December 23, 2024

Newsnap Kannada

The World at your finger tips!

CHIKKABALLA

ಚಿಕ್ಕಬಳ್ಳಾಪುರ : ಮತ್ತೊಂದು ಗಣಿಸ್ಫೋಟ; ಐವರ ದುರಂತ ಸಾವು- ಛಿದ್ರವಾಗಿರುವ ದೇಹಗಳು

Spread the love

ಗಣಿಯೊಂದರಲ್ಲಿ ಸ್ಫೋಟಕಗಳು ಬ್ಲಾಸ್ಟ್​ ಆಗಿ ಐವರು ಸಾವನ್ನಪ್ಪಿದ್ದಾರೆ. ಸ್ಪೋಟದ ತೀವ್ರತೆಗೆ ಮೃತದೇಹಗಳೆಲ್ಲಾ ಛಿದ್ರ ಛಿದ್ರವಾಗಿ ನೂರಾರು ಮೀಟರ್ ದೂರದಲ್ಲಿ ಬಿದ್ದಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕು ಹಿರೇನಾಗವಲ್ಲಿ ಗ್ರಾಮದ ಬಳಿ ಕಳೆದ ಮಧ್ಯ ರಾತ್ರಿ ಸಂಭವಿಸಿದೆ.

CHIKKABALLA1

ಈ ದುರಂತದಲ್ಲಿ ಎಂಜಿನಿಯರ್ ಉಮಾಕಾಂತ್, ಸ್ಥಳೀಯ ನಿವಾಸಿ ರಾಮು, ವಾಚ್​ಮ್ಯಾನ್ ಮಹೇಶ್, ಕಂಪ್ಯೂಟರ್ ಅಪರೇಟರ್ ಮುರಳಿ ಹಾಗೂ ಗಂಗಾಧರ್ ಧಾರುಣವಾಗಿ ಸಾವನ್ನಪ್ಪಿದ್ದಾರೆ. ಟಾಟಾ ಏಸ್ ಚಾಲಕ ರಿಯಾಜ್ ಎಂಬವರಿಗೆ ಗಂಭೀರ ಗಾಯವಾಗಿದೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಿವಮೊಗ್ಗದ ಹುಣಸೋಡು ಕ್ರಷರ್​ನಲ್ಲಿ ಜಿಲೆಟಿನ್ ಸ್ಫೋಟವಾದ ಪ್ರಕರಣ ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ಅದೇ ರೀತಿಯ ದುರಂತ ನಡೆದಿದೆ.

ಗಣಿ ಮಾಲೀಕರು ಯಾರು ? :

ರಾಘವೇಂದ್ರ ರೆಡ್ಡಿ, ಶಿವಾ ರೆಡ್ಡಿ ಹಾಗೂ ನಾಗರಾಜ್ ಮಾಲೀಕತ್ವದ ಬ್ರಹ್ಮರ ವಾಸಿನಿ ಎಂ ಸ್ಯಾಂಡಲ್ ಪ್ರೈವೇಟೆ ಲಿಮಿಟೆಡ್ ಕ್ರಷರ್​ನಲ್ಲಿ ಈ ಘಟನೆ ನಡೆದಿದೆ.

CHIKKABALL2

ಫೆ 7 ರಂದು ಇಲ್ಲಿ ಅಕ್ರಮವಾಗಿ ಜಿಲೆಟಿನ್ ದಾಸ್ತಾನು ಮಾಡಿದ್ದ ಹಿನ್ನೆಲೆ ಸೀಜ್ ಮಾಡಲಾಗಿತ್ತು. ನಿನ್ನೆ ಸಂಜೆ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು.

ಪೊಲೀಸರ ಕಣ್ಣಿಗೆ ಬೀಳದಂತೆ ದೂರದ ಬೆಟ್ಟದಲ್ಲಿ ಜಿಲೆಟಿನ್ ಸಂಗ್ರಹ ಮಾಡಲು ತೆರಳಿದ್ದರು.

ಈ ವೇಳೆ ರಾತ್ರಿ 12.30 ವೇಳೆಗೆ ಕ್ರಷರ್​ನಿಂದ 1 ಕಿಲೋ ಮೀಟರ್ ದೂರದ ಬೆಟ್ಟ ಪ್ರದೇಶದಲ್ಲಿ ಸ್ಫೋಟವಾಗಿದೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ವರಿಷ್ಠಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಮತ್ತು ಜಿಲ್ಲಾಧಿಕಾರಿ ಲತಾ ಆರ್. ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!