ರೆಬೆಲ್ಸ್ಟಾರ್ ಅಂಬರೀಶ್ ಅವರ 3ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಬುಧವಾರ ಅಂಬರೀಷ್ ಸಮಾಧಿಗೆ ಪೂಜೆ ಸಲ್ಲಿಸಿದ ಪತ್ನಿ ಸುಮಲತಾ, ಪುತ್ರ ಅಭಿಷೇಕ ಭಾವುಕರಾದರು.
ಅಭಿಮಾನಿಗಳ ಪ್ರೀತಿಯ ಅಂಬರೀಶ್ ಬಾರದ ಲೋಕಕ್ಕೆ ಪಯಣ ಬೆಳೆಸಿ ಇಂದಿಗೆ ಮೂರು ವರ್ಷಗಳಾಗಿವೆ.
ದೈಹಿಕವಾಗಿ ಅಂಬರೀಶ್ ನಮ್ಮೊಂದಿಗೆ ಇಲ್ಲದಿದ್ದರೂ, ಅಭಿಮಾನಿಗಳ ಹೃದಯದಲ್ಲಿ ‘ಕಲಿಯುಗದ ಕರ್ಣ’ನಾಗಿ ಉಳಿದುಕೊಂಡಿದ್ದಾರೆ.
ಕಂಠೀರವ ಸ್ಟುಡಿಯೋದಲ್ಲಿನ ಅವರ ಸಮಾಧಿಗೆ ಇಂದು ಪತ್ನಿ, ಸಂಸದೆ ಸುಮಲತಾ ಮತ್ತು ಪುತ್ರ ಅಭಿಷೇಕ್ ಪೂಜೆ ಸಲ್ಲಿಸಿ ನಮನ ಸಲ್ಲಿಸಿದರು
ಅಬಕಾರಿ ಸಚಿವ ಕೆ.ಗೋಪಾಲಯ್ಯ ಕೂಡ ಅಂಬರೀಶ್ ಸಮಾಧಿಗೆ ಭೇಟಿ ನೀಡಿ ಪುಷ್ಪಾರ್ಚನೆ ಸಲ್ಲಿಸಿ ಗೌರವ ಸಲ್ಲಿಸಿದರು
ಪುಣ್ಯಸ್ಮರಣೆ ಹಿನ್ನೆಲೆ ನಾಡಿನಾದ್ಯಂತ ಅಂಬರೀಶ್ ಅಭಿಮಾನಿಗಳು ಕೂಡ ಸಾಗರೋಪಾದಿಯಲ್ಲಿ ಸ್ಟುಡಿಯೋಗೆ ಆಗಮಿಸಿ ಸಮಾಧಿ ದರ್ಶನ ಪಡೆಯುತ್ತಿದ್ದಾರೆ.
ಜೊತೆಗೆ ಚಿತ್ರರಂಗದ ಗಣ್ಯರಾದ ರಾಕ್ಲೈನ್ ವೆಂಕಟೇಶ್, ನಟ ದೊಡ್ಡಣ್ಣ, ಹಲವರು ಸಮಾಧಿಯತ್ತ ಆಗಮಿಸುತ್ತಿದ್ದಾರೆ. ಇನ್ನು ಇಂದು ಆಗಮಿಸುವ ಅಭಿಮಾನಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಳ್ಳಲಾಗಿದೆ.
More Stories
ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ
ಕಾಂಗ್ರೆಸ್ ಸಚಿವರಿಗೆ ರನ್ಯಾ ರಾವ್ ಕರೆ: ಶಾಸಕ ಭರತ್ ಶೆಟ್ಟಿಯಿಂದ ಗಂಭೀರ ಆರೋಪ