ಮೈಸೂರಿನ ಮನೆ ಮಾತಾಗಿರುವ ‘ಕಥೆ ಕೇಳೋಣ ಬನ್ನಿ’
ಇದು ಟಿವಿ,ಮೊಬೈಲ್,ಕಂಪ್ಯೂಟರ್, ಲ್ಯಾಪ್ ಟ್ಯಾಪ್,ಟ್ಯಾಬ್‍ಇನ್ನಿತರ ಸಾಧನ ಯುಗದ ಮಾಧ್ಯಮಗಳ ಮೂಲಕ ನಮ್ಮ ಜನರು ಕೈ ಬೆರಳಿನ ತುದಿಯಲ್ಲಿ ಇಡೀ ಜಗತ್ತಿನ ಎಲ್ಲಾ ವಿಷಯಗಳನ್ನು ಕ್ಷಣ ಮಾತ್ರದಲ್ಲಿ ನೋಡಿ ತಿಳಿಯುವ ಕಾಲ.
ಮೈಸೂರಿನ ಕುವೆಂಪುನಗರದ “ಸುರುಚಿ ರಂಗಮನೆ” ಯ ಚಿಣ್ಣರ ಅಂಗಳದಲ್ಲಿ ‘ಕಥೆ ಕೇಳೋಣ ಬನ್ನಿ’ ವಿನೂತ ಪ್ರಯೋಗ ಮನೆ ಮಾತಾಗಿದೆ.
ಕಥೆ ಕೇಳೋಣ ಆರಂಭ ಹೇಗೆ?
2007ರಲ್ಲಿ ಕಥೆ ಕೇಳೋಣ ಬನ್ನಿ ಕಾರ್ಯಕ್ರಮಕ್ಕೆ ಕಲಾವಿದೆ ಭಾರ್ಗವಿ ನಾರಾಯಣ್ ಕಥೆ ಹೇಳುವುದರ ಮೂಲಕ ಚಾಲನೆ ನೀಡಿದರು.
ಪ್ರತಿ ಶನಿವಾರ ಸಂಜೆ 4.30 ರಿಂದ 5.30 ರವರಗೆ ಒಂದು ಗಂಟೆಗಳ ಕಾಲ ಚಾಚು ತಪ್ಪದೇ ನಡೆದುಕೊಂಡು ಬಂದು ಇದು ವರಗೆ ಸುಮಾರು 685 ಕ್ಕೂ ಹೆಚ್ಚು ಕಾರ್ಯಕ್ರಮ ನಡೆಸಿದೆ.
ಪುಟ್ಟ ಮಕ್ಕಳಿಂದ ಹಿಡಿದು ಅವರು ಪಾಲಕರು,ಅಜ್ಜ ಅಜ್ಜಿಯರು, ಅಭಿಮಾನಿಗಳು ಕಥೆ ಕೇಳಲು ಆಸಕ್ತರಾಗಿರುತ್ತಾರೆ.
“ಸುರುಚಿ ರಂಗಮನೆ” ‘ಕಥೆ ಕೇಳೋಣ ಬನ್ನಿ’ ಸ್ಥಾಪನೆ ಉದ್ದೇಶ ಮಕ್ಕಳಲ್ಲಿ ಕಥಾ ಕಲ್ಪನೆ,ಮೌಲ್ಯಗಳು, ಆಸಕ್ತಿ,ಅಭಿರುಚಿ, ಏಕಾಗ್ರತೆ, ಅಭಿವ್ಯಕ್ತಿ,ಧೈರ್ಯ,ನೀತಿ, ಹಲವಾರು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಡೆಸಲಾಗುತ್ತಿದೆ ಎನ್ನುತ್ತಾರೆ ಸಂಚಾಲಕ ಡಾ.ಹೆಚ್.ಕೆ.ರಾಮನಾಥ್
ಪ್ರತಿ ಕಥೆ ಕೇಳಿದ ಮೇಲೆ ಮಕ್ಕಳೊಂದಿಗೆ ಪರಸ್ಪರ ಪ್ರಶ್ನೋತ್ತರ ಕಥೆ ಸಾರಂಶ ಕೂಡ ನಡೆಯುತ್ತದೆ.ಕೆಲವು ಬಾರಿ ಮಕ್ಕಳು ಕೂಡ ಕೊನೆ ಭಾಗದಲ್ಲಿ ಕಥೆ ಹೇಳುವ ಮಟ್ಟಕ್ಕೆ ಬರುತ್ತಾರೆ.
ಈ ಸಂಸ್ಥೆಯ ಕಲ್ಪನೆ ಮೂಡಿದ್ದೆ ಶಶಿಧರ್ ಡೋಂಗರೆಯವರಿಂದ,ಇದಕ್ಕೆ ಅವರಿಂದ ಪೋಷಣೆ ಇದೆ. ,ಕೆ.ನಾಗರಾಜ,ವಿದ್ಯಾಶಂಕರ್ ಹಾಗೂ ವಿಜಯಾ ಸಿಂಧುವಳ್ಳಿ ಸಹಕಾರವೂ ಇದೆ.
ಯಾವುದೇ ಹಬ್ಬ ಹರಿದಿನ,ರಜಾ,ಪರೀಕ್ಷೆ ಇನ್ನಾವುದೇ ಕಾರ್ಯಕ್ರಮವಿರಲಿ ಪ್ರತಿ ಶನಿವಾರ ಮಾತ್ರ ಕಥೆ ಕೇಳುವುದು ಮಾತ್ರ ನಿಲ್ಲುವುದಿಲ್ಲ.
ಲಾಕ್ ಡೌನ್ ಸಮಯದಲ್ಲಿ ಮಾತ್ರ ಅಲ್ಪವಿರಾಮ ಸಿಕ್ಕಿರುವುದು ಮಕ್ಕಳಲ್ಲಿ ನಿರಾಸೆ ತಂದಿದೆ.
ಕಥೆಗಳು ಪೌರಾಣಿಕ, ಕಾಲ್ಪನಿಕ, ಪ್ರಾಣಿಗಳ,ನೈಸರ್ಗಿಕ,ಬೌದ್ಧಿಕ, ಸಾಮಾಜಿಕ ಹೀಗೆ ವಿವಿಧ ನೆಲಗಟ್ಟನ್ನು ಇಟ್ಟುಕೊಂಡು ಕಥೆ ರೂಪವಾಗಿರುತ್ತದೆ.
‘ಕಥೆ ಕೇಳೋಣ ಬನ್ನಿ’ ನಡೆಸಿಕೊಟ್ಟವರಲ್ಲಿ ನಾಡಿನ ನೂರಾರು ದಿಗ್ಗಜರು ಇದ್ದಾರೆ.ಪ್ರಮುಖರೆಂದರೆ ಪ್ರೋ.ಬಿ.ಆರ್.ಲಕ್ಷ್ಮಣರಾವ್,ಡಾ.ರತ್ನ,ಜಯಂತ್ ಕಾಯ್ಕಿಣಿ, ಡಾ.ಹೆಚ್.ಎಸ್. ವೆಂಕಟೇಶಮೂರ್ತಿ,ವೈದೇಹಿ,ಚಕ್ರವರ್ತಿ ಸೂಲಿಬೇಲಿ,ಮಂಡ್ಯ ರಮೇಶ್,ಶ್ರೀನಾಥ ಶಾಸ್ತ್ರಿ,ರವೀಂದ್ರ ಭಟ್,ಪ್ರೋ.ಕೃಷ್ಣೇಗೌಡ ಇನ್ನೂ ಮುಂತಾದವರು ಇಲ್ಲಿಗೆ ಬಂದು ಕಥೆ ಹೇಳಿ ಹೊಗಿದ್ದಾರೆ.
ಕಥೆ ಮುಗಿದ ನಂತರ ಕೆಲ ಕಾಲ ಕನ್ನಡ ಭಾಷೆ ಕಲಿಕೆ ಕುರಿತಂತೆ ನಾಟಕ ಕಲಾವಿದ ಡಾ.ಹೆಚ್.ಕೆ.ರಾಮನಾಥ್ ಮಕ್ಕಳಿಗೆ ಪದ ಕೋಶ ಸಮಯ ಮೀಸಲಾಗಿರುತ್ತದೆ.
ಮಾಧ್ಯಮಗಳ ಆಕರ್ಷಣೆಯ ಈ ಕಾಲದಲ್ಲಿ ಕಥೆ ಹೇಳುವ ಹಾಗೂ ಕೇಳುವ ಇಂತಹ ಪ್ರಯೋಗಕ್ಕೆ ನಾವು ಅಭಿನಂದಿಸಲೇಬೇಕು.
ಕಥೆ ಕೇಳಲು ಉಚಿತ ಪ್ರವೇಶ. ಹಾಗೇಯ ಅತಿಥಿಗಳಿಗೂ ಕೂಡ ಯಾವುದೇ ಸಂಭಾವನೆ ಕೂಡ ಪಡೆಯುವುದಿಲ್ಲ.
ನಿಮ್ಮ ನೆಲೆಯಲ್ಲಿ ಇಂತಹ ಮಾದರಿ ಪ್ರಯೋಗಕ್ಕೆ ಮುಂದಾದರೆ ಮೊಬೈಲ್ ಸಂಖ್ಯೆ 9972829130 ಇದನ್ನು ಸಂಪರ್ಕಿಸಿರಿ.
ಚಿತ್ರ,ಮಾಹಿತಿ : ಗೋವಿಂದ ಕುಲಕರ್ಣಿ
More Stories
ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ