ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕುಮಾರಸ್ವಾಮಿ ಈ ಹಿಂದೆ 123 ಸ್ಥಾನ ಗಳಿಸದಿದ್ದರೆ ತಮ್ಮ ಪಕ್ಷವನ್ನು ವಿಸರ್ಜನೆ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ, ಚುನಾವಣೆಯಲ್ಲಿ ಅಷ್ಟು ಸ್ಥಾನಗಳು ಬಂದಿಲ್ಲ, ಏಕೆ ಇನ್ನೂ ಪಕ್ಷ ವಿಸರ್ಜನೆ ಮಾಡಿಲ್ಲ?” ಎಂದು ಪ್ರಶ್ನಿಸಿದರು.
136 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ಸರ್ಕಾರವನ್ನು ಪದೇಪದೇ ಪತನಗೊಳ್ಳಲಿದೆ ಎಂದು ಹೇಳುವುದು ಎಚ್.ಡಿ. ಕುಮಾರಸ್ವಾಮಿ ಅವರ ಘನತೆಯನ್ನು ತಗ್ಗಿಸುವಂತೆ ಕಾಣುತ್ತದೆ ಎಂದು ಸಚಿವರು ಹೇಳಿದರು. “ನಮ್ಮ ಸರ್ಕಾರ ಮೊದಲ ಸಚಿವ ಸಂಪುಟ ಸಭೆಯಿಂದಲೇ ಪತನವಾಗಲಿದೆ ಎಂದು ಅವರು ಹೇಳುತ್ತಲೇ ಇದ್ದಾರೆ,” ಎಂದರು.
ಚೆಲುವರಾಯಸ್ವಾಮಿ ಅವರು, “ಕೇಂದ್ರದಲ್ಲಿ ಅತಂತ್ರ ಸ್ಥಿತಿ ಇದೆ, ಕಾಂಗ್ರೆಸ್ ಪಕ್ಷವು 136 ಶಾಸಕರೊಂದಿಗೆ ಸದೃಢವಾಗಿದೆ. ಕುಮಾರಸ್ವಾಮಿಯವರು ತಮ್ಮ ಬಲವನ್ನು ಪರೀಕ್ಷಿಸಿಕೊಳ್ಳುವುದರ ಕಡೆಗೆ ಗಮನಹರಿಸಲಿ,” ಎಂದು ಟೀಕಿಸಿದರು.
“ಜೆಡಿಎಸ್-ಬಿಜೆಪಿ ಮೈತ್ರಿ ಅವರ ಆಂತರಿಕ ವಿಷಯವಾಗಿದೆ, ಅದಕ್ಕೆ ನಮಗೆ ಸಂಬಂಧವಿಲ್ಲ. ನಮ್ಮ ಗಮನವು ಉಪಚುನಾವಣೆಗಳತ್ತ ಮತ್ತು ರಾಜ್ಯದ ಜನರ ಸೇವೆಯತ್ತ,” ಎಂದು ಸಚಿವರು ಹೇಳಿದರು.ಇದನ್ನು ಓದಿ –ಅತ್ಯಾಚಾರ ಕೇಸ್: ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಜಾ
ಮಂಗಳವಾರ ರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಚುನಾವಣೆ ಮತ್ತು ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆ ಸಚಿವರ ಸಭೆ ನಡೆಸಿದ್ದಾರೆ ಎಂದು ತಿಳಿಸಿದರು.
More Stories
ಕರ್ನಾಟಕ ಬಂದ್ಗೆ ಕನ್ನಡಪರ ಸಂಘಟನೆಗಳ ನಿರ್ಧಾರ – ಶೀಘ್ರದಲ್ಲೇ ಅಧಿಕೃತ ಘೋಷಣೆ!
ನಾಳೆಯಿಂದ ಆರಂಭವಾಗುವ ದ್ವಿತೀಯ PUC ಪರೀಕ್ಷೆ – ಸಂಪೂರ್ಣ ಮಾಹಿತಿ ಇಲ್ಲಿದೆ!
ಆಧಾರ್ ದೃಢೀಕರಣಕ್ಕೆ ಖಾಸಗಿ ಕಂಪನಿಗಳಿಗೆ ಅನುಮತಿ