December 20, 2024

Newsnap Kannada

The World at your finger tips!

preetham gowda

ಸಿಎಂ ಬೊಮ್ಮಾಯಿ – ದೇವೇಗೌಡರ ಭೇಟಿ : ಶಾಸಕ ಪ್ರೀತಂ ಗೌಡ ಗರಂ

Spread the love

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಹಾಸನದ ಶಾಸಕ ಪ್ರೀತಂಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನೂತನ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಸಿಗಲಿಲ್ಲ ಅಂತ ಅಲ್ಲ. ಬದಲಿಗೆ ನೂತನ ಮುಖ್ಯಮಂತ್ರಿ ಬೊಮ್ಮಾಯಿ, ಅಧಿಕಾರ ಸ್ವೀಕರಿಸಿದ ನಂತರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮನೆಗೆ ಭೇಟಿ ನೀಡಿದ ಬಗ್ಗೆ ತಮ್ಮ ಮುನಿಸು ಹೊರ ಹಾಕಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಶಾಸಕ ಪ್ರೀತಂ ಗೌಡ , ಬಸವರಾಜ
ಬೊಮ್ಮಾಯಿ ಮುಖ್ಯಮಂತ್ರಿಯಾಗಿ ೨೪ ಗಂಟೆ ಕಳೆಯುವಷ್ಟರಲ್ಲೇ ದೇವೇಗೌಡರ ಮನೆಗೆ ಹೋಗುವ ಅಗತ್ಯವೇನಿತ್ತು ಎಂಬ ಪ್ರಶ್ನೆಯನ್ನು ಕಾರ್ಯಕರ್ತರು ನನ್ನನ್ನು ಕೇಳುತ್ತಿದ್ದಾರೆ ಎಂದು ಹೇಳಿದರು.

ಬೊಮ್ಮಾಯಿ ಮೊದಲು ಸಿದ್ದಗಂಗಾ ಶ್ರೀ, ಸುತ್ತೂರು ಸ್ವಾಮೀಜಿ, ಸಿರಿಗೆರೆ ಶ್ರೀಗಳು ಇಲ್ಲವೇ ಆದಿಚುಂಚನಗಿರಿ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಬೇಕಿತ್ತು.
ಅದು ಬಿಟ್ಟು ತಮ್ಮ ತಂದೆ (ಎಸ್.ಅರ್. ಬೊಮ್ಮಾಯಿ) ಸರ್ಕಾರ ಉರುಳಿಸಿದಂತಹವರ ಮನೆಗೆ ಹೋಗುವ ಅವಶ್ಯಕತೆ ಇರಲಿಲ್ಲ ಎಂದು ನಾನು ಹೇಳುತ್ತಿಲ್ಲ. ಬದಲಿಗೆ ನಮ್ಮ ಕಾರ್ಯಕರ್ತರು ಕೇಳುತ್ತಿದ್ದಾರೆ ಎಂದರು.

ಹೊಂದಾಣಿಕೆ ರಾಜಕಾರಣ ಮಾಡಿಕೊಳ್ಳಲು ನಾವು ರಾಜಕೀಯದಲ್ಲಿ ಸಿದ್ದರಿಲ್ಲ. ಸನ್ಯಾಸಿಗಳೂ ಅಲ್ಲ. ರಾಜಕಾರಣ ಮಾಡಲೇಂದೆ ಬಂದಿರುವುದಾಗಿ ಶಾಸಕರು ನುಡಿದರು.

ಮುಂದಿನ ದಿನಗಳಲ್ಲಿ ಯಾರೇ ಮಂತ್ರಿಗಳಾಗಲಿ ಜನತಾದಳದವರ ಮನೆಗೆ ಹೋಗಿ ಊಟ ಮಾಡುವುದು ಇಲ್ಲವೇ ಭೇಟಿ ಮಾಡುವುದರ ಮೂಲಕ ಮುಂಬರುವ ತಾಪಂ, ಜಿಪಂ ಚುನಾವಣೆಗಳಲ್ಲಿ ಕಾರ್ಯಕರ್ತರ ನೈತಿಕ ಸ್ಥೈರ್ಯ ಕುಂದಿಸುವ ತಂತ್ರ ಮಾಡಬಾರದು. ಕಾರಣ ಹಳೇ ಮೈಸೂರಿನ ಕಡೆ ರಾಜಕಾರಣ ಮಾಡುವವರಿಗೆ ನೋವಿನ ಬಗ್ಗೆ ಗೊತ್ತಿರುತ್ತೆ ಎಂದರು.

ನಮ್ಮ ಕಾರ್ಯಕರ್ತರ ಮನಸ್ಸಿನ ನೋವಿನ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕಂಡು ಮಾತನಾಡುತ್ತೇನೆ. ಹಾಗೆಯೇ ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ನಮ್ಮ ಪರಿವಾರದ ಹಿರಿಯ ಬಗ್ಗೆ ಚರ್ಚಿಸುವುದಾಗಿ ವಿವರಿಸಿದರು.

Copyright © All rights reserved Newsnap | Newsever by AF themes.
error: Content is protected !!