November 14, 2024

Newsnap Kannada

The World at your finger tips!

IMG 2419

You do not have the right to use the word 'self-respecting': Sumalatha vs Ravindra 'ಸ್ವಾಭಿಮಾನಿ' ಪದ ಬಳಕೆ ಹಕ್ಕು ನಿಮಗಿಲ್ಲ : ಸುಮಲತಾ ವಿರುದ್ಧ ರವೀಂದ್ರ ತರಾಟೆ

ಸದನದಲ್ಲಿ ರವೀಂದ್ರ ಶ್ರೀಕಂಠಯ್ಯ ಮನವಿಗೆ ಸ್ಪಂದನೆ – ಪಿಂಚಣಿ ಹಣ ಪಾವತಿಗೆ ಸಿಎಂ ಸಮ್ಮತಿ

Spread the love

ಗ್ರಾಮಾಂತರ ಪ್ರದೇಶದಲ್ಲಿಹಿರಿಯ ನಾಗರೀಕರು ಸೇರಿದಂತೆ ಪಿಂಚಣಿ ಪಡೆಯುವ ಎಲ್ಲಾ ವರ್ಗದ ಜನರು ಕಳೆದ 6-7 ತಿಂಗಳಿನಿಂದ ಮಾಸಿಕ ಪಿಂಚಣಿ ಇಲ್ಲದೇ ಪರಿತಪ್ಪಿಸುತ್ತಿದ್ದಾರೆ. ಸರ್ಕಾರ ಸಕಾಲದಲ್ಲಿ ಪಿಂಚಣಿ ಬಿಡುಗಡೆ ಮಾಡುವಂತೆ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀ ಕಂಠಯ್ಯ ಮುಖ್ಯ ಮಂತ್ರಿ ಗಳಲ್ಲಿ ಗಮನ ಸೆಳೆಯುವ ಪ್ರಶ್ನೆ ಕೇಳಿದರು.

ಬೆಂಗಳೂರಿನಲ್ಲಿ ಇಂದು ಆರಂಭವಾದ ವಿಧಾನ ಸಭಾ ಅಧಿವೇಶನದಲ್ಲಿ ಅಧ್ಯಕ್ಷರು ನೀಡಿದ ಅವಕಾಶವನ್ನು ಉಪಯೋಗಿಸಿಕೊಂಡು ಮಾತನಾಡಿದ ಶಾಸಕ ರವೀಂದ್ರ ಶ್ರೀಕಂಠಯ್ಯ, ಗ್ರಾಮೀಣ ಮತ್ತು ನಗರ ವಾಸಿ ಪಿಂಚಣಿದಾರರ ಪರ ದನಿ ಎತ್ತಿ, ಸಕಾಲದಲ್ಲಿ ಪಿಂಚಣಿ ಪಾವತಿಗೆ ಅಗತ್ಯ ಕ್ರಮ ಕೈಗೊಳ್ಳು ಭರವಸೆಯನ್ನು ಮುಖ್ಯ ಮಂತ್ರಿ ಯಡಿಯೂರಪ್ಪ ಅವರಿಂದ ಪಡೆಯುವಲ್ಲಿ ಯಶಸ್ವಿಯಾದರು.

ರವೀಂದ್ರ ಸದನದಲ್ಲಿ ಮಾತನಾಡಿದ್ದು ಏನು?

ಸದನದಲ್ಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ಕಳೆದ ಆರೇಳು ತಿಂಗಳಿಂದ
ವೃದ್ಧಾಪ್ಯ ವೇತನ, ಪಿಂಚಣಿ ಹಣ ಬಾರದೆ ಗ್ರಾಮೀಣ ಭಾಗದ ಜನ ಕಂಗಾಲಾಗಿದ್ದಾರೆ. ಜನಪ್ರತಿನಿಧಿಗಳಾದ ನಾವು ಹಳ್ಳಿಗಳಿಗೆ ಹೋದರೆ ಸಾಕು ಹಿರಿಯರು ನಮ್ಮನ್ನು ಪ್ರಶ್ನೆ ಮಾಡುತ್ತಾರೆ. ಅವರಿಗೆ ಯಾವ ರೀತಿ ಸಮಾಧಾನ ಹೇಳುವುದೋ ತಿಳಿಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರ ಈ ಯೋಜನೆಯನ್ನು ಕೆಲವು ಕಂಪನಿಗಳಿಗೆ ವಹಿಸಿದೆ. ಅವರು ಒಟ್ಟಿಗೇ
ಕೊಡುವಂತಿಲ್ಲ, ಸರ್ಕಾರ 4 ತಿಂಗಳ ಪಿಂಚಣಿ ಬಿಡುಗಡೆ ಮಾಡಿದರೆ ವೃದ್ಧರಿಗೆ ಸಿಗೋದೇ 2 ತಿಂಗಳದ್ದು ಮಾತ್ರ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಹಿರಿಯ ಜೀವಗಳು ಬದುಕು ಸವೆಸುತ್ತಿವೆ.ಆದ್ದರಿಂದ ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ. ದಯಮಾಡಿ ಈ ಪಿಂಚಣಿ ವಿಚಾರವನ್ನು ವಿಶೇಷವಾಗಿ ಪರಿಗಣಿಸಿ ಹಣ ಬಿಡುಗಡೆಗೊಳಿಸಿ ಎಂದು ಸಿಎಂ ಅವರಲ್ಲಿ ಕೋರಿದರು.

ಸಚಿವ ಸೋಮಣ್ಣ ಉತ್ತರ:

ಕಂದಾಯ ಸಚಿವ ಆರ್.ಅಶೋಕ್ ಅನುಪಸ್ಥಿತಿಯಲ್ಲಿ ಉತ್ತರಿಸಿದ ವಸತಿ ಸಚಿವ ವಿ.ಸೋಮಣ್ಣ, 6,60,000 ಮಂದಿಗೆ ತಾತ್ಕಾಲಿಕವಾಗಿ ಪಿಂಚಣಿ ಸ್ಥಗಿತವಾಗಿದೆ. ಭೌತಿಕ ಪರಿಶೀಲನೆ ಹಿನ್ನೆಲೆಯಲ್ಲಿ ಮತ್ತು ಕೋವಿಡ್ ಸಮಯದ ಪರಿಣಾಮದಿಂದ ಪಿಂಚಣಿ ಬಿಡುಗಡೆ ತಡವಾಗಿದೆ. ಸಚಿವರೊಂದಿಗೆ ಮಾತನಾಡಿ ಅಗತ್ಯವಾಗಿ ಕ್ರಮ ವಹಿಸುವುದಾಗಿ ತಿಳಿಸಿದರು.

ಸಭಾಧ್ಯಕ್ಷ ಕಾಗೇರಿ ಅಸಮಧಾನ:

ಆಗ ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ , ಸರ್ಕಾರದ ಕಾರ್ಯವೈಖರಿ ಬಗ್ಗೆ ಅಸಮಾಧಾನ ತಂದಿದೆ. ಸಚಿವರೇ ರಾಜ್ಯದ ಹಿರಿಯರು ವೃದ್ಧಾಪ್ಯವೇತನವನ್ನೇ ನಂಬಿಕೊಂಡಿರುವ ಅನೇಕ ಜೀವಗಳಿವೆ. ಅದರಲ್ಲೂ ಅವರ ಆರೋಗ್ಯ ರಕ್ಷಣೆಯ ಖರ್ಚು
ವೆಚ್ಚಗಳಿಗೆ ಕನಿಷ್ಠ ಪಿಂಚಣಿಯೂ ಇಲ್ಲವೆಂದರೆ ಅವರ ಪರಿಸ್ಥಿತಿ ಹೇಗಿರಬೇಡ. ಆದ್ದರಿಂದ
ಅಧಿಕಾರಿಗಳ ಹಂತದಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಿ ಹಿರಿಯ ಜನರ ಬದುಕಿಗೆ ನೆರವಾಗುವ ಕ್ರಮಕ್ಕೆ ಮುಂದಾಗಿ ಎಂದು ನೇರ ಆದೇಶ ಮಾಡಿದರು.

ಬಳಿಕ ಮಾತನಾಡಿದ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು, ಕೇಂದ್ರ ಸರ್ಕಾರ ರೈತರಿಗೆ ಆರ್ ಟಿ ಜಿ ಎಸ್ ಮೂಲಕವೇ ಅವರ ಖಾತೆಗಳಿಗೆ ಹಣ ನೀಡುತ್ತಿರುವಂತೆ ಅರ್ಹ ಫಲಾನುಭವಿಗಳಿಗೆ ನೇರವಾಗಿ ಅವರ ಖಾತೆಗೆ ಹಣ ಜಮೆ ಮಾಡುವಂತೆ ಸಲಹೆ ನೀಡಿದರು.

ಕೊನೆಗೆ ಮುಖ್ಯಮಂತ್ರಿ ಯಡಿಯೂರಪ್ಪ ನವರು ಪಿಂಚಣಿ ಬಿಡುಗಡೆಗೆ ಕ್ರಮ ವಹಿಸುವ ಭರವಸೆ ನೀಡಿದರು.

Copyright © All rights reserved Newsnap | Newsever by AF themes.
error: Content is protected !!