January 29, 2026

Newsnap Kannada

The World at your finger tips!

mys

ಸಿಎಂ ಪತ್ನಿ ಜಮೀನು ನಮ್ಮದು: ಮೂಲ ಮಾಲೀಕರಿಂದ DCಗೆ ದೂರು

Spread the love

ಮೈಸೂರು: ಮುಡಾ ಹಗರಣದ ಅಕ್ರಮದ ಬೆನ್ನಲ್ಲೇ ಸಿಎಂ ಸಿದ್ಧರಾಮಯ್ಯ ಅವರ ಪತ್ನಿ ಪಾರ್ವತಿಗೆ ಸೇರಿದ ಜಮೀನು ನಮ್ಮದು. ಮೋಸದಿಂದ ಜಮೀನನ್ನು ತಮ್ಮ ಚಿಕ್ಕಪ್ಪ ಮಾರಾಟ ಮಾಡಿದ್ದಾರೆ ಅಂತ ಮೂಲ ಜಮೀನಿನ ಮಾಲೀಕರಿಂದ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ.

ಇಂದು ಮೈಸೂರಿನ ಜಿಲ್ಲಾಧಿಕಾರಿಯವರ ಕಚೇರಿಗೆ ಭೇಟಿ ನೀಡಿದ ಮೂಲ ಮಾಲೀಕರಾದ ಜವರಯ್ಯ ಅವರ ಕುಟುಂಬಸ್ಥರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿರವರಿಗೆ ಸೇರಿದ ಎನ್ನಲಾದ ದೇವನೂರು ಜಮೀನು ತಮ್ಮದು. ನಮ್ಮ ಚಿಕ್ಕಪ್ಪ ಮೋಸದಿಂದ ಸಿಎಂ ಸಿದ್ಧರಾಮಯ್ಯ ಅವರ ಪತ್ನಿಗೆ ಮಾರಾಟ ಮಾಡಿದ್ದಾರೆ ಅಂತ ದೂರು ನೀಡಿದ್ದಾರೆ.

ಇದನ್ನು ಓದಿ –ಪ್ರಪಂಚದ ಅತ್ಯಂತ ಶಕ್ತಿಶಾಲಿ ಹಣ್ಣು : ಕಿವಿ

ಇನ್ನೂ ಮೂಲ ಮಾಲೀಕರಾದ ಜವರ ರವರ ಕುಟುಂಬಸ್ಥರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಅವರ ಕುಟುಂಬಸ್ಥರಿಗೆ ಆಗಿರು ಅನ್ಯಾಯವನ್ನು ಸರಿಪಡಿಸಿ ನ್ಯಾಯ ಒದಗಿಸುವಂತೆ ಮಾಜಿ ಸಚಿವರ ಎನ್. ಮಹೇಶ್ ರವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದೆ. ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾಧ್ಯಕ್ಷ ಎಲ್. ನಾಗೇಂದ್ರ, ಶಾಸಕ ಶ್ರೀವತ್ಸ ಮುಂತಾದವರು ಉಪಸ್ಥಿತರಿದ್ದರು.

error: Content is protected !!