ಕ್ರಿಸ್ ಮಸ್ , ಹೊಸ ವರ್ಷಾಚರಣೆಗೆ ಬ್ರೇಕ್ – ಹೊಸ ರೂಲ್ಸ್ ಕಟ್ಟುನಿಟ್ಟು ಪಾಲನೆ

Team Newsnap
1 Min Read

ಸಾರ್ವಜನಿಕವಾಗಿ ಕ್ರಿಸ್ ಮಸ್ , ವರ್ಷಾಚರಣೆಯನ್ನು ನಿಷೇಧಿಸಲಾಗಿದೆ. ಡಿ. 30 ರಿಂದ ಜ. 2 ರವರೆಗೆ ಡಿಜೆ ಡ್ಯಾನ್ಸ್ ,ವಿಶೇಷ ಪಾರ್ಟಿಗಳನ್ನು ನಿಷೇಧ ಮಾಡಲಾಗಿದೆ.

ಎರಡನೇ ಹಂತದ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಸೂಚನೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ, ಕ್ರಿಸ್ಮಸ್‌ ಮತ್ತು ಹೊಸ ವರ್ಷಾಚರಣೆ ಬ್ರೇಕ್‌ ಹಾಕಿದೆ.

10 ವರ್ಷ ಒಳಗೆ ಮತ್ತು 60 ವರ್ಷದ ಮೇಲ್ಪಟ್ಟ ಹಿರಿಯ ನಾಗರೀಕರು ಮನೆ ಬಿಟ್ಟು ಹೊರ ಹೋಗುವಂತಿಲ್ಲ.

order

ಕೆಲವು ರಸ್ತೆಗಳ ಸಂಚಾರವನ್ನು ನಿಷೇಧಿಸುವ ಅಧಿಕಾರವನ್ನು ಡಿಸಿ, ಎಸ್ಪಿ ಹಾಗೂ ಕಮೀಷನರ್ ಅವರುಗಳಿಗೆ ಅಧಿಕಾರ ನೀಡಲಾಗಿದೆ.

ರಾಜ್ಯ ಸರ್ಕಾರ ಸುತ್ತೋಲೆಯನ್ನು ಹೊರಡಿಸಿ ಆಚರಣೆ ಸಂದರ್ಭದಲ್ಲಿ ಸಾಮಾಜಿಕ ಅಂತರವಿಲ್ಲದೇ ಹೆಚ್ಚಿನ ಜನರು ಸೇರುವ ಪಾರ್ಟಿ, ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚು ಜನ ಸೇರುವಂತಿಲ್ಲ.‌ ದೀಪಾವಳಿಯ ಹಸಿರು ಪಟಾಕಿಗಳನ್ನು ಮಾತ್ರ ಹಚ್ಚಬಹುದು.

Share This Article
Leave a comment