January 11, 2025

Newsnap Kannada

The World at your finger tips!

yathnal

ಐದು ರಾಜ್ಯಗಳ ಚುನಾವಣೆ ನಂತರವೇ ಸಿಎಂ ಬದಲಾವಣೆ – ಯತ್ನಾಳ್

Spread the love

ಸಿಎಂ ಬಿ.ಎಸ್​​​ ಯಡಿಯೂರಪ್ಪ ಬದಲಾವಣೆ ಮಾಡುವುದು ಖಚಿತ. ಈ ಕಾರ್ಯ ಐದು ರಾಜ್ಯ ಗಳ ಚುನಾವಣೆ ಮುಗಿದ ಮೇಲೆ ಅನುಷ್ಠಾನಕ್ಕೆ ಬರಲಿದೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ವಿಜಯಪುರ ದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಯತ್ನಾಳ್ , ಸಿಎಂ ವಿರುದ್ದ ತಮ್ಮ ವಾಗ್ದಾಳಿ ಮುಂದುವರಿಸಿ, ಸಿಎಂ ಬದಲಾವಣೆ ನೂರಕ್ಕೆ ನೂರರಷ್ಟು ಖಚಿತ ಎಂದು ಭವಿಷ್ಯ ನುಡಿದಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಉಳಿಯಬೇಕು ಅಂದ್ರೆ ಸಿಎಂ ಬದಲಾವಣೆ ಅಗತ್ಯವಾಗಿ ಆಗಲೇ ಬೇಕು. ಈಗಾಗಲೇ ಪ್ರಧಾನ ಕಾರ್ಯದರ್ಶಿಯವರಿಗೆ ಈ ಬಗ್ಗೆ ಮನದಟ್ಟಾಗಿದೆ ಎಂದರು.

ಪಂಚ ರಾಜ್ಯಗಳ ಚುನಾವಣೆ ನಂತರ ರಾಜ್ಯದಲ್ಲಿ ಸಿಎಂ ಬದಲಾವಣೆ ಶತಸಿದ್ದವಾಗಿ ಆಗುತ್ತದೆ ಕಾದು ನೋಡಿ ಎಂದರು.

Copyright © All rights reserved Newsnap | Newsever by AF themes.
error: Content is protected !!