December 26, 2024

Newsnap Kannada

The World at your finger tips!

nirani shiggav

ಸಿಎಂ ಬೊಮ್ಮಾಯಿ ಮುಂದೆ ಕೇಂದ್ರ ಸಚಿವರಾಗುತ್ತಾರೆ- ಸಚಿವ ನಿರಾಣಿ ಭವಿಷ್ಯ

Spread the love

ಸಿಎಂ ಬೊಮ್ಮಾಯಿ  ಮುಂದೆ ಕೇಂದ್ರ ಸಚಿವರಾಗುತ್ತಾರೆ ಎಂದು ಸಚಿವ ಮುರುಗೇಶ್ ನಿರಾಣಿ
ಕೂತೂಹಲದ ಸಂಗತಿಯೊಂದನ್ನು ಹೇಳಿದರು.

ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ನಡೆಯುತ್ತಿರುವ ಚನ್ನಮ್ಮ ಸಭಾಭವನ ಅಡಿಗಲ್ಲು ಸಮಾರಂಭದಲ್ಲಿ ಮಾತನಾಡಿದ ಸಚಿವ ಮುರುಗೇಶ್ ನಿರಾಣಿ ಈ ಅವರ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದೆ.

ನಿರಾಣಿ ಉವಾಚ ?

ಕಾರ್ಯಕ್ರಮದ ಜನರನ್ನುದ್ದೇಶಿಸಿ ಮಾತನಾಡಿದ ಸಚಿವ ನಿರಾಣಿ ಅಂದೇ ನಾನು ಹೇಳಿದ್ದೆ, ನೀವು ಓಟ್ ಹಾಕೋದು ಮುಂದಿನ ಮುಖ್ಯಮಂತ್ರಿಗೆ ಅಂತ. ಅದರ ಪ್ರಕಾರ ಇಂದು ಬಸವರಾಜಣ್ಣ ಸಿಎಂ ಆಗಿದ್ದಾರೆ.ನಾನು ಬಸಣ್ಣ ಮೂವತ್ತು ವರ್ಷದ ಸ್ನೇಹಿತರು.ಒಂದೇ ಕಾಲೇಜಿನಲ್ಲಿ ಓದಿದವರು. ಹಾಗಾಗಿ ನಾವು ಅಣ್ಣ ತಮ್ಮ ಇದ್ದ ಹಾಗೆ ಎಂದರು.

ಇಂದು ಹೇಳ್ತಿದ್ದೇನೆ ಕೇಳಿ ಈ ಪೂರ್ತಿ ಅವಧಿಯಲ್ಲಿ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ. ಬಸವರಾಜಣ್ಣನೇ ಪೂರ್ತಿ ಅವಧಿಗೆ ಸಿಎಂ ಆಗಿ ಮುಂದುವರೆಯುತ್ತಾರೆ.ಯಾರೇ ಏನೇ ಹೇಳಿದರೂ ಕಿವಿಯಲ್ಲಿ ಹಾಕೋಬೇಡಿ ಮುಂದೆ ಅವರ ತಂದೆಯ ಹಾಗೆ ಕೇಂದ್ರದಲ್ಲೂ ಬೊಮ್ಮಾಯಿ ಅಣ್ಣ ಮಂತ್ರಿ ಆಗೇ ಆಗ್ತಾರೆ ಎಂದು ನಿರಾಣಿ ಹೇಳಿ ಆಶ್ಚರದ ಸಂಗತಿಯನ್ನು ಹೊರ ಹಾಕಿದರು.

Copyright © All rights reserved Newsnap | Newsever by AF themes.
error: Content is protected !!