December 19, 2024

Newsnap Kannada

The World at your finger tips!

ksrtc palakki

 KSRTC ಪಲ್ಲಕ್ಕಿ BUS ಗಳಿಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ

Spread the love

100 KSRTC , 40 ನಾನ್ ಎಸಿ ಪಲ್ಲಕ್ಕಿ ಹೆಸರಿನ ಸ್ಲೀಪರ್ ಕೋಚ್, 4 ಎಸಿ ಸ್ಲೀಪರ್ ಕೋಚ್ ಬಸ್​ಗಳಿಗೆ ಚಾಲನೆ,ಸಾರಿಗೆ ಇಲಾಖೆಯ ಹೊಸ ಬಸ್​​ಗಳಿಗೆ ಹಸಿರು ನಿಶಾನೆ ತೋರಿದ್ದಾರೆ.

ರಾಜ್ಯದಲ್ಲಿ ಇಂದಿನಿಂದ ಕೆಎಸ್​​ಆರ್​ಟಿಸಿ ಪಲ್ಲಕ್ಕಿ ಉತ್ಸವ ಶುರುವಾಗಿದೆ. ಸಿಎಂ ಸಿದ್ದರಾಮಯ್ಯನವರು ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ಮುಂಭಾಗ ಕೆಎಸ್​ಆರ್​ಟಿಸಿ ಪಲ್ಲಕ್ಕಿ ಉತ್ಸವಕ್ಕೆ ಅಧಿಕೃತ ಚಾಲನೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಸಾರಿಗೆ ರಾಮಲಿಂಗಾರೆಡ್ಡಿ, ರಾಜ್ಯ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳಲ್ಲಿ 24,000 ಬಸ್ ಗಳು ಓಡಾಟ ಮಾಡ್ತಿವೆ. ಪ್ರತಿ ವರ್ಷ ಶೇಕಡಾ 10ರಷ್ಟು ಬಸ್ ಗಳು ಗುಜರಿಗೆ ಸೇರ್ತೀವೆ. ನಾಲ್ಕೂ ನಿಗಮಗಳಲ್ಲಿ ಹಲವು ವರ್ಷಗಳಿಂದ ನೇಮಕಾತಿ ಆಗಿಲ್ಲ. ಕಳೆದ 6 ವರ್ಷದಿಂದ ಹೊಸ ಬಸ್ ಖರೀದಿ ಮಾಡಿರಲಿಲ್ಲ. ಇನ್ನೊಂದು ವರ್ಷದಲ್ಲಿ 1,000 ಬಸ್ ಗಳು ನಿಗಮಗಳಿಗೆ ಸೇರ್ಪಡೆಯಾಗಲಿವೆ. ಬಾಕಿ ಇರುವ ನೇಮಕಾತಿಯೂ ಆಗಲಿದೆ. ಜನಸಂಖ್ಯೆಗೆ ಅನುಗುಣವಾಗಿ ಬಸ್ ಗಳು ಇಲ್ಲ, ಕೊರತೆ ಇದೆ. ಜನಸಂಖ್ಯೆಗೆ ಅನುಗುಣವಾಗಿ 12,000 ಬಸ್ ಗಳ ಅಗತ್ಯವಿದೆ. ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ 2 ಕೋಟಿ ಜನಸಂಖ್ಯೆ ಇದೆ. ಆ ಜನಸಂಖ್ಯೆಗೆ ಅನುಗುಣವಾಗಿ ಬಸ್ ಗಳನ್ನು ಒದಗಿಸುತ್ತೇವೆ ಎಂದರು.

ಇದರಿಂದ ಜನರಿಗೆ ಬಹಳಷ್ಟು ಅನುಕೂಲವಾಗುತ್ತದೆ. ಮಹಿಳೆಯರಿಗೆ ಎಕ್ಸ್‌ಪ್ರೆಸ್‌ ಬಸ್‌ನಲ್ಲಿ ಉಚಿತ ಸೇವೆ ಇರಲಿದೆ.ನಾನ್ ಎಸಿ ಬಸ್‌ನಲ್ಲಿ ಹಣ ನೀಡಿ ಹೋಗಬೇಕಾಗುತ್ತದೆ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ಮತ್ತು ಸಂಪುಟ ಸಚಿವರು ಹೊಸ ಬಸ್​​ಗಳನ್ನು ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆಶಿ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಮುನಿಯಪ್ಪ, ದಿನೇಶ್ ಗುಂಡೂರಾವ್, ಈಶ್ವರ್ ಖಂಡ್ರೆ, ಸಾರಿಗೆ ಅಧಿಕಾರಿಗಳು ಭಾಗಿಯಾಗಿದ್ದರು.

ಪಲ್ಲಕ್ಕಿ ಬಸ್ ವಿಶೇಷತೆ ಏನು?


1. ನಾನ್‌ ಎಸಿ ಸ್ಲೀಪರ್‌ ಬಸ್‌ ಇದಾಗಿದೆ.​ ಅತ್ಯಂತ ಆಕರ್ಷಕ ಹೊರಾಂಗಣ ಮತ್ತು ಒಳಾಂಗಣ ವಿನ್ಯಾಸ ಹೊಂದಿದೆ.
2.‌ ಪಲ್ಲಕ್ಕಿ ಸ್ಲೀಪರ್‌ ಬಸ್ 28 ಸೀಟ್ ಸಾಮರ್ಥ್ಯ ಹೊಂದಿದೆ.
3. ಅಶೋಕ್‌ ಲೇಲ್ಯಾಂಡ್‌ ಕಂಪನಿಯಿಂದ ನಿರ್ಮಾಣವಾಗಿದ್ದು, ಪ್ರತಿ ಬಸ್ ಬೆಲೆ 45 ಲಕ್ಷ ರೂಪಾಯಿ ಇರಲಿದೆ
4. 40 ಬಸ್‌ಗಳ ಪೈಕಿ 30 ಬಸ್‌ಗಳು ರಾಜ್ಯದೊಳಗೆ ಸಂಚರಿಸಲಿವೆ.
5. ಉಳಿದ 10 ಬಸ್‌ಗಳು ಬೆಂಗಳೂರಿನಿಂದ‌ ಹೊರರಾಜ್ಯಗಳಿಗೆ ಸಂಚರಿಸಲಿವೆ.
6. ಈ ಬಸ್‌ ಸೇವೆಯು‌ ಇಂದಿನಿಂದಲೇ ಆರಂಭವಾಗುತ್ತಿದೆ.
7. ಕೆಎಸ್‌ಆರ್‌ಟಿಸಿಯಲ್ಲಿ ನಾನ್‌ ಎಸಿ ಸ್ಲೀಪರ್‌ ಬಸ್‌ಗಳು ಆರಂಭವಾಗಿ ಸಾಕಷ್ಟು ವರ್ಷಗಳಾಗಿವೆ.
8. ನಾನ್ ಎಸಿ ಬಸ್‌ಗಳಿಗೆ ಯಾವುದೇ ಹೆಸರಿಟ್ಟು ಬ್ರ್ಯಾಂಡಿಂಗ್‌ ಮಾಡಿರಲಿಲ್ಲ.
9. ಸದ್ಯ ಪಲ್ಲಕ್ಕಿ ಎಂಬ ಬ್ರ್ಯಾಂಡ್‌ ನೇಮ್‌ ಇಡಲಾಗಿದೆ
10. ಈ ಹೆಸರನ್ನು ಸ್ವತಃ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!