ ಆತ್ಮಹತ್ಯೆ ಯತ್ನ ಪ್ರಕರಣ : ಸಿಐಡಿ ಅಧಿಕಾರಿಗಳ ತಂಡ ನಾಗಮಂಗಲಕ್ಕೆ ಭೇಟಿ

ಪ್ರಕರಣದ ಬಳಿಕ ಆರೋಪಿಗಳು ಕಾಂಪೌಂಡ್ ಹಾರಿ ಪರಾರಿಯಾಗಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!