ಶಿವಮೊಗ್ಗದಲ್ಲಿ ನಡೆದ ಕಾರ್ಯಕಾರಣಿ ಸಮಿತಿ ಸಭೆಯ ಕೊನೆ ದಿನವಾದ ಸೋಮವಾರ ಸಿಎಂ ಯಡಿಯೂರಪ್ಪ, ಬಿಜೆಪಿ ಶಾಸಕರ ಅಹವಾಲು ಆಲಿಸಲು ಅವಕಾಶ ನೀಡಿದ್ದರು.
ಬಹುತೇಕ ಬಿಜೆಪಿ ಶಾಸಕರು ಸಿಎಂ ಆಡಳಿತ ವೈಖರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ವಿಜಯಪುರ ಶಾಸಕ ಬಸವಗೌಡ ಪಾಟೀಲ್ ಯತ್ನಾಳ್ ಉತ್ತರ ಕರ್ನಾಟಕ ಭಾಷೆಯನ್ನೇ ಬಳಕೆ ಮಾಡಿಕೊಂಡು ಮುಖ್ಯಮಂತ್ರಿ ಯಡಿಯೂರಪ್ಪ ನವರ ವಿರುದ್ಧದ ಅಸಮಾಧಾನ ವನ್ನು ಬಹಿರಂಗವಾಗಿಯೇ ಏರು ದನಿಯಲ್ಲೇ ಹೊರ ಹಾಕಿದ್ದು ಸಭೆಯಲ್ಲಿ ಉಪಸ್ಥಿತರಿದ್ದ ಬಿಜೆಪಿ ನಾಯಕರಿಗೆ ಮುಜುಗುರ ತಂದಿತು.
ಸಭೆಯಲ್ಲಿ ಯತ್ನಾಳ್ ಹೇಳಿದ ಖಡಕ್ ಮಾತುಗಳು ಹೀಗಿವೆ. :
- ಇಂದಿನ ಸರ್ಕಾರದಲ್ಲಿ ಕೌಟುಂಬಿಕ ಆಳ್ವಿಕೆಯ ಇದೆ. ವಿಜಯೇಂದ್ರನ ನಿಕಟ ಸಂಪರ್ಕದಲ್ಲಿರುವಂತಹ ಕಮೀಷನ್ ಏಜೆಂಟರು ಸಮಾನಾಂತರ ಸರ್ಕಾರವನ್ನು ನಡೆಸುತ್ತಿದ್ದಾರೆ
- ಈ ಹಂತದಲ್ಲಿ ಯತ್ನಾಳ್ ಗೆ ಸಿಎಂ ಬುದ್ದಿ ಹೇಳಲು ಬಯಸಿದಾಗ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಯತ್ನಕ್ಕೆ ಯತ್ನಾಳ್ ತಿರುಗುಬಾಣ ನೀಡಿದರು.
- ತಮ್ಮ ಮಗನನ್ನು ರಾಜ್ಯ ರಾಜಕೀಯದ ಮುಂಚೂಣಿಗೆ ತರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಯತ್ನ ಕುರಿತು ಯತ್ನಾಳ್ ಎಚ್ಚರಿಕೆ ನೀಡಿದರು. ” ಬಿಜೆಪಿ, ವಾಜಪೇಯಿ ಹಾಗೂ ಲಾಲ್ ಕೃಷ್ಣ ಆದ್ವಾನಿ, ನರೇಂದ್ರ ಮೋದಿ ಯವರ ತತ್ವಗಳನ್ನು ಯಡಿಯೂರಪ್ಪ ದುರ್ಬಲಗೊಳಿಸುತ್ತಿದ್ದಾರೆ ಎಂದು ಗುಡುಗಿದರು.
- ತಮ್ಮ ಮಗ ವಿಜೇಂದ್ರ ಹೆಸರನ್ನು ಪ್ರಸ್ತಾಪಿಸಲು ಬಂದ ಯತ್ನಾಳ್ ಅವರ ವಿರುದ್ಧ ಆಕ್ಷೇಪ ಎತ್ತಲು ಪ್ರಯತ್ನಿಸಿದ ಯಡಿಯೂರಪ್ಪ ಅವರಿಗೆ ತಿರುಗೇಟು ನೀಡುತ್ತಾ ಯತ್ನಾಳ್ ತಮ್ಮ ಆರೋಪವನ್ನು ಸಮರ್ಥಿಸಿಕೊಂಡರು.
- ಈ ಹಂತದಲ್ಲಿ ಸಿಡಿಮಿಡಿಗೊಂಡ ಮುಖ್ಯಮಂತ್ರಿಗಳು, ಯತ್ನಾಳ್ ಅವರನ್ನು ಸಭೆಯಿಂದ ಹೊರಗೆ ಹೋಗುವಂತೆ ಸೂಚಿಸಿದರು.
- ನಾನು , ಬಿಜೆಪಿ ಆಹ್ವಾನದ ಮೇರೆಗೆ ಓರ್ವ ಎಂಎಲ್‌ಎ ಆಗಿ ಸಭೆಗೆ ಹಾಜರಾಗಿದ್ದೇನೆ,. ಯಡಿಯೂರಪ್ಪ ಅವರ ಮನೆಗೆ ಬಂದಿಲ್ಲ ಎಂದು ಯತ್ನಾಳ್ ಖಡಕ್ ಆಗಿ ಹೇಳಿದರು. ಆಗ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕಟೀಲ್ ಮೂಖ ಪ್ರೇಕ್ಷರಾಗಿದ್ದರು.
- ಯತ್ನಾಳ್, ವಿಜೇಂದ್ರ ಹೆಸರನ್ನು ಪ್ರಸ್ತಾಪಿಸಿದಾಗ ರೇಣುಕಾಚಾರ್ಯ ಮುಖ್ಯಮಂತ್ರಿಗಳ ಪರವಾಗಿ ಮಾತನಾಡಲು ಎದ್ದು ನಿಂತರು. ಇದಕ್ಕೆ ಬಹುತೇಕ ಶಾಸಕರು ವಿರೋಧಿಸಿ, ಯತ್ನಾಳ್ ಅನ್ನು ಬೆಂಬಲಿಸಿ, ರೇಣುಕಾಚಾರ್ಯರನ್ನು ಕುಳಿತುಕೊಳ್ಳುವಂತೆ ಸೂಚಿಸಿದರು.
- ಮುಖ್ಯಮಂತ್ರಿಗಳ ಆಡಳಿತದ ಬಗ್ಗೆ ಬಹುಪಾಲು ಶಾಸಕರುಗಳು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಆಡಳಿತದಲ್ಲಿ ಯಡಿಯೂರಪ್ಪ ನವರ ಮಗ ವಿಜೇಂದ್ರನ ಮಧ್ಯಸ್ಥಿಕೆಯನ್ನು ಬಲವಾಗಿ ಖಂಡಿಸಿದರು.
- ಒಂದು ಹಂತದಲ್ಲಿ ಯತ್ನಾಳ್, “ನಾನು ಬೆನ್ನಿಗೆ ಚೂರಿ ಹಾಕುವವರ ಪೈಕಿ ಅಲ್ಲ. ನಾನೂ ಕೂಡ ನಿಮ್ಮಂತೆಯೇ ಪಕ್ಷಕ್ಕಾಗಿ ದುಡಿದಿದ್ದೇನೆ, ಪಕ್ಷ ನಿರ್ಮಾಣದಲ್ಲಿ ನನ್ನದೂ ಕೊಡುಗೆಯಿದೆ, ನಿಮ್ಮನ್ನು ಪಕ್ಷಕ್ಕೆ ಪುನಃ ತೆಗೆದುಕೊಳ್ಳುವಂತೆ ಅರುಣ್ ಜೇಟ್ಲಿ ಮನವೊಲಿಸುವವರಲ್ಲಿ ನಾನೂ ಇದ್ದೆ,” ಎಂದು ಹಳೇ ದಿನಗಳನ್ನು ಯತ್ನಾಳ್ ನೆನಪಿಸಿದರು. ಹೀಗಾಗಿ
- ನಾನು ಎಂದಿಗೂ ಸಚಿವಾಕಾಂಕ್ಷಿ ಯಾಗಿರಲಿಲ್ಲ. ಸಿದ್ದಗಂಗಾ ಮಠಕ್ಕೆ ತೆರಳುವಾಗ ಉತ್ತಮ ಸರ್ಕಾರ ನೀಡುವಂತೆ ನಿಮ್ಮನ್ನು ಕೇಳಿಕೊಂಡಿದ್ದೆ, ಹಾಗೂ ಲಿಂಗಾಯತ ಸಮಾಜದ ಹಿರಿಯ ನಾಯಕರಾದ ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ಹಾಗೂ ಜೆ.ಹೆಚ್.ಪಟೇಲ್ ಅವರಂತಹ ಪರಂಪರೆಯನ್ನು ಮುಂದುವರೆಸುವಂತೆ ಕೇಳಿಕೊಂಡಿದ್ದೆ,” ಎಂದು ಯತ್ನಾಳ್ ಯಡಿಯೂರಪ್ಪ ನವರಿಗೆ ಪದೇ ಪದೇ ತಿರುಗೇಟು ನೀಡಿದರು.
- ನ.20ರಂದು ಕರ್ನಾಟಕದಲ್ಲಿ ಬಾರ್ ಬಂದ್
- ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
- ಟಿಪ್ಪು ಸುಲ್ತಾನ್ನ ಖಡ್ಗ 3.4 ಕೋಟಿಗೆ ಹರಾಜು
- ಮುಖ್ಯಮಂತ್ರಿ ವಿರುದ್ಧ ಅಪಪ್ರಚಾರ ಆರೋಪ: ಸ್ನೇಹಮಯಿ ಕೃಷ್ಣ ವಿರುದ್ಧ ಎಫ್ಐಆರ್
- ₹5.50 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ, ಇಬ್ಬರು ಬಂಧನ
More Stories
ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
ಮುಖ್ಯಮಂತ್ರಿ ವಿರುದ್ಧ ಅಪಪ್ರಚಾರ ಆರೋಪ: ಸ್ನೇಹಮಯಿ ಕೃಷ್ಣ ವಿರುದ್ಧ ಎಫ್ಐಆರ್
₹5.50 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ, ಇಬ್ಬರು ಬಂಧನ