February 21, 2026

Newsnap Kannada

The World at your finger tips!

lorry accident

ಅರಕಲಗೂಡು ಬಳಿ ಕೆಮಿಕಲ್ ಬಾಕ್ಸ್ ತುಂಬಿದ್ದ ಲಾರಿ ಪಲ್ಟಿ : ಮೂವರು ಸಜೀವ ದಹನ

Spread the love

ಲಾರಿ ಪಲ್ಟಿ ಮೂವರು ಸಜೀವ ದಹನ

ಲಾರಿ ಪಲ್ಟಿಯಾಗಿ ಮೂವರು ಸಜೀವ ದಹನವಾಗಿರುವ ಘಟನೆ ಅರಕಲಗೂಡು ತಾಲೂಕಿನ ಬಸವನಹಳ್ಳಿ ಪಡುವಲಹಿಪ್ಪೆ ರಸ್ತೆ ತಿರುವಿನಲ್ಲಿ ಜರುಗಿದೆ.

ಲಾರಿ ಚಾಲಕ ಪುಟ್ಟರಾಜು (42), ಪ್ರಮೋದ್ (18) ಹಾಗೂ ಪರಮೇಶ್ (40) ಎಂಬುವವರು ಸಾವನ್ನಪ್ಪಿದವರು ಎಂದು ಗೊತ್ತಾಗಿದೆ.

ಮೈಸೂರಿನಿಂದ ಹಾಸನಕ್ಕೆ ಕೆಮಿಕಲ್ ಬಾಕ್ಸ್ ಗಳನ್ನು ಹೊತ್ತು ಬರುತ್ತಿದ್ದ ಲಾರಿ, ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಲಾರಿ ಉರುಳಿ ಬಿದ್ದ ರಭಸಕ್ಕೆ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಲಾರಿಯೊಳಗಿದ್ದ ಮೂವರು ಸಜೀವ ದಹನವಾಗಿದ್ದಾರೆ.

ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ ಚಾಲಕ ತನ್ನನ್ನು ತಾನು ರಕ್ಷಿಸಿಕೊಳ್ಳಲೆಂದು ಲಾರಿಯಿಂದ ಜಿಗಿದಿದ್ದಾರೆ. ಗಂಭೀರ ಗಾಯಗೊಂಡಿದ್ದ ಅವರನ್ನು ಕೂಡಲೇ ಹೊಳೆನರಸೀಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿ ದ್ದಾರೆ.
ಅರಕಲಗೂಡು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!