July 30, 2025

Newsnap Kannada

The World at your finger tips!

WhatsApp Image 2023 02 14 at 8.28.04 PM

ದಸರಾ ನಂತರ ಸಿಎಂ ಬದಲಾವಣೆ ಖಚಿತ: ಬಿ.ವೈ. ವಿಜಯೇಂದ್ರ

Spread the love

ಹುಬ್ಬಳ್ಳಿ: ಮುಂದಿನ ಮುಖ್ಯಮಂತ್ರಿ ಆಕಾಂಕ್ಷಿಗಳ ಪಟ್ಟಿಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಮೊದಲ ಸ್ಥಾನದಲ್ಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮುಂದಿನ ಐದು ವರ್ಷಗಳ ಕಾಲ ಸಿಎಂ ಆಗಿರಲಿದ್ದಾರೆ ಎಂದು ಕೆಲವರು ಹೇಳುತ್ತಿದ್ದರೂ, ದಸರಾ ನಂತರ ಮುಖ್ಯಮಂತ್ರಿ ಬದಲಾವಣೆ ಖಚಿತ ಎಂದು ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಹಗರಣಗಳ ಸರಮಾಲೆಯಲ್ಲಿ ಸಿಲುಕಿದ್ದು, ಅದರಿಂದ ತಪ್ಪಿಸಿಕೊಳ್ಳಲು ಜಾತಿ ಗಣತಿ ವಿಚಾರವನ್ನು ಪ್ರಚೋದಿಸಿದ್ದಾರೆ ಎಂದು ಟೀಕಿಸಿದ್ದಾರೆ.

ಪಕ್ಷದ ಹೈಕಮಾಂಡ್‌ಗೆ ಮಂಕು ಬೂದಿ ಎರಚಿ ರಾಜ್ಯಾಧ್ಯಕ್ಷರಾದ ಬಗ್ಗೆ ಪ್ರಶ್ನೆಗೆ, ಬಿಜೆಪಿ ತೊರೆದವರು ಈ ಬಗ್ಗೆ ಮಾತನಾಡಲು ಯಾವುದೇ ನೈತಿಕತೆಯಿಲ್ಲ ಎಂದರು.ಮಾಜಿ ಸಿಎಂಗೂ ಹನಿಟ್ರ್ಯಾಪ್ ಮಾಡಿರುವ ಶಾಸಕ ಮುನಿರತ್ನ – ಸಂತ್ರಸ್ಥೆ ಹೇಳಿಕೆ

ರಾಯಣ್ಣ-ಚನ್ನಮ್ಮ ಬ್ರಿಗೇಡ್ ಕುರಿತು ಪ್ರತಿಕ್ರಿಯಿಸಲು ತಾವು ಸಿದ್ಧರಿಲ್ಲ ಎಂದು ಹೇಳಿದ ವಿಜಯೇಂದ್ರ, “ಅದು 20-20 ಪಂದ್ಯವಾದರೆ, ನಾನು ಟೆಸ್ಟ್ ಪಂದ್ಯಕ್ಕೆ ಬಂದಿದ್ದೇನೆ. ನಾನು ಪಕ್ಷದ ನಾಯಕನಾಗಿ ಬಂದಿಲ್ಲ, ಸಾಮಾನ್ಯ ಕಾರ್ಯಕರ್ತನಾಗಿ ಬಂದಿದ್ದೇನೆ” ಎಂದರು.

error: Content is protected !!