ಮಹಿಳೆಯರಿಗೆ ಹೆರಿಗೆ ರಜೆ ಸೌಲಭ್ಯ ಇರುವ ರೀತಿಯಲ್ಲೇ ಪುರುಷರಿಗೆ ಚೈಲ್ಡ್ ಕೇರ್ ಲೀವ್ ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಮಹಿಳೆಯರಿಗೆ ಹೆರಿಗೆ ರಜೆ, ಚೈಲ್ಡ್ ಕೇರ್ ಲೀವ್ ಸೌಲಭ್ಯವಿದೆ. ಅದೇ ರೀತಿ ಅಪ್ಪಂದಿರಿಗೂ ಚೈಲ್ಡ್ ಕೇರ್ ಲೀವ್ ( ಮಗು ಪಾಲನೆ ರಜೆ ) ಅವಕಾಶವನ್ನು ನೀಡಲಾಗುವುದು.
ಪುರುಷರಿಗೂ ಕೂಡ ರಜೆ ಸೌಲಭ್ಯ ನೀಡಬೇಕೆಂಬ ಒತ್ತಾಯ ಕೇಳಿ ಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಕೇಂದ್ರದ ಸಿಬ್ಬಂದಿ ಮತ್ತು ತರಬೇತಿ ಸಚಿವ ಡಾ.ಜಿತೇಂದ್ರ ಸಿಂಗ್ ಈ ಕುರಿತು ಮಾಹಿತಿ ನೀಡಿದ್ದಾರೆ.
ಯಾರಿಗೆ ಈ ಸೌಲಭ್ಯ?
ಕುಟಂಬದ ಯಾರ ನೆರವು ಇಲ್ಲದ ಅಪ್ಪಂದಿರಿಗೆ ಮಾತ್ರ ಸೌಲಭ್ಯ ಕಲ್ಪಿಸಲಾಗುವುದು. ಹೆರಿಗೆಯ ಸಮಯದಲ್ಲಿ ಪತ್ನಿ ಕಳೆದುಕೊಂಡವರು, ವಿಚ್ಚೇದಿತ ಅಪ್ಪಂದಿರಿಗೆ ಈ ಸೌಲಭ್ಯ ನೀಡಲಾಗುವುದು. ತಾಯಿ ಅನುಪಸ್ಥಿತಿಯಲ್ಲಿ ಮಗುವಿನ ಪಾಲನೆ ಮಾಡುವ ಜವಾಬ್ದಾರಿ ತಂದೆ ಮೇಲಿರುತ್ತದೆ. ಹೀಗಾಗಿ ರಜೆ ಸೌಲಭ್ಯ ಕಲ್ಪಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಲಾಗಿದೆ.
More Stories
ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್: ಗೃಹಸಚಿವ ಪರಮೇಶ್ವರ್ ದೃಢೀಕರಣ