ಚಂದನವನದಲ್ಲಿ ಬಹಳ ಸುದ್ದಿ ಮಾಡಿದ್ದ ಮಾದಕವಸ್ತು ದಂಧೆಯ ನಂತರ ಇದೀಗ ಎಲ್ಲರೂ ಬೆಚ್ಚಿ ಬೀಳುವ ಸುದ್ದಿ ಪತ್ತೆಯಾಗಿದೆ.
ಚಿತ್ರದುರ್ಗದ ರಾಂಪುರ ಎಂಬ ಹಳ್ಳಿಯಲ್ಲಿ ಪೋಲಿಸರು ೪ ಎಕರೆಯಲ್ಲಿ ಬೆಳೆದ ೯,೮೭೨ ಕೇಜಿಯಷ್ಟು ಗಾಂಜಾ ಬೆಳೆಯನ್ನು ಪತ್ತೆ ಮಾಡಿದ್ದಾರೆ. ಈ ಬೆಳೆಯ ಒಟ್ಟು ಮೌಲ್ಯ ೪.೨ ಕೋಟಿ ರೂಗಳಾಗಿವೆ. ಪ್ರತಿ ಗಾಂಜಾ ಸಸ್ಯವು ಸುಮಾರು ೪ ಅಡಿ ಎತ್ತರ ಬೆಳೆದಿತ್ತು ಎಂದು ಪೋಲೀಸರು ತಿಳಿಸಿದ್ದಾರೆ.
ಬೆಳೆಯನ್ನು ಜಪ್ತಿ ಮಾಡಿರುವ ಪೋಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಜನರನ್ನು ಬಂಧಿಸಿದ್ದಾರೆ. ಆದರೆ ಮುಖ್ಯ ಆರೋಪಿಯಾದ ರುದ್ರೇಶ ಕಣ್ಮರೆಯಾಗಿದ್ದಾನೆ . ಅವನನ್ನು ಪತ್ತೆ ಮಾಡುವ ಕಾರ್ಯದಲ್ಲಿದ್ದಾರೆ.
More Stories
ಮೈಸೂರು ಜೈಲಿನಲ್ಲಿ ಮೂವರು ಕೈದಿಗಳ ದುರ್ಮರಣ
ರಾಜ್ಯ ಸರ್ಕಾರದಿಂದ ಕಾರ್ಮಿಕರಿಗೆ ಮದುವೆ ಸಹಾಯಧನ: ₹60,000 ಪಡೆಯಲು ಅರ್ಜಿ ಆಹ್ವಾನ!
ಮಾದಕ ವಸ್ತುಗಳ ಅಕ್ರಮ ಮಾರಾಟ: ಮೂವರು ಆರೋಪಿಗಳು ಬಂಧನ