January 6, 2025

Newsnap Kannada

The World at your finger tips!

maruthi 1

ಕಮ್ಯೂನಿಸ್ಟ್‌ ನಾಯಕ ಮಾರುತಿ ಮಾನ್ಪಡೆ ಕೊವಿಡ್ಗೆ ಬಲಿ

Spread the love

ಕರ್ನಾಟಕದ ಹಿರಿಯ ಕಮ್ಯೂನಿಸ್ಟ್ ನಾಯಕ ಕಾಮ್ರೇಡ್, ರೈತ ನಾಯಕ ಮಾರುತಿ ಮಾನ್ಪಡೆ ಮಂಗಳವಾರ ಕೊನೆಯುಸಿರೆಳೆದರು.

ಕಳೆದ ಎರಡು ವಾರಗಳಿಂದ ಕೊರೊನಾ ಸೋಂಕಿಗೊಳಗಾಗಿದ್ದ ಮಾನ್ಪಡೆ ಅವರನ್ನು ಸೊಲ್ಲಾಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸಮಾಜದ ಅತ್ಯಂತ ತಳ ಸಮುದಾಯದಿಂದ ಬಂದ ಕಾಮ್ರೇಡ್ ಮಾನ್ಪಡೆ ಒಬ್ಬ ಹೋರಾಟಗಾರರಾಗಿದ್ದರು.
ಕೋವಿಡ್ ಎಂದು ಎಲ್ಲರೂ ಹೆದರಿ ಮನೆಯಲ್ಲಿ ಕುಳಿತಾಗಲೂ ಮಾನ್ಪಡೆಯವರು ನೊಂದ ಜನತೆಯನ್ನು ಕಟ್ಟಿಕೊಂಡು ಕಲಬುರಗಿ ಮಾತ್ರವಲ್ಲ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಬೀದಿಗಿಳಿಯುತ್ತಿದ್ದರು.

ಪ್ರತಿನಿತ್ಯವೂ ಒಂದಿಲ್ಲೊಂದು ಹೋರಾಟಗಳನ್ನು ಸಂಘಟಿಸಿ ಸರಕಾರಿ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳ ನಿದ್ದೆಗೆಡಿಸುತ್ತಿದ್ದ ಮಾನ್ಪಡೆಯಂಥ ಇನ್ನೊಬ್ಬರು ಸಿಗುವದು ಅಪರೂಪ.
ಅರವತ್ತರ ಇಳಿ ವಯಸ್ಸಿನಲ್ಲಿ ಮಧುಮೇಹದಂತ ಕಾಯಿಲೆ ಇಟ್ಟುಕೊಂಡು ಬೀದಿಗೆ ನುಗ್ಗಿ ಚಳವಳಿ ಮಾಡುತ್ತಿದ್ದ ಮಾನ್ಪಡೆ ಮನಸು ಮಾಡಿದ್ದರೆ ಕೊರೋನಾದಿಂದ ಪಾರಾಗಿ ಬದುಕುತ್ತಿದ್ದರು ಆದರೆ ಅವರ ಜನ ಹೋರಾಟದ ಬದ್ದತೆ ಸುಮ್ಮನಿರಗೊಡಲಿಲ್ಲ.

Copyright © All rights reserved Newsnap | Newsever by AF themes.
error: Content is protected !!