January 11, 2025

Newsnap Kannada

The World at your finger tips!

YADIYURAPPA1

ಯಡಿಯೂರಪ್ಪಗೆ ಸಿಎಂ ಸ್ಥಾನ ಅಭಾದಿತ : ಅವಧಿ ಪೂರ್ಣ ಬಿ ಎಸ್ ವೈ ಸಿಎಂ – ಹೈಕಮಾಂಡ್ ಶ್ರೀರಕ್ಷೆ

Spread the love

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಯಾವುದೇ ಕಾರಣಕ್ಕೂ
ಸಿ ಎಂ ಸ್ಥಾನ ದಿಂದ ಬದಲಾಯಿಸುವ ಪ್ರಶ್ನೆಯೇ ಇಲ್ಲ ಮತ್ತು ಮುಂದಿನ ಚುನಾವಣೆಯನ್ನೂ ಕೂಡ ಅವರ ನಾಯಕತ್ವ ದಲ್ಲೇ ಎದುರಿಸಲಾಗುವುದು ಎಂಬ ಸಂದೇಶವನ್ನು ಬಿಜೆಪಿ ಹೈಕಮಾಂಡ್ ರವಾನೆ ಮಾಡಿದೆ.

ಈ ಸಂದೇಶದಿಂದ ಯಡಿಯೂರಪ್ಪ ಮತ್ತಷ್ಟು ಗಟ್ಟಿಯಾಗಿದ್ದಾರೆ. ಬಿಜೆಪಿ ಪಾಳೆಯದಲ್ಲಿದ್ದ ವಿರೋಧಿಗಳಿಗೆ ಚುರುಕು ಮುಟ್ಟಿದೆ ಮತ್ತು ಯಡಿಯೂರಪ್ಪನವರ ಸ್ಥಾನ ಬದಲಾವಣೆಗೆ ಕಾದು ಕುಳಿತವರಿಗೆ ನಿರಾಶೆ ಮೂಡಿದೆ.

ಇತ್ತೀಚಿಗೆ ಬೆಳಗಾವಿಯಲ್ಲಿ ನಡೆದ ರಾಜ್ಯ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ , ರಾಜ್ಯದ ವಿದ್ಯಮಾನಗಳು , ಬಿಜೆಪಿಯಲ್ಲಿ ಒಳ ಜಗಳ, ಯಡಿಯೂರಪ್ಪ ನವರ ಅಡಳಿತ ಮತ್ತು ಅವರ ನಾಯಕತ್ವ ಗಟ್ಟಿತನವೂ ಸೇರಿದಂತೆ ಅನೇಕ ಪ್ರಮುಖ ವಿಚಾರಗಳ ಬಗ್ಗೆ ಸಕಾರಾತ್ಮಕ ವಾಗಿ ಬಿಜೆಪಿ ಹೈಕಮಾಂಡ್ ಗೆ ಸ್ಪಷ್ಟವಾಗಿರುವ ವರದಿ ನೀಡಿದ ನಂತರ ಹೈಕಮಾಂಡ್ ಯಡಿಯೂರಪ್ಪನವರ ಕೈ ಬಲಪಡಿಸಿ, ಸಮರ್ಥ ಅಡಳಿತ ನಡೆಸುವಂತೆ ಸೂಚಿಸಿದೆ.

ರಾಜ್ಯ ದಲ್ಲಿ ಪ್ರತಿಭಟನೆಗಳು, ಗಲಾಟೆಗಳಿಗೆ ಅವಕಾಶ ನೀಡದಂತೆ ಬಿಜೆಪಿ ನಾಯಕರಿಗೆ ತಾಕೀತು ಮಾಡಿರುವ ಹೈಕಮಾಂಡ್ ಈ ಅವಧಿ ಮುಗಿಯುವ ತನಕವೂ ಯಡಿಯೂರಪ್ಪ ಮುಖ್ಯಮಂತ್ರಿಯಾಗಿರುತ್ತಾರೆ ಮಾತ್ರವಲ್ಲ ಮುಂದಿನ ಚುನಾವಣೆಗೂ ಅವರ ನೇತ್ವದಲ್ಲೇ ಚುನಾವಣೆ ಎದುರಿಸಲಾಗುವುದು ಎಂದು ಹೈಕಮಾಂಡ್ ಹೇಳಿದೆ.

ಯಡಿಯೂರಪ್ಪ ಆಡಳಿತಕ್ಕೆ ಫುಲ್ ಮಾಕ್ಸ್೯ ನೀಡಲಾಗಿದೆ. ಅವರ ನಾಯಕತ್ವ ವನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡುವುದಿಲ್ಲ ಎಂದು ಹೇಳಿರುವ ಹೈಕಮಾಂಡ್ ನಿರ್ಧಾರ ಯಡಿಯೂರಪ್ಪ ನವರಿಗೆ ಆನೆ ಬಲಬಂದಂತಾಗಿದೆ.

ಹೈಕಮಾಂಡ್ ಈ ನಿರ್ಧಾರದಿಂದಾಗಿ ಸಿಎಂ ಯಡಿಯೂರಪ್ಪ ತುಂಬಾ ಸೇಫ್ ಆದಂತಾಗಿದೆ. ಸ್ಥಾನ ಬದಲಾವಣೆಯ ಆತಂಕ ಮಾಯವಾಗಿದೆ

Copyright © All rights reserved Newsnap | Newsever by AF themes.
error: Content is protected !!