ಮೆಗಾಸ್ಟಾರ್ ಚಿರಂಜೀವಿ ಮಗಳು ಶ್ರೀಜಾ ಮೂರನೇ ಮದುವೆಗೆ ಸಿದ್ದತೆ ಮಾಡುತ್ತಿದ್ದಾಳೆಂಬ ವದಂತಿ ಹಬ್ಬಿದೆ
ಟಾಲಿವುಡ್‌ನ ಗಲ್ಲಿಯಲ್ಲಿ ಶ್ರೀಜಾ ಮತ್ತೆ ಸುದ್ದಿಯಲ್ಲಿದ್ದಾರೆ. ಕಲ್ಯಾಣ್ ಜತೆಗಿನ ಶ್ರೀಜಾ ವಿಚ್ಛೇದನದ ಬಗ್ಗೆ ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿವೆ. ಈ ಬೆನ್ನಲ್ಲೇ ಮೂರನೇ ಮದುವೆಗೆ ಚಿರಂಜೀವಿ ಪುತ್ರಿ ರೆಡಿಯಾಗಿದ್ದಾರೆ. ಇದನ್ನು ಓದಿ – ಪವಿತ್ರಾ ಲೋಕೇಶ್ 3ನೇ ಮದುವೆ ಗಾಸಿಪ್ : ಸೈಬರ್ ಕ್ರೈಂಗೆ ದೂರು ನೀಡಿದ ನಟಿ
ಈ ಹಿಂದೆ ಶ್ರೀಜಾ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹೆಸರು ಬದಲಿಸಿಕೊಂಡಿದ್ದರು. ತಮ್ಮ ಹೆಸರಿನಿಂದ ಪತಿಯ ಹೆಸರನ್ನು ತೆಗೆದು ಹಾಕಿದ್ದರು. ಆಗಲೇ ಒಂದಷ್ಟು ಊಹಾ ಪೋಹಗಳು ಹಬ್ಬಿದ್ದವು. ಆದರೆ ಇವರೆಗೂ ಶ್ರೀಜಾ ಮತ್ತು ಕಲ್ಯಾಣ್ ಜತೆಗಿನ ಡಿವೋರ್ಸ್ ಕುರಿತು ಯಾವುದೇ ಅಧಿಕೃತ ಮಾಹಿತಿ ಮೆಗಾಸ್ಟಾರ್ ಕುಟುಂಬ ಕೊಟ್ಟಿಲ್ಲ.
ಶ್ರೀಜಾ 2007ರಲ್ಲಿ ಮನೆಯವರ ವಿರುದ್ಧ ನಿಂತು ಸಿರೀಶ್ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದರು. ಕಾರಣಾಂತರಗಳಿಂದ ಅವರಿಂದ ಡಿವೋರ್ಸ್ ಪಡೆದು, 2016ರಲ್ಲಿ ತಂದೆ ನೋಡಿರುವ ಹುಡುಗ ಕಲ್ಯಾಣ್ ದೇವ್ ಅವರನ್ನು ಮದುವೆಯಾದರು. ಈಗ ಈ ಜೋಡಿಯ ಕುರಿತು ವಿಚ್ಛೇದನದ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ. ಈ ಬೆನ್ನಲ್ಲೇ ಮೆಗಾಸ್ಟಾರ್ ಪುತ್ರಿ ಮೂರನೇ ಮದುವೆಗೆ ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ.
ಅಷ್ಟಕ್ಕೂ ಈ ವಿಚಾರ ನಿಜಾನಾ ಮೆಗಾಸ್ಟಾರ್ ಕುಟುಂಬದ ಪ್ರತಿಕ್ರಿಯೆ ಸಿಗುವವರೆಗೂ ಕಾದುನೋಡಬೇಕಿದೆ.
- ದೇವತೆಗಳ ಆರಾಧನೆಗೆ ಮೀಸಲಾದ ದೇವಮಾಸ ಮಾರ್ಗಶಿರಮಾಸ
- ಬೊಲೆರೋ ಡಿಕ್ಕಿಯಿಂದ ಐವರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ
- ಗೃಹಲಕ್ಷ್ಮಿ ಯೋಜನೆ ಸ್ಥಗಿತ ಮಾಡುವ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ
- 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇತಿಹಾಸ ಸೃಷ್ಟಿಸಲಿದೆ: ಸಚಿವ ಚಲುವರಾಯಸ್ವಾಮಿ
- ಸಿಎಂ ಪತ್ನಿಯ ನಿವೇಶನ ಹಗರಣ: ದೂರು ಹಿಂಪಡೆಯಲು ಆಮಿಷ ನೀಡಿದ ಆರೋಪ
More Stories
2025ರಿಂದ ಕ್ಯಾನ್ಸರ್ ಲಸಿಕೆ ಉಚಿತ ವಿತರಣೆ: ಮಹತ್ವದ ವೈದ್ಯಕೀಯ ಸಾಧನೆ
ವಿರೋಧ ಲೆಕ್ಕಿಸದ ಮೋದಿ ಸರ್ಕಾರ
ಒಂದು ದೇಶ, ಒಂದು ಚುನಾವಣೆ ಮಸೂದೆ ಲೋಕಸಭೆಯಲ್ಲಿ ಮಂಡನೆ