Main News

ಸಿಎಂ ಯಡಿಯೂರಪ್ಪ,ಶಾಸಕ ಯತ್ನಾಳ್ ಜುಗಲ್ ‌ಬಂದಿ – ಕಮಿಷನ್ ಏಜೆಂಟ್ ರಿಗೆ ಕಡಿವಾಣ ಹಾಕಿ

ಶಿವಮೊಗ್ಗದಲ್ಲಿ ನಡೆದ ಕಾರ್ಯಕಾರಣಿ ಸಮಿತಿ ಸಭೆಯ ಕೊನೆ ದಿನವಾದ ಸೋಮವಾರ ಸಿಎಂ ಯಡಿಯೂರಪ್ಪ, ಬಿಜೆಪಿ ಶಾಸಕರ ಅಹವಾಲು ಆಲಿಸಲು ಅವಕಾಶ ನೀಡಿದ್ದರು.

ಬಹುತೇಕ ಬಿಜೆಪಿ ಶಾಸಕರು ಸಿಎಂ ಆಡಳಿತ ವೈಖರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ವಿಜಯಪುರ ಶಾಸಕ ಬಸವಗೌಡ ಪಾಟೀಲ್ ಯತ್ನಾಳ್ ಉತ್ತರ ಕರ್ನಾಟಕ ಭಾಷೆಯನ್ನೇ ಬಳಕೆ ಮಾಡಿಕೊಂಡು ಮುಖ್ಯಮಂತ್ರಿ ಯಡಿಯೂರಪ್ಪ ನವರ ವಿರುದ್ಧದ ಅಸಮಾಧಾನ ವನ್ನು ಬಹಿರಂಗವಾಗಿಯೇ ಏರು ದನಿಯಲ್ಲೇ ಹೊರ ಹಾಕಿದ್ದು ಸಭೆಯಲ್ಲಿ ಉಪಸ್ಥಿತರಿದ್ದ ಬಿಜೆಪಿ ನಾಯಕರಿಗೆ ಮುಜುಗುರ ತಂದಿತು.

ಸಭೆಯಲ್ಲಿ ಯತ್ನಾಳ್ ಹೇಳಿದ ಖಡಕ್ ಮಾತುಗಳು ಹೀಗಿವೆ. :

  • ಇಂದಿನ ಸರ್ಕಾರದಲ್ಲಿ ಕೌಟುಂಬಿಕ ಆಳ್ವಿಕೆಯ ಇದೆ. ವಿಜಯೇಂದ್ರನ ನಿಕಟ ಸಂಪರ್ಕದಲ್ಲಿರುವಂತಹ ಕಮೀಷನ್ ಏಜೆಂಟರು ಸಮಾನಾಂತರ ಸರ್ಕಾರವನ್ನು ನಡೆಸುತ್ತಿದ್ದಾರೆ
  • ಈ ಹಂತದಲ್ಲಿ ಯತ್ನಾಳ್ ಗೆ ಸಿಎಂ ಬುದ್ದಿ ಹೇಳಲು ಬಯಸಿದಾಗ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಯತ್ನಕ್ಕೆ ಯತ್ನಾಳ್ ತಿರುಗುಬಾಣ ನೀಡಿದರು.
  • ತಮ್ಮ ಮಗನನ್ನು ರಾಜ್ಯ ರಾಜಕೀಯದ ಮುಂಚೂಣಿಗೆ ತರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಯತ್ನ ಕುರಿತು ಯತ್ನಾಳ್ ಎಚ್ಚರಿಕೆ ನೀಡಿದರು. ” ಬಿಜೆಪಿ, ವಾಜಪೇಯಿ ಹಾಗೂ ಲಾಲ್ ಕೃಷ್ಣ ಆದ್ವಾನಿ, ನರೇಂದ್ರ ಮೋದಿ ಯವರ ತತ್ವಗಳನ್ನು ಯಡಿಯೂರಪ್ಪ ದುರ್ಬಲಗೊಳಿಸುತ್ತಿದ್ದಾರೆ ಎಂದು ಗುಡುಗಿದರು.
  • ತಮ್ಮ ಮಗ ವಿಜೇಂದ್ರ ಹೆಸರನ್ನು ಪ್ರಸ್ತಾಪಿಸಲು ಬಂದ ಯತ್ನಾಳ್ ಅವರ ವಿರುದ್ಧ ಆಕ್ಷೇಪ ಎತ್ತಲು ಪ್ರಯತ್ನಿಸಿದ ಯಡಿಯೂರಪ್ಪ ಅವರಿಗೆ ತಿರುಗೇಟು ನೀಡುತ್ತಾ ಯತ್ನಾಳ್ ತಮ್ಮ ಆರೋಪವನ್ನು ಸಮರ್ಥಿಸಿಕೊಂಡರು.
  • ಈ ಹಂತದಲ್ಲಿ ಸಿಡಿಮಿಡಿಗೊಂಡ ಮುಖ್ಯಮಂತ್ರಿಗಳು, ಯತ್ನಾಳ್ ಅವರನ್ನು ಸಭೆಯಿಂದ ಹೊರಗೆ ಹೋಗುವಂತೆ ಸೂಚಿಸಿದರು.
  • ನಾನು , ಬಿಜೆಪಿ ಆಹ್ವಾನದ ಮೇರೆಗೆ ಓರ್ವ ಎಂಎಲ್‌ಎ ಆಗಿ ಸಭೆಗೆ ಹಾಜರಾಗಿದ್ದೇನೆ,. ಯಡಿಯೂರಪ್ಪ ಅವರ ಮನೆಗೆ ಬಂದಿಲ್ಲ ಎಂದು ಯತ್ನಾಳ್ ಖಡಕ್ ಆಗಿ ಹೇಳಿದರು. ಆಗ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕಟೀಲ್ ಮೂಖ ಪ್ರೇಕ್ಷರಾಗಿದ್ದರು.
  • ಯತ್ನಾಳ್, ವಿಜೇಂದ್ರ ಹೆಸರನ್ನು ಪ್ರಸ್ತಾಪಿಸಿದಾಗ ರೇಣುಕಾಚಾರ್ಯ ಮುಖ್ಯಮಂತ್ರಿಗಳ ಪರವಾಗಿ ಮಾತನಾಡಲು ಎದ್ದು ನಿಂತರು. ಇದಕ್ಕೆ ಬಹುತೇಕ ಶಾಸಕರು ವಿರೋಧಿಸಿ, ಯತ್ನಾಳ್ ಅನ್ನು ಬೆಂಬಲಿಸಿ, ರೇಣುಕಾಚಾರ್ಯರನ್ನು ಕುಳಿತುಕೊಳ್ಳುವಂತೆ ಸೂಚಿಸಿದರು.
  • ಮುಖ್ಯಮಂತ್ರಿಗಳ ಆಡಳಿತದ ಬಗ್ಗೆ ಬಹುಪಾಲು ಶಾಸಕರುಗಳು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಆಡಳಿತದಲ್ಲಿ ಯಡಿಯೂರಪ್ಪ ನವರ ಮಗ ವಿಜೇಂದ್ರನ ಮಧ್ಯಸ್ಥಿಕೆಯನ್ನು ಬಲವಾಗಿ ಖಂಡಿಸಿದರು.
  • ಒಂದು ಹಂತದಲ್ಲಿ ಯತ್ನಾಳ್, “ನಾನು ಬೆನ್ನಿಗೆ ಚೂರಿ ಹಾಕುವವರ ಪೈಕಿ ಅಲ್ಲ. ನಾನೂ ಕೂಡ ನಿಮ್ಮಂತೆಯೇ ಪಕ್ಷಕ್ಕಾಗಿ ದುಡಿದಿದ್ದೇನೆ, ಪಕ್ಷ ನಿರ್ಮಾಣದಲ್ಲಿ ನನ್ನದೂ ಕೊಡುಗೆಯಿದೆ, ನಿಮ್ಮನ್ನು ಪಕ್ಷಕ್ಕೆ ಪುನಃ ತೆಗೆದುಕೊಳ್ಳುವಂತೆ ಅರುಣ್ ಜೇಟ್ಲಿ ಮನವೊಲಿಸುವವರಲ್ಲಿ ನಾನೂ ಇದ್ದೆ,” ಎಂದು ಹಳೇ ದಿನಗಳನ್ನು ಯತ್ನಾಳ್ ನೆನಪಿಸಿದರು. ಹೀಗಾಗಿ
  • ನಾನು ಎಂದಿಗೂ ಸಚಿವಾಕಾಂಕ್ಷಿ ಯಾಗಿರಲಿಲ್ಲ. ಸಿದ್ದಗಂಗಾ ಮಠಕ್ಕೆ ತೆರಳುವಾಗ ಉತ್ತಮ ಸರ್ಕಾರ ನೀಡುವಂತೆ ನಿಮ್ಮನ್ನು ಕೇಳಿಕೊಂಡಿದ್ದೆ, ಹಾಗೂ ಲಿಂಗಾಯತ ಸಮಾಜದ ಹಿರಿಯ ನಾಯಕರಾದ ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ಹಾಗೂ ಜೆ.ಹೆಚ್.ಪಟೇಲ್ ಅವರಂತಹ ಪರಂಪರೆಯನ್ನು ಮುಂದುವರೆಸುವಂತೆ ಕೇಳಿಕೊಂಡಿದ್ದೆ,” ಎಂದು ಯತ್ನಾಳ್ ಯಡಿಯೂರಪ್ಪ ನವರಿಗೆ ಪದೇ ಪದೇ ತಿರುಗೇಟು ನೀಡಿದರು.
Team Newsnap
Leave a Comment
Share
Published by
Team Newsnap

Recent Posts

ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಬೆಳೆಯನ್ನು ಬೃಹತ್ ಉದ್ಯಮವಾಗಿ ಬೆಳೆಯಾಗುತ್ತಿದೆ

ಮೈಸೂರು: ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತಿದ್ದು, ರೇಷ್ಮೆ ಉದ್ಯಮವು ಬೃಹತ್ ಉದ್ಯಮವಾಗಿ ಬೆಳೆದಿದ್ದು, ದೇಶದ ಜಿ ಡಿಪಿ… Read More

September 20, 2024

BMTC ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ : ಪ್ರಾಣಾಪಾಯದಿಂದ ಪಾರು

ಬೆಂಗಳೂರು : BMTC ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು ,ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಚಾಲಕ… Read More

September 20, 2024

ಲೋಕಾ ಬಲೆಗೆ ಬಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ಮಂಗಳೂರು : ಕಾಮಗಾರಿಯ ಬಿಲ್ ಪಾವತಿಗಾಗಿ ಲಂಚ ಸ್ವೀಕರಿಸುತ್ತಿರುವಾಗಲೇ ಪಟ್ಟಣ ಪಂಚಾಯತ್ ಜೂನಿಯರ್ ಇಂಜಿನಿಯರ್ ಹಾಗೂ ಮುಖ್ಯ ಅಧಿಕಾರಿ ಲೋಕಾಯುಕ್ತ… Read More

September 20, 2024

ಕರುಳಿನ ಆರೋಗ್ಯ ಚೇತರಿಕೆಗೆ ಕರಿ ಎಳ್ಳು ರಾಮಬಾಣ !

ಎಳ್ಳು ನೋಡಲು ಪುಟ್ಟದಾಗಿದ್ದು ಕಟುವಾದ ಯಾವ ವಾಸನೆಯೂ ಇಲ್ಲದ, ತನ್ನೊಡನೆ ಬೆರೆತ ಇತರ ವಸ್ತುಗಳ ಪರಿಮಳವನ್ನು ತನ್ನೊಡನೆ ಹೀರಿಕೊಳ್ಳುವ ವಿಶೇಷಗುಣ… Read More

September 20, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಸೆಪ್ಟೆಂಬರ್ 18 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 68,240 ರೂಪಾಯಿ ದಾಖಲಾಗಿದೆ. 24… Read More

September 20, 2024

ಅತ್ಯಾಚಾರ ಆರೋಪ : ಶಾಸಕ ಮುನಿರತ್ನ ಬಂಧನ

ಬೆಂಗಳೂರು: ಇಂದು ಆರ್.ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ಕಗ್ಗಲಿಪುರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಇಂದಿನಿಂದ… Read More

September 20, 2024