ಹಲವು ದಿನಗಳಿಂದ ಮಂಡಿ ನೋವಿನಿಂದ ಬಳಲುತ್ತಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ
ಚಿಕಿತ್ಸೆ ನೀಡುತ್ತಿರುವ ಲೋಕೇಶ್ ಟೆಕಲ್ ನಕಲಿ ವೈದ್ಯ ಎಂದು ತಿಳಿದು ಬಂದಿದೆ.
2019 ರಲ್ಲೇ ಲೋಕೇಶ್ ಟೇಕಲ್ ವಿರುದ್ಧ ಕೇಸ್ ದಾಖಲಾಗಿತ್ತು. ಅಂದಿನ ಆಯುಷ್ಯ ಅಧಿಕಾರಿ ಸುಜಾತಾ ಪಾಟೀಲ್ ದೂರು ದಾಖಲಿಸಿದ್ದರು.
ಲೋಕೇಶ್ ಟೇಕಲ್ ಆಸ್ಪತ್ರೆಯ ಮೇಲೆ ದಾಳಿಯೂ ನಡೆಸಲಾಗಿತ್ತು. ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಹಾಲಿಂಗಪುರದಲ್ಲಿರುವ ಆಸ್ಪತ್ರೆ ಕಂ ಕ್ಲಿನಿಕ್ ಮೇಲೆ ಸುಜಾತಾ ಪಾಟೀಲ್ ದಾಳಿ ನಡೆಸಿದ್ದರು.
ಐಪಿಸಿ ಸೆಕ್ಷನ್ 36, 38 ಹಾಗೂ 420 ಅಡಿ ದೂರು ದಾಖಲು ಮಾಡಲಾಗಿತ್ತು. ನಂತರ ಶಿರಹಟ್ಟಿ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿತ್ತು
ಈ ಕೇಸ್. ತನಿಖೆ ನಡೆಸಿದ ಪೊಲೀಸರು ಆರೋಪಿ ಲೋಕೇಶ್ ಟೇಕಲ್ ಮೇಲೆ ಚಾರ್ಜ್ ಶೀಟ್ ಕೂಡ ಸಲ್ಲಿಸಿದ್ದರು. ಈ ನಡುವೆ ಎಫ್ಐಆರ್ ರದ್ದು ಕೋರಿ ಲೋಕೇಶ್ ಧಾರವಾಡ ಹೈಕೋರ್ಟ್ ಮೆಟ್ಟಿಲೇರಿದ. ಕಳೆದ 2021 ನವೆಂಬರ್ 24ರಂದು ಎಫ್ಐಆರ್ ರದ್ದು ಮಾಡಿ ಹೈಕೋರ್ಟ್ ಆದೇಶ ನೀಡಿತ್ತು.
ಲೋಕೇಶ್ ಟೇಕಲ್ ಮೂಲತಃ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ಗ್ರಾಮದವರು. ಅಜ್ಜಿ ಪ್ರಸಿದ್ಧ ನಾಟಿ ವೈದ್ಯರಾಗಿದ್ದರು. ತಾನೂ ನಾಟಿ ವೈದ್ಯ ಎಂದು ಸ್ವಯಂ ಘೋಷಿತ ಮಾಡಿಕೊಂಡಿದ್ದಾರೆ
ಲೋಕೇಶ್. ಮುಂಡರಗಿ ಬಳಿ ಇರುವ ಆಯುರ್ವೇದ ಮೆಡಿಕಲ್ ಕಾಲೇಜ್ನಲ್ಲಿ ಓದಲು ತೆರಳಿದ್ದ ಲೋಕೇಶ್, ಮೂರು ಸೆಮೆಸ್ಟರ್ನಲ್ಲಿ ಫೇಲ್ ಆಗಿದ್ದರು
ಶಿರಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿ ಮಹಾಲಿಂಗಪುರ ಬಳಿ ಆಯುರ್ವೇದ ಆಸ್ಪತ್ರೆ ಶುರು ಮಾಡಿದ ಲೋಕೇಶ್ ನಂತರ ಹೊರ ರಾಜ್ಯಗಳಲ್ಲೂ ಪ್ರಸಿದ್ಧನಾಗಿದ್ದ. ಅನೇಕ ಸಚಿವರು, ಮಾಜಿ ಮಂತ್ರಿಗಳು, ಶಾಸಕರು, ಮಠಾಧೀಶರು, ಚಿತ್ರರಂಗದ ಗಣ್ಯರು ಇವರ ಬಳಿ ಚಿಕಿತ್ಸೆ ಪಡೆಯುತ್ತಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು