December 26, 2024

Newsnap Kannada

The World at your finger tips!

raju tali

ಹಾಸ್ಯನಟ ರಾಜು ತಾಳಿಕೋಟೆ ಮೇಲೆ ಹಲ್ಲೆ

Spread the love

ಹಾಸ್ಯ ನಟ ರಾಜುತಾಳಿಕೋಟೆ ಮೇಲೆ ತೀವ್ರತರ ಹಲ್ಲೆ ನಡೆದಿದೆ. ಪಿಸ್ತೂಲು ಹಣೆಗಿಟ್ಟು ಹಲ್ಲೆ ಮಾಡಿದ್ದಾರೆ ಎಂದೂ ದೂರಲಾಗಿದೆ.


ಸಂಬಂಧಿಕರಿಂದಲೇ ಈ ಹಲ್ಲೆ ನಡೆದಿದೆ. ವಿಜಯಪುರದ ಯೋಗಾಪುರ ಆಶ್ರಯ ಕಾಲೋನಿಯಲ್ಲಿ ನಿನ್ನೆ ಈ ಘಟನೆ ನಡೆದಿದೆ. ಕೌಟುಂಬಿಕ ಸಮಸ್ಯೆ ಬಗೆಹರಿಸುವ ವೇಳೆ ಈ ಹಲ್ಲೆ ನಡೆದಿದೆ ಎಂದು ತಾಳಿಕೋಟೆ ಕುಟುಂಬದ ಮೂಲಗಳು ಹೇಳಿವೆ.


ಗಾಯಗೊಂಡಿರುವ ತಾಳಿ ಕೋಟೆಯನ್ನು ಖಾಸಗಿ ಆಸ್ಪತೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ.


ಹಲವಾರು ಕನ್ನಡ ಚಿತ್ರಗಳಲ್ಲಿ ತಾಳಿಕೋಟೆ ನಟಿಸಿದ್ದಾರೆ. ಖಾಸಗಿ ವಾಹಿನಿಯೊಂದರಲ್ಲಿ ಶನಿವಾರ ಮತ್ತು ಭಾನುವಾರ ಪ್ರಸಾರವಾಗುತ್ತಿರುವ “ರಾಜಾರಾಣಿ” ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಹಲವು ಜೋಡಿಗಳಲ್ಲಿ ರಾಜು ತಾಳಿಕೋಟೆ ಮತ್ತು ಅವರ ಇಬ್ಬರು ಪತ್ನಿಯ ಜೋಡಿಯೂ ಇದ್ದು, ವೀಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

Copyright © All rights reserved Newsnap | Newsever by AF themes.
error: Content is protected !!