ಕೊರೋನಾ ಸುನಾಮಿಗೆ ಕಡಿವಾಣ ಹಾಕಲು ರಾಜ್ಯಾದ್ಯಂತ ನಾಳೆ ಸಂಜೆಯಿಂದ 15 ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಸಂಪುಟದ ಸಭೆಯ ನಂತರ ಸರ್ಕಾರದ ನಿರ್ಧಾರವನ್ನು ಸುದ್ದಿಗಾರರಿಗೆ ತಿಳಿಸಿದ ಸಿಎಂ ಯಡಿಯೂರಪ್ಪ, ಕೆಲವು ಮಾಹಿತಿ ಹಂಚಿಕೊಂಡರು. ಆದರೆ ಲಾಕ್ ಡೌನ್ ಎಂಬ ಪದ ಬಳಕೆ ಮಾಡದೇ 14 ದಿನಗಳ ಕಾಲ ಬಿಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪ್ರಮುಖ ಅಂಶಗಳು :
ಸರ್ಕಾರಿ ಆಸ್ಪತ್ರೆ ಯಲ್ಲಿ 18 – 45 ವರ್ಷದೊಳಗಿನವರಿಗೆ ಉಚಿತ ಲಸಿಕೆ ನಿರ್ಧಾರ
ನಾಳೆ ರಾತ್ರಿಯಿಂದ 15 ದಿನಗಳ ಕಾಲ ಕರ್ನಾಟಕ ಸಂಪೂರ್ಣ ಲಾಕ್ ಡೌನ್
ಕೃಷಿ, ಕಟ್ಟಡ ನಿರ್ಮಾಣಕ್ಕೆ ಹಾಗೂ ಉತ್ಪಾದನಾ ವಲಯಕ್ಕೆ ಲಾಕ್ ಡೌನ್ ನಿಂದ ವಿನಾಯಿತಿ. ಗಾರ್ಮೆಂಟ್ ಬಂದ್
ರಾತ್ರಿ 9 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಕಫ್ಯೂ ೯ ಹಾಕಲಾಗಿದೆ.
ಸಾರಿಗೆ ಬಸ್ ಇರೋದಿಲ್ಲ ಆದರೆ ಗೂಡ್ಸ್ ವಾಹನಗಳ ಸಂಚಾರ ಇರುತ್ತದೆ.
ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ. ಅವಕಾಶ.
ಅಟೋ, ಟ್ಯಾಕ್ಸಿ, ಮೆಟ್ರೋ, ಬಸ್ ಸೇರಿದಂತೆ ಎಲ್ಲವೂ ಸ್ಥಗಿತ.
ರಾಜ್ಯದಲ್ಲಿ ಮುಂದೆ ನಡೆಯಬೇಕಿದ್ದ ಕಸಾಪ ಸೇರಿದಂತೆ ಎಲ್ಲಾ ಚುನಾವಣೆಗಳು ಆರು ತಿಂಗಳು ಕಾಲ ಮುಂದೂಡಿಕೆ
ರಾಜ್ಯದಲ್ಲಿ ಮಧ್ಯ ಖರೀದಿಗೆ ಅವಕಾಶ. ಆದರೆ ಪಾರ್ಸಲ್ ತೆಗೆದುಕೊಂಡು ಹೋಗಬಹುದು.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಗಳಿಂದ ಸಮಗ್ರ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಲಿದ್ದಾರೆ.
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ