January 1, 2025

Newsnap Kannada

The World at your finger tips!

election , JDS , Politics

Political retirement if HDK does not become CM - CM Ibrahim ಹೆಚ್​.ಡಿ.ಕೆ ಸಿಎಂ ಆಗದಿದ್ದರೆ ರಾಜಕೀಯ ನಿವೃತ್ತಿ - ಸಿ.ಎಂ.ಇಬ್ರಾಹಿಂ

ಸಿ ಎಂ ಇಬ್ರಾಹಿಂ ಜೆಡಿಎಸ್ ಸೇರ್ಪಡೆ ಪಕ್ಕಾ – ಕಾಂಗ್ರೆಸ್ ವಿದಾಯಕ್ಕೆ ದಿನಗಣನೆ

Spread the love

ಕೇಂದ್ರದ ಮಾಜಿ ಮಂತ್ರಿ ಸಿ ಎಂ ಇಬ್ರಾಹಿಂ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರುವುದು ಪಕ್ಕಾ ಆಗಿದೆ.ಕಾಂಗ್ರೆಸ್ ಗೆ ವಿದಾಯ ಹೇಳಲು ದಿನಗಣನೆ ಆರಂಭವಾಗಿದೆ.

ಕಾಂಗ್ರೆಸ್ ಹಿರಿಯ ನಾಯಕ ಇಬ್ರಾಹಿಂ ಈಗಾಗಲೇ ಕಾಂಗ್ರೆಸ್‌ನಿಂದ ಸಾಕಷ್ಟು ಅಂತರ ಕಾಯ್ದುಕೊಂಡಿದ್ದಾರೆ. ಬಹುತೇಕ ಅವರು ಪಕ್ಷದಿಂದ ಒಂದು ಕಾಲು ಆಚೆ ಇಟ್ಟು ಜೆಡಿಎಸ್ ನತ್ತ ಹೆಜ್ಜೆ ಇಟ್ಟಿದ್ದಾರೆ.

ಈಗಾಗಲೇ ಎಚ್‌ಡಿ ಕುಮಾರಸ್ವಾಮಿ ಖುದ್ದು ಇಬ್ರಾಹಿಂ ನಿವಾಸಕ್ಕೆ ಹೋಗಿ ಜೊತೆ ಮಾತನಾಡಿದ್ದಾರೆ. ಅಲ್ಲದೇ ಸ್ವತಃ ಸಿ.ಎಂ. ಇಬ್ರಾಹಿಂ ದೇವೇಗೌಡ ಅವರನ್ನು ಭೇಟಿಯಾಗಿ ಅಂತಿಮ ಮಾತುಕತೆ ಮುಗಿಸಿದ್ದಾರೆ. ಶೀಘ್ರದಲ್ಲಿಯೇ ಕಾಂಗ್ರೆಸ್ ತೊರೆದು ಜೆಡಿಎಸ್‌ ಸೇರ್ಪಡೆಯಾಗಲಿದೆ ಎಂಬ ವರ್ತಮಾನ ಖಚಿತವಾಗಿದೆ.

ಬೆಳಗಾವಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ ಇಬ್ರಾಹಿಂ
ಪಕ್ಷ ತೊರೆಯುವ ಸುಳಿವು ನೀಡಿದ್ದಾರೆ.
ಬೆಳಗಾವಿಯಲ್ಲಿ ಹಳಬರು, ಹೊಸಬರ ಪರಿಚಯ ಮಾಡಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಪ್ರಾದೇಶಿಕ ಪಕ್ಷವನ್ನು ಬಲವಾಗಿ ಕಟ್ಟಿದರೆ ಮಾತ್ರ ರಾಜ್ಯಕ್ಕೆ ಉಳಿಗಾಲವಿದೆ ಎಂದರು.

ಕಾಂಗ್ರೆಸ್ ಪಕ್ಷ ನಿರ್ಲಕ್ಷ್ಯ ಮಾಡಿದೆ. ಆದರೆ ಸಿದ್ದರಾಮಯ್ಯ ನ ಬಗ್ಗೆ ನಾನು ಮಾತನಾಡುವುದಿಲ್ಲ. ಮನೆ ಕಟ್ಟಿದ್ದೇವೆ. ಈಗ ತಾಂಬೂಲ ಕೊಟ್ಟಿದ್ದಾರೆ ನಾನು ಮುಂದೆ ಸಾಗುತ್ತೇನೆ ಎಂದು ಮಾರ್ಮಿಕವಾಗಿ‌ ಕಾಂಗ್ರೆಸ್ ಬಿಡುವ ಸುಳಿವು ಕೊಟ್ಟರು ಇಬ್ರಾಹಿಂ.

ನಾನು ಯಾವ ಕಾರಣಕ್ಕೂ ಬಿಜೆಪಿಗೆ ಹೋಗುವುದಿಲ್ಲ. ನಮ್ಮದು ಬಸವ ಕೃಪಾ, ಅವರದ್ದು ಕೇಶವ ಕೃಪಾ. ನಮಗೂ ಅವರಿಗೂ ( ಬಿಜೆಪಿ) ಹೊಂದಿಕೆ ಆಗುವುದಿಲ್ಲ ಎಂದರು.

Copyright © All rights reserved Newsnap | Newsever by AF themes.
error: Content is protected !!