February 21, 2026

Newsnap Kannada

The World at your finger tips!

punith raj 5

ಪುನೀತ್ ರಾಜ್ ಕುಮಾರ್ ಗೆ ಕರ್ನಾಟಕ ರತ್ನ ಪುರಸ್ಕಾರ ಘೋಷಿಸಿದ ಸಿಎಂ ಬೊಮ್ಮಾಯಿ

Spread the love

ಯುವ ರತ್ನ ಪುನೀತ್​​​ರಾಜ್ ಕುಮಾರ್ ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಪುರಸ್ಕಾರ ನೀಡುವುದಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಘೋಷಣೆ ಮಾಡಿದರು,

ಬೆಂಗಳೂರಿನ ಅರಮನೆಯಲ್ಲಿ ನಡೆದ ಅಪ್ಪು ನುಡಿ ನಮನ ಕಾರ್ಯಕ್ರಮದಲ್ಲಿ ಮಾತಾಡಿದ ಸಿಎಂ ಬಸವರಾಜ್​​ ಬೊಮ್ಮಾಯಿ, ಪುನೀತ್​​ ರಾಜ್​ಕುಮಾರ್​​ಗೆ ಮರಣೋತ್ತರ ‘ಕರ್ನಾಟಕ ರತ್ನ’ ಪುರಸ್ಕಾರ ನೀಡುವುದಾಗಿ ಘೋಷಿಸಿದ್ದಾರೆ.

ಪುನೀತ್ ನಮನ ಕಾರ್ಯಕ್ರಮದಲ್ಲಿ ಮಾತಾಡಿದ ಬೊಮ್ಮಾಯಿ, ಅಪ್ಪು ಅಗಲಿಕೆ ನಾಡಿಗೆ ತುಂಬಲಾರದ ನಷ್ಟ. ಅಪ್ಪನ ಹಾದಿಯಲ್ಲೇ ನಡೆದ ಮಗ, ಇಡೀ ಕರ್ನಾಟಕದಲ್ಲೇ ಮೊದಲ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ ಅವನು ನಮ್ಮ ನಡುವೆಯೇ ಇದ್ದಾನೆ ಎಂದರು.

ಈ ಹಿಂದೆಯೂ ಪುನೀತ್ ರಾಜ್ ಕುಮಾರ್ ಅಗಲಿದಾಗ ಮಗುವಂತೆ ಅತ್ತಿದ್ದರು ಬೊಮ್ಮಾಯಿ. ಅಲ್ಲದೇ ಅಪ್ಪು ಹಣೆಗೆ ಮುತ್ತು ಕೊಟ್ಟು ತಮ್ಮ ಪ್ರೀತಿಯನ್ನ ತೋರಿಸಿದವರು.

ಇಂದಿನ ‘‘ಪುನೀತ ನಮನ’’ ಕಾರ್ಯಕ್ರಮದಲ್ಲಿ ಭಾವುಕರಾಗಿ ಅಭಿಮಾನದಿಂದ ಮಾತನಾಡಿದ ಮುಖ್ಯಮಂತ್ರಿಗಳು ಅಪ್ಪು ಅವರ ಭಾವ ಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸಿದರು.

ಬಳಿಕ ಪುನೀತ್​​ ರಾಜ್​ಕುಮಾರ್​​ಗೆ ಮರಣೋತ್ತರ ‘ಕರ್ನಾಟಕ ರತ್ನ’ ಪುರಸ್ಕಾರ ಘೋಷಿಸಿದರು.

error: Content is protected !!