ಇತ್ತೀಚೆಗೆ ಚಿಕ್ಕ ಮಕ್ಕಳು ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಕರ್ನಾಟಕದಲ್ಲಿ ಚಿಕ್ಕ ಚಿಕ್ಕ ವಯಸ್ಸಿನ್ಲಲೇ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ನಿರ್ಮಲ ಶಾಲೆಯಲ್ಲಿ ರಾಷ್ಟ್ರಗೀತೆ ಹಾಡುವಾಗ ಪೆಲಿಸಾ ಏಕಾಏಕಿ ಕುಸಿದುಬಿದ್ದಿದ್ದಾಳೆ. ಕೂಡಲೇ ಶಾಲಾ ಸಿಬ್ಬಂದಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ದುರದೃಷ್ಟವಶಾತ್ ಅಷ್ಟರಾಗಲೇ ಜೀವ ನಿಂತು ಹೋಗಿತ್ತು.
ಪೆಲಿಸಾ ಮೂಲತಃ ಬೆಂಗಳೂರಿನವಳಾಗಿದ್ದು, ಇನ್ನು ಈ ಮೊದಲು ತಂದೆ ಅಸುನೀಗಿದ್ದರಿಂದ ಈಕೆಯನ್ನು ಕ್ರೈಸ್ತ ಮಿಷನರಿ ಸಹಾಯದಿಂದ ವಿದ್ಯಾಭ್ಯಾಸಕ್ಕಾಗಿ ಗುಂಡ್ಲುಪೇಟೆ ನಿರ್ಮಲಾ ಕಾನ್ವೆಂಟ್‌ಗೆ ದಾಖಲಿಸಿ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಬಾಲಕಿಗೆ ತಾಯಿ, ಸಹೋದರ, ಸಹೋದರಿ ಇದ್ದಾರೆ. ಇವರು ಬೆಂಗಳೂರಿನಲ್ಲಿದ್ದಾರೆ.IFS ಅಧಿಕಾರಿಗಳ ವರ್ಗಾವಣೆ
ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಮೃತಳ ತಾಯಿ ದೂರು ಕೊಟ್ಟಿದ್ದು, ಪ್ರಕರಣ ದಾಖಲಾಗಬೇಕಿದೆ.
More Stories
ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಮುರಿದ ವಿರಾಟ್ ಕೊಹ್ಲಿ
ಉದಯಗಿರಿ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣ: 8 ಮಂದಿ ಬಂಧನ
MUDA ಹಗರಣ: ಅಂತಿಮ ತನಿಖಾ ವರದಿ ಐಜಿಪಿಗೆ ಸಲ್ಲಿಕೆ