ಬೆಂಗಳೂರಿನ ಜೆಜೆ ಹಳ್ಳಿ ಚಂದ್ರು ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲು ಸೂಚಿಸಿರುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಬೊಮ್ಮಾಯಿ, ಚಂದ್ರು ಹತ್ಯೆ ಪ್ರಕರಣದ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಅನೇಕರು ಅನೇಕ ರೀತಿಯಲ್ಲಿ ವ್ಯಾಖ್ಯಾನ ಕೂಡ ಮಾಡುತ್ತಾರೆ. ಆದರೆ ಸತ್ಯ ಹೊರತಾಗಿ ನಮಗೆ ಬೇರೆ ಎಲ್ಲಾ ಅಂಶಗಳು ಗೌಣ ಎಂದರು
ಈ ಪ್ರಕರಣವನ್ನು ಸಿಐಡಿ ವಹಿಸುವ ಸಂಬಂಧ ನಾನು ಡಿಜಿ ಪ್ರವೀಣ್ ಸೂದ್ ಹಾಗೂ ಕಮೀಷನರ್ ಪಂತ್ ಅವರನ್ನು ಕರೆದು ಮಾತುಕತೆ ಮಾಡಿದ್ದೇನೆ ಎಂದರು.
ಸೈಮನ್ ರಾಜ್ ನಾಪತ್ತೆ ?
ಈ ನಡುವೆ ಚಂದ್ರು ಗೆಳೆಯ ಸೈಮನ್ ರಾಜ್ ನಿಗೆ RSS 5 ಲಕ್ಷ ರು ದೇಣಿಗೆ ನೀಡಿದೆ ಎಂಬ ಶಾಸಕ ಜಮೀರ್ ಅಹ್ಮದ್ ಖಾನ್ ಗಂಭೀರ ಆರೋಪದ ಬೆನ್ನಲ್ಲಿಯೇ ಚಂದ್ರು ಸ್ನೇಹಿತ ಸೈಮನ್ ರಾಜ್ ಕಣ್ಮರೆಯಾಗಿದ್ದಾನೆ.
ಸೈಮನ್ ರಾಜ್ ಕಣ್ಮರೆಯಾಗಿದ್ದಾನೆ ಎಂಬ ಮಾಹಿತಿ ದೊರಕಿದೆ. ಸೈಮನ್‍ಗೆ ರಾಜಕೀಯ ಮುಖಂಡರ ಆಶ್ರಯ ಬಗ್ಗೆ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಮಾಹಿತಿ ಸಿಕ್ಕಿದೆ. ನಿಜಕ್ಕೂ ಸೈಮನ್ ಹಣ ಪಡೆದೇ ಹೇಳಿಕೆ ಕೊಟ್ಟಿದ್ದಾರೆಯೇ ಎಂಬ ಅನುಮಾನ ಇದೀಗ ಮೂಡಿದೆ.
- ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನದ ಏರ್ಸ್ಟ್ರೈಕ್: 15 ಮಂದಿ ಮೃತ್ಯು
- ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ !
- ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಬಿಡುಗಡೆ
- ಮೈಸೂರಿನ ಪ್ರಮುಖ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು: ಪಾಲಿಕೆ ತೀರ್ಮಾನಕ್ಕೆ ಆಕ್ಷೇಪಣೆಗಳು
- ಸಿ.ಟಿ. ರವಿ ಪ್ರಕರಣ CID ಗೆ ಹಸ್ತಾಂತರ: ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ
More Stories
ಡಿ.ಕೆ. ಸುರೇಶ್ ತಂಗಿ ಎಂದು ಹೇಳಿಕೊಂಡು 8.41 ಕೋಟಿ ಚಿನ್ನಾಭರಣ ವಂಚನೆ: ಎಫ್ಐಆರ್ ದಾಖಲು
ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ