ಕಾಂಗ್ರೆಸ್ ಸಭೆಯ ಹಿನ್ನೆಲೆಯಲ್ಲಿ ದೆಹಲಿ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಇದೊಂದು ಸೌಹಾರ್ದಯುತ ಭೇಟಿ ಎಂದು ತಿಳಿಸಿರುವ ಸಿಎಂ ಸಿದ್ದರಾಮಯ್ಯ, ಭೇಟಿಯ ವೇಳೆ ಪ್ರಧಾನಿಗೆ ಮೈಸೂರಿನ ಶ್ರೀಗಂಧದ ಅಂಬಾರಿ ಸಹಿತ ಆನೆಯ ಮೂರ್ತಿಯೊಂದನ್ನು ಉಡುಗೊರೆಯಾಗಿ ನೀಡಿದರು.
ಪ್ರಧಾನಿ ಮೋದಿಯವರೊಡನೆ ರಾಜ್ಯದ ವಿದ್ಯಮಾನಗಳು ಹಾಗು ಅಭಿವೃದ್ಧಿಯ ಬಗ್ಗೆ ಸಿದ್ದರಾಮಯ್ಯ ಚರ್ಚೆ ನಡೆಸಿದರು.
ಇದೇ ವೇಳೆ ಸಿಎಂ ಸಿದ್ದರಾಮಯ್ಯ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನೂ ಸಹ ಭೇಟಿಯಾಗಿ ಮಾತುಕತೆ ನಡೆಸಿದರು.
ಮೈಸೂರು ದಸರಾ’ ಉತ್ಸವದಲ್ಲಿ ‘ಏರ್ ಶೋ’ ಆಯೋಜಿಸಲು ರಾಜನಾಥ್ ಸಿಂಗ್ ಗೆ ಸಿಎಂ ಸಿದ್ದು ಮನವಿ
ಈ ಬಾರಿಯ ‘ಮೈಸೂರು ದಸರಾ’ ಉತ್ಸವದಲ್ಲಿ ‘ಏರ್ ಶೋ’ ಆಯೋಜಿಸಲು ರಾಜನಾಥ್ ಸಿಂಗ್ ಗೆ ಸಿಎಂ ಸಿದ್ದರಾಮಯ್ಯ ಅವರು ಮನವಿ ಸಲಿಸಿದ್ದರು.
ಇನ್ನೂ ದಸಾರ ಸಮಿತಿ ಸಭೆ ಬಳಿಕ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ಅವರು ನಾನು ಈ ಹಿಂದೆ ಸಿಎಂ ಆಗಿದ್ದ ವೇಳೆಯಲ್ಲಿ ಏರ್‌ಶೋ ಅನ್ನು ಹಮ್ಮಿಕೊಳ್ಳಲಾಗಿತ್ತು, ಈ ಬಾರಿ ಕೂಡ ಏರ್‌ಶೋ ನಡೆಸಲು ಉದ್ದೇಶಿಸಿದ್ದು, ‘ಮೈಸೂರು ದಸರಾ’ ಉತ್ಸವದಲ್ಲಿ ‘ಏರ್ ಶೋ’ ಆಯೋಜಿಸಲು ರಾಜನಾಥ್ ಸಿಂಗ್ ಗೆ ಮನವಿ ಸಲ್ಲಿಸುವುದಾಗಿ ಹೇಳಿದ್ದರು.
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಾಂ ಫಿಕ್ಸ್ ಆಗಿದ್ದು, ಅ.15 ರಂದು ದಸರಾಗೆ ಅದ್ದೂರಿಯಾಗಿ ಚಾಂಮುಂಡಿ ಬೆಟ್ಟದಲ್ಲಿ ಸಿಎಂ ಚಾಲನೆ ನೀಡಲಿದ್ದಾರೆ.
- ಮೈಸೂರಲ್ಲಿ ಹೊಸ ವರ್ಷಾಚರಣೆಗೆ ಪೊಲೀಸ್ ಮಾರ್ಗಸೂಚಿ ಜಾರಿ
- KSDL ನೌಕರ ಕೈಯಲ್ಲಿ ಡೆತ್ ನೋಟ್ ಹಿಡಿದು ಆತ್ಮಹತ್ಯೆ: ಕೆಲಸದ ಒತ್ತಡವೇ ಕಾರಣ?
- ಕೆಎಎಸ್ , ಸರ್ಕಾರಿ ಉದ್ಯೋಗ ಪಾಸ್ ಮಾಡಿಸೋ ಹೆಸರಿನಲ್ಲಿ ಲಕ್ಷಾಂತರ ವಂಚನೆ: ಆರೋಪಿ ಬಂಧನ
- ಜ. 2 ರಂದು ರಾಜ್ಯ ಸರ್ಕಾರದ ಮೊದಲ ಸಚಿವ ಸಂಪುಟ ಸಭೆ ನಿರ್ಣಯ
- ಹೊಸ ವರ್ಷದ ಸಂಭ್ರಮ: ಜೋಗ ಜಲಪಾತ ವೀಕ್ಷಣೆಗೆ ನಿರ್ಬಂಧ ಸಡಿಲಿಕೆ
More Stories
ಮೈಸೂರಲ್ಲಿ ಹೊಸ ವರ್ಷಾಚರಣೆಗೆ ಪೊಲೀಸ್ ಮಾರ್ಗಸೂಚಿ ಜಾರಿ
KSDL ನೌಕರ ಕೈಯಲ್ಲಿ ಡೆತ್ ನೋಟ್ ಹಿಡಿದು ಆತ್ಮಹತ್ಯೆ: ಕೆಲಸದ ಒತ್ತಡವೇ ಕಾರಣ?
ಕೆಎಎಸ್ , ಸರ್ಕಾರಿ ಉದ್ಯೋಗ ಪಾಸ್ ಮಾಡಿಸೋ ಹೆಸರಿನಲ್ಲಿ ಲಕ್ಷಾಂತರ ವಂಚನೆ: ಆರೋಪಿ ಬಂಧನ