January 9, 2025

Newsnap Kannada

The World at your finger tips!

kumarswamy

ಪ್ರಾಧಿಕಾರದ ರಚನೆಗಳಿಂದ ಸಮುದಾಯ ಅಭಿವೃದ್ಧಿ ಅಸಾಧ್ಯ- ಕುಮಾರಸ್ವಾಮಿ

Spread the love
  • ಕಾಂಗ್ರೆಸ್ – ಬಿಜೆಪಿ ಮೈತ್ರಿ ಯೂ ಕೆಲವು ಕಡೆ ಇದೆ.
  • ಮಂಡ್ಯ ದಲ್ಲೂ ನಾವು – ಬಿಜೆಪಿ ಮೈತ್ರಿ ಯಾಗಿದ್ದೇವೆ. ಇದು ಸಾರ್ವತ್ರಿಕ ಚುನಾವಣೆಗಳ ದಿಕ್ಸೂಚಿ ಅಲ್ಲ

ಅಭಿವೃದ್ಧಿ ಪ್ರಾಧಿಕಾರಗಳಿಂದ ಸಮುದಾಯದ ಅಭಿವೃದ್ಧಿ ಆಗುತ್ತೆ ಅನ್ನೋ ನಂಬಿಕೆ ಇಲ್ಲ
ಎಲ್ಲಾ ಜಾತಿಗಳಿಗೂ ಪ್ರಾಧಿಕಾರ ಮಾಡಿದರೆ, ರಾಜ್ಯದಲ್ಲಿ ಸಣ್ಣಪುಟ್ಟ ಅಂದ್ರೆ 560 ಜಾತಿಗಳಿವೆ
ಎಲ್ಲದಕ್ಕೂ ಪ್ರಾಧಿಕಾರ ಮಾಡಿದರೆ ಒಳ್ಳೆಯದಲ್ಲವೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಗುರವಾರ ಪ್ರಶ್ನೆ ಮಾಡಿದರು.

ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ವೀರಶೈವರ ಪ್ರಾಧಿಕಾರ ರಚನೆಯಾಗಿದೆ, ಒಕ್ಕಲಿಗರ ಪ್ರಾಧಿಕಾರದ ಬಗ್ಗೆ ಕೆಲವರು ಧ್ವನಿ ಎತ್ತಿದ್ದಾರೆ. ಆದರೆ ನಾನು ಈ ವಿಚಾರಗಳಿಗೆ ತಲೆಹಾಕಲು ಬಯಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

ಬಡಜನರ ಬಗ್ಗೆ ಸರ್ಕಾರ ಚಿಂತನೆ ನಡೆಸಲಿ ಎಲ್ಲಾ ಸಮುದಾಯದಲ್ಲೂ ಬಡವರಿದ್ದಾರೆ ಸರ್ಕಾರ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದರು.

ಮಂಡ್ಯದಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆ ಯಲ್ಲಿ ಬಿಜೆಪಿ – ಜೆಡಿಎಸ್ ಮೈತ್ರಿ ಕುರಿತಂತೆ ವಿವರಣೆ ನೀಡಿದ ಕುಮಾರಸ್ವಾಮಿ, ಕೊಳ್ಳೆಗಾಲದ ಹನೂರಿನಲ್ಲಿ ಕಾಂಗ್ರೆಸ್ – ಬಿಜೆಪಿ ಮೈತ್ರಿಯಾಗಿವೆ. ನವಲಗುಂದದ ಲ್ಲಿಯೂ ಕಾಂಗ್ರೆಸ್ – ಬಿಜೆಪಿ ಮೈತ್ರಿಯಾಗಿವೆ.ಸ್ಥಳೀಯವಾಗಿ ಮೂರು ಪಕ್ಷದವರು ಹೊಂದಾಣಿಕೆಯಾಗ್ತಿದ್ದಾರೆ . ಇದು ಜೆಡಿಎಸ್ ಗೆ ಬಿಜೆಪಿ ಬಗ್ಗೆ ಸಾಫ್ಟ್ ಅನ್ನುವ ವಿಚಾರ ಇಲ್ಲ ಹಾಗೂ ಯಾವುದೇ ದಿಕ್ಸೂಚಿ ಯೂ ಅಲ್ಲ ಎನ್ನುವುದನ್ನು ಗಮನಿಸಬೇಕು ಎಂದರು.

ಈಗ ಕೆಲವು ಬೈಎಲೆಕ್ಷನ್ ಗಳಿವೆ ಅಷ್ಟೇ ಆಗಿವೆ. ಸಾರ್ವತ್ರಿಕ ಚುನಾವಣೆಗೆ ಇನ್ನು ಎರಡೂವರೆ ವರ್ಷ ಕಾಯಬೇಕಿದೆ. ಈಗ ಮೈತ್ರಿ ಯಾವುದೇ ವಿಚಾರವೂ ನಮ್ಮ ಮುಂದಿಲ್ಲ ಎಂದರು

Copyright © All rights reserved Newsnap | Newsever by AF themes.
error: Content is protected !!