January 4, 2025

Newsnap Kannada

The World at your finger tips!

bommayi

‘ವಿಶ್ವಾಸ ಇಲ್ಲ ಅಂದ್ರೆ ತೆಗೆದುಕೊಂಡು ಹೋಗು’ ಪ್ರತಾಪ್ ಸಿಂಹಗೆ ಸಿಎಂ ಗುಡುಗು

Spread the love

ಮೈಸೂರು ದಸರಾ ಹಿನ್ನೆಲೆಯಲ್ಲಿ ನಿನ್ನೆ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು.

ಸುದ್ದಿಗೋಷ್ಟಿ ವೇಳೆ ಸಂಸದ ಪ್ರತಾಪ್ ಸಿಂಹ ಮುಜುಗರಕ್ಕೆ ಒಳಗಾದ ಪ್ರಸಂಗವೂ ಜರುಗಿತು. ಇದನ್ನು ಓದಿ – ಕೇರಳದಲ್ಲಿ ನೀಟ್ ಪರೀಕ್ಷೆ ಬರೆಯುವ ವೇಳೆ ಅನುಭವಿಸಿದ ಯಾತನೆ : ಬಿಚ್ಚಿಟ್ಟ ವಿದ್ಯಾರ್ಥಿನಿ

ಕೊಡಗು ಹಾಗೂ ಮೈಸೂರು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ, ತಮ್ಮ ಕ್ಷೇತ್ರದ ಅಭಿವೃದ್ಧಿಯ ಅನುಮೋದನೆ ಪತ್ರಕ್ಕೆ ಸಹಿ ಪಡೆಯಲು ಸಿಎಂ ಬಸವರಾಜ್​ ಬೊಮ್ಮಾಯಿ ಬಳಿ ಬಂದಿದ್ದರು.

ಸಿಎಂ ಅನುಮೋದನೆ ಪತ್ರಕ್ಕೆ ಸಹಿ ಪಡೆದ ಬಳಿಕ ಅದೇ ಪತ್ರ ಹಾಗೂ ಸಿಎಂ‌ ಜೊತೆಗೆ ಫೋಟೋ ತೆಗೆಸಿಕೊಳ್ಳಲು ಮುಂದಾಗಿದ್ದಾರೆ. ಇದರಿಂದ ಸಿಎಂ ಬೊಮ್ಮಾಯಿ‌ಗೆ ಇರುಸು-ಮುರಿಸು ಉಂಟಾಗಿದೆ.

ಈ ವೇಳೆ ಕೋಪಿಸಿಕೊಂಡ ಸಿಎಂ, ನನ್ನ ಮೇಲೆ ನಂಬಿಕೆ ಇಲ್ವಾ? ನಂಬಿಕೆ ಇಲ್ಲ ಅಂದರೆ ತೆಗೆದುಕೊಂಡು ಹೋಗು ಎಂದು ಹೇಳಿಬಿಟ್ಟರು. ಆಗ ಪ್ರತಾಪ್ ಸಿಂಹ ಸಮಜಾಯಿಸಿ ನೀಡಲು ಬಂದಾಗ ಮತ್ತೆ ಸಿಎಂ ಬೇಸರ ವ್ಯಕ್ತಪಡಿಸಿ, ಅತೀ ಬುದ್ಧಿವಂತರ ಜೊತೆ ಆಡಳಿತ ಮಾಡುವುದು ಕಷ್ಟ ಎಂದು ಮುಖ‌ ತಿರುಗಿಸಿಕೊಂಡರು.

ಕೇರಳದಲ್ಲಿ ನೀಟ್ ಪರೀಕ್ಷೆ ಬರೆಯುವ ವೇಳೆ ಅನುಭವಿಸಿದ ಯಾತನೆ : ಬಿಚ್ಚಿಟ್ಟ ವಿದ್ಯಾರ್ಥಿನಿ

ಸೋಮವಾರ (ಜುಲೈ 18) ದೇಶಾದ್ಯಂತ ನೀಟ್​ ಪರೀಕ್ಷೆ ನಡೆದಿದೆ. ಕೇರಳದ ಕೊಲ್ಲಂನಲ್ಲಿರುವ ಮಾರ್ ಥೋಮಾ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ ಸಂಸ್ಥೆಯ ಪರೀಕ್ಷಾ ಕೇಂದ್ರದಲ್ಲಿ ಅಮಾನವೀಯತೆ ಎದುರಿಸಿದ ವಿದ್ಯಾರ್ಥಿನಿಯೊಬ್ಬಳು ವಿವರಣೆ ನೀಡಿದ್ದಾಳೆ.

ಕೊಲ್ಲಂ ಮೂಲದ 17 ವರ್ಷದ ಈ ವಿದ್ಯಾರ್ಥಿನಿ ಮಾಧ್ಯಮದ ಮುಂದೆ ಧೈರ್ಯವಾಗಿ ಮಾತನಾಡಿ, ಅದೊಂದು ಕೆಟ್ಟ ಅನುಭವ ಎಂದಿದ್ದಾಳೆ.

ಅಂದು ಪರೀಕ್ಷಾ ಕೇಂದ್ರದಲ್ಲಿ ಅವರು ನನ್ನನ್ನು ಕರೆದರು ಸ್ಕ್ಯಾನಿಂಗ್ ಮಾಡಿದರು ​. ಸ್ಕ್ಯಾನ್​ ಆದ ಬಳಿಕ ನಮ್ಮನ್ನು ಒಳಗೆ ಕಳುಹಿಸುತ್ತಾರೆ ಎಂದು ನಾವು ಭಾವಿಸಿದೆವು. ಆದರೆ, ಎರಡು ಕ್ಯೂಗಳಲ್ಲಿ ನಮ್ಮನ್ನು ನಿಲ್ಲಿಸಲಾಯಿತು. ಒಂದು ಕ್ಯೂ ಲೋಹದ ಕೊಕ್ಕೆ (ಮೆಟಲ್​ ಹೂಕ್ಸ್​) ಇಲ್ಲದ ಬ್ರಾ ಧರಿಸಿದವರಿಗೆ, ಹಾಗೇ ಇನ್ನೊಂದು ಕ್ಯೂ ಇತ್ತು.

ನೀವು ಲೋಹದ ಕೊಕ್ಕೆ ಇರುವ ಒಳ ಉಡುಪುಗಳನ್ನು ಧರಿಸಿದ್ದೀರಾ? ಎಂದು ಅವರು ನನ್ನನ್ನು ಕೇಳಿದರು. ಅದಕ್ಕೆ ನಾನು ಹೌದು ಎಂದೆ. ನಂತರ ಆ ಸಾಲಿನಲ್ಲಿ ನಿಲ್ಲುವಂತೆ ಹೇಳಿದರು. ನನಗೆ ಅಲ್ಲಿ ಏನು ನಡೆಯುತ್ತಿದೆ? ಮತ್ತು ಯಾಕೆ ಹೀಗೆ ನಡೆಯುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಆಗಲಿಲ್ಲ ಎಂದು ಸಂತ್ರಸ್ತ ವಿದ್ಯಾರ್ಥಿನಿ ತಿಳಿಸಿದ್ದಾಳೆ.

ಬ್ರಾ ಕಳೆದು ಟೇಬಲ್​ ಮೇಲೆ ಇಡುವಂತೆ ಹೇಳಿದರು. ಎಲ್ಲಾ ಬ್ರಾಗಳನ್ನು ಅಲ್ಲಿಯೇ ನೇತು ಹಾಕಿದ್ದರು. ನಾವು ಪರೀಕ್ಷೆ ಬರೆದು ಹಿಂತಿರುಗಿದಾಗ ನಮ್ಮದು ನಮಗೆ ಹಿಂತಿರುಗುತ್ತದೆ ಎಂಬ ಖಚಿತತೆಯೂ ಇರಲಿಲ್ಲ. ಪರೀಕ್ಷೆ ಬರೆದು ಮರಳಿ ಬಂದಾಗ ಅಲ್ಲಿ ತುಂಬಾ ಮಂದಿ ಇದ್ದರು. ಅದೊಂದು ಹರಸಾಹಸದ ಕ್ಷಣವಾಗಿತ್ತು. ಆದರೂ, ನನ್ನದ್ದನ್ನು ನಾನು ಮರಳಿ ಪಡೆದುಕೊಂಡೆ. ಯಾವುದೇ ವೈದ್ಯಕೀಯ ಆಕಾಂಕ್ಷಿಗಳು ತೆಗೆದುಕೊಳ್ಳಬಹುದಾದ ಪ್ರಮುಖ ಪರೀಕ್ಷೆಗಳಲ್ಲಿ ಎದುರಾದಂತಹ ನೋವಿನ ಕ್ಷಣವಿದು. ಇದನ್ನೆಂದು ಮರೆಯಲಾಗದು ಎಂದು ವಿದ್ಯಾರ್ಥಿನಿ ಹೇಳುವಾಗ ಆಕೆಯ ಕಣ್ಣಲ್ಲಿ ನೀರು ತುಂಬಿತ್ತು

ಬ್ರಾಗಳನ್ನು ಇಲ್ಲಿಯೇ ಧರಿಸಬೇಡಿ, ಕೈಯಲ್ಲಿ ತೆಗೆದುಕೊಂಡು ಹೊರಗೆ ಹೋಗಿ ಎಂದರು. ಅದನ್ನು ಕೇಳಿ ನಾವು ತುಂಬಾ ಮುಜುಗರಕ್ಕೀಡಾದೆವು. ಆದರೆ, ಎಲ್ಲರೂ ಬದಲಾಯಿಸಲು ಕಾಯುತ್ತಿದ್ದರು. ಅಲ್ಲಿ ತುಂಬಾ ಕತ್ತಲಾಗಿತ್ತು ಮತ್ತು ಬದಲಾಯಿಸಲು ಸ್ಥಳವಿರಲಿಲ್ಲ. ನಿಜವಾಗಿಯೂ ಇದೊಂದು ಭಯಾನಕ ಅನುಭವ. ನಾವು ಪರೀಕ್ಷೆಯನ್ನು ಬರೆಯುವಾಗ ನಮ್ಮ ಕೂದಲುಗಳಿಂದ ನಮ್ಮ ಎದೆ ಭಾಗವನ್ನು ಮುಚ್ಚಿಕೊಳ್ಳಬೇಕಾಯಿತು.

ನಮ್ಮ ಬಳಿ ಯಾವುದೇ ಶಾಲೂ ಅಥವಾ ಕವರ್​ ಸಹ ಇರಲಿಲ್ಲ. ಪರೀಕ್ಷಾ ಕೇಂದ್ರದಲ್ಲಿ ಹುಡುಗರು ಮತ್ತು ಹುಡುಗಿಯರಿದ್ದರು ಮತ್ತು ನಿಜವಾಗಿಯೂ ಇದು ಕಷ್ಟಕರವಾಗಿತ್ತು. ತುಂಬಾ ಅನಾನುಕೂಲ ಪರಿಸ್ಥಿತಿಯನ್ನು ಎದುರಿಸಬೇಕಾಯಿತು ಎಂದು ಹುಡುಗಿ ತಿಳಿಸಿದಳು.

ಆಕೆಯ ತಂದೆ ಪೊಲೀಸರಿಗೆ ದೂರು ನೀಡಿದ ಬಳಿಕ ಈ ಘಟನೆ ಮಾಧ್ಯಮಗಳಿಗೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಚರ್ಚೆಯಾಗಿ ದೇಶಾದ್ಯಂತ ತೀವ್ರ ಆಕ್ರೋಶವು ವ್ಯಕ್ತವಾಯಿತು. ಶೇ. 90ರಷ್ಟು ವಿದ್ಯಾರ್ಥಿನಿಯರ ಒಳಉಡುಪುಗಳನ್ನು ತೆಗೆಸಿದ್ದಾರೆ ಎಂದು ಹೇಳಲಾಗಿದೆ.

ನಿಮ್ಮ ಭವಿಷ್ಯಕ್ಕಿಂತ ಒಳಉಡುಪು ನಿಮಗೆ ದೊಡ್ಡದಾಗಿದೆಯೇ? ಅದನ್ನು ತೆಗೆದುಹಾಕಿ ಮತ್ತು ನಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ ಎಂದು ಪರೀಕ್ಷಾ ಕೇಂದ್ರದ ಭದ್ರತಾ ಸಿಬ್ಬಂದಿಯೊಬ್ಬರು ನೀಡಿದ ಹೇಳಿಕೆಯನ್ನು ಸಂತ್ರಸ್ತ ವಿದ್ಯಾರ್ಥಿನಿ ತಂದೆಯ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮಂಗಳವಾರ ಇನ್ನು ಎರಡು ದೂರುಗಳು ದಾಖಲಾಗಿದೆ.

ಇದರ ಬೆನ್ನಲ್ಲೇ ಘಟನೆಯ ಕುರಿತು ತನಿಖೆ ನಡೆಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಸತ್ಯಶೋಧನಾ ತಂಡಕ್ಕೆ ಆದೇಶಿಸಿದೆ. ರಾಷ್ಟ್ರೀಯ ಮಹಿಳಾ ಆಯೋಗವು ಕೂಡ ಈ ಘಟನೆಯನ್ನು ಖಂಡಿಸಿದೆ.

Copyright © All rights reserved Newsnap | Newsever by AF themes.
error: Content is protected !!