November 15, 2024

Newsnap Kannada

The World at your finger tips!

yediyurappa

ರಾಜ್ಯ ಬಜೆಟ್ ಮಂಡನೆ : ಮಹಿಳೆಯರ ಅಭ್ಯುದಯಕ್ಕೆ ಹತ್ತಾರು ಯೋಜನೆಗಳ ಪ್ರಕಟಿಸಿದ ಸಿಎಂ

Spread the love

ರಾಜ್ಯದ 2021-22 ನೇ ಸಾಲಿನ ಬಜೆಟ್ ಅನ್ನು ಸಿಎಂ ಬಿಎಸ್​ ಯಡಿಯೂರಪ್ಪ ಮಂಡನೆ ಮಾಡಿದರು.

ಹೊಸ ಹೊಸ ಘೋಷಣೆಗಳು ಏನಿವೆ ಎನ್ನುವುದರ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ

ಬಜೆಟ್ ಘೋಷಣೆಗಳು:
  • ಮಹಿಳೆಯರಿಗಾಗಿ ಮತ್ತು ಮಕ್ಕಳ ಆರೈಕೆಗೆ ನೆರವಾಗಲು ಬೆಂಗಳೂರು ಮತ್ತು ಇತರೆ ಕಡೆ ಇರುವ ಅಂಗನವಾಡಿಗಳನ್ನು ಶಿಶುಪಾಲನಾ ಕೇಂದ್ರವಾಗಿ ಉನ್ನತೀಕರಣ. ಇದರಿಂದ ಉದ್ಯೋಗ ಸೃಷ್ಟಿ.
  • ಸಣ್ಣ ಉದ್ಯಮ ನಡೆಸುವ ಮಹಿಳೆಯರಿಗೆ ಆಹಾರ ಸುರಕ್ಷತೆ ಬ್ರ್ಯಾಂಡಿಂಗ್ ಮತ್ತಿತರ ತಾಂತ್ರಿಕ ನೆರವು.
  • ಮಹಿಳಾ ಉದ್ಯಮಿಗಳು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ವಾರ್ಷಿಕ ಮೇಳ.
  • ಮಹಿಳಾ ಗಾರ್ಮೆಂಟ್ಸ್​ ಉದ್ಯೋಗಿಗಳಿಗೆ ರಿಯಾಯಿತಿ ದರದಲ್ಲಿ ಬಿಎಂಟಿಸಿ ಪಾಸ್​: 30 ಕೋಟಿ ರು ಮೀಸಲು.
  • ಮಹಿಳೆಯರ ಸುರಕ್ಷತೆಗಾಗಿ ಬೆಂಗಳೂರಿನ ಸಾರ್ವಜನಿಕ ಸ್ಥಳಗಳಲ್ಲಿ 1700 ಸಿಸಿಟಿವಿ ಕ್ಯಾಮರಾ ಅಳವಡಿಕೆ, ಇ-ಬೀಟ್​ ವ್ಯವಸ್ಥೆ
  • ಬೆಂಗಳೂರು ಮಿಷನ್ 2022- ಬೆಂಗಳೂರು ನವಚೈತನ್ಯ ಕಾರ್ಯಕ್ರಮ ಜಾರಿಗೊಳಿಸಲಾಗುತ್ತಿದೆ.
  • ಬೆಂಗಳೂರಿನ ಮಲ್ಲೇಶ್ವರಂನಲ್ಲಿರೋ ಮೈಸೂರು ಲ್ಯಾಂಪ್ ವರ್ಕ್ಸ್​​ ನಿಯಮಿತಕ್ಕೆ ಸೇರಿದ ಪ್ರದೇಶವನ್ನು ಕರ್ನಾಟಕದ ಸಂಸ್ಕೃತಿಯನ್ನು ಬಿಂಬಿಸುವ ಎಕ್ಸ್​ಪೀರಿಯನ್ಸ್​ ಬೆಂಗಳೂರು ಕೇಂದ್ರವಾಗಿ ಪರಿವರ್ತನೆ.
  • ಬೈಯ್ಯಪ್ಪನಹಳ್ಳಿಯಲ್ಲಿರುವ ಎನ್​ಜಿಇಎಫ್​​ಗೆ ಏರಿದ 105 ಎಕರೆ ಜಮೀನಿನಲ್ಲಿ ಜನರಿಗೆ ಅರಣ್ಯದ ಅನುಭವ ನೀಡುವ ವೃಕ್ಷೋದ್ಯಾನ ಆರಂಭ. ಇಲ್ಲಿರುವ ಕಾರ್ಖಾನೆಯ ಕಟ್ಟಡಗಳನ್ನು ನಗರದ ಶ್ರೀಮಂತ ಪರಂಪರೆ, ಸಂಸ್ಕೃತಿ ಹಾಗೂ ಕೇಗಾರಿಕಾ ವೈಭವವಣ್ನು ಸಾರುವಂತೆ ಮರುಬಳಕೆ ಮಾಡಲಾಗುತ್ತದೆ.
  • ಮಹಿಳೆಯರಿಗಾಗಿ ಮತ್ತು ಮಕ್ಕಳ ಆರೈಕೆಗೆ ನೆರವಾಗಲು ಬೆಂಗಳೂರು ಮತ್ತು ಇತರೆ ಕಡೆ ಇರುವ ಅಂಗನವಾಡಿಗಳನ್ನು ಶಿಶುಪಾಲನಾ ಕೇಂದ್ರವಾಗಿ ಉನ್ನತೀಕರಣ. ಇದರಿಂದ ಉದ್ಯೋಗ ಸೃಷ್ಟಿ.
  • ಬೆಂಗಳೂರು ನವಚೈತನ್ಯ ಕಾರ್ಯಕ್ರಮ ಜಾರಿಗೊಳಿಸಲಾಗುತ್ತಿದೆ.
  • ಬೆಂಗಳೂರಿನ ಮಲ್ಲೇಶ್ವರಂನಲ್ಲಿರೋ ಮೈಸೂರು ಲ್ಯಾಂಪ್ ವರ್ಕ್ಸ್​​ ನಿಯಮಿತಕ್ಕೆ ಸೇರಿದ ಪ್ರದೇಶವನ್ನ ಕರ್ನಾಟಕದ ಸಂಸ್ಕೃತಿಯನ್ನು ಬಿಂಬಿಸುವ ಎಕ್ಸ್​ಪೀರಿಯನ್ಸ್​ ಬೆಂಗಳೂರು ಕೇಂದ್ರವಾಗಿ ಪರಿವರ್ತನೆ.
  • ಬೈಯ್ಯಪ್ಪನಹಳ್ಳಿಯಲ್ಲಿರುವ ಎನ್​ಜಿಇಎಫ್​​ಗೆ ಏರಿದ 105 ಎಕರೆ ಜಮೀನಿನಲ್ಲಿ ಜನರಿಗೆ ಅರಣ್ಯದ ಅನುಭವ ನೀಡುವ ವೃಕ್ಷೋದ್ಯಾನ ಆರಂಭ. ಇಲ್ಲಿರುವ ಕಾರ್ಖಾನೆಯ ಕಟ್ಟಡಗಳನ್ನು ನಗರದ ಶ್ರೀಮಂತ ಪರಂಪರೆ, ಸಂಸ್ಕೃತಿ ಹಾಗೂ ಕೇಗಾರಿಕಾ ವೈಭವವನ್ನು ಸಾರುವಂತೆ ಮರುಬಳಕೆ ಮಾಡಲಾಗುತ್ತದೆ.
Copyright © All rights reserved Newsnap | Newsever by AF themes.
error: Content is protected !!