ಬೆಂಗಳೂರು: ಮುಂದಿನ 48 ಗಂಟೆಗಳ ಕಾಲ ಬೆಂಗಳೂರಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಕೊಡಗು, ಕೋಲಾರ, ಮೈಸೂರು, ರಾಮನಗರ, ಶಿವಮೊಗ್ಗ ಮತ್ತು ತುಮಕೂರಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರಿನಲ್ಲಿ ಈಗಾಗಲೇ ಮೋಡಕವಿದ ವಾತಾವರಣ ಉಂಟಾಗಿದೆ. ಬಿಂಗಿತ ಪ್ರದೇಶಗಳ ಉಷ್ಣಾಂಶದ ಅಂಕಿಅಂಶಗಳು ಹೀಗಿವೆ:
- ಎಚ್‌ಎಎಲ್‌ನಲ್ಲಿ ಗರಿಷ್ಠ ಉಷ್ಣಾಂಶ 28.3°ಸೆಲ್ಸಿಯಸ್, ಕನಿಷ್ಠ 18.5°ಸೆಲ್ಸಿಯಸ್.
- ನಗರದಲ್ಲಿ ಗರಿಷ್ಠ ಉಷ್ಣಾಂಶ 28.8°ಸೆಲ್ಸಿಯಸ್, ಕನಿಷ್ಠ 19.0°ಸೆಲ್ಸಿಯಸ್.
- ಕೆಐಎಎಲ್‌ನಲ್ಲಿ ಗರಿಷ್ಠ ಉಷ್ಣಾಂಶ 29.7°ಸೆಲ್ಸಿಯಸ್, ಕನಿಷ್ಠ 19.4°ಸೆಲ್ಸಿಯಸ್.
- ಜಿಕೆವಿಕೆ ಪ್ರದೇಶದಲ್ಲಿ ಗರಿಷ್ಠ ಉಷ್ಣಾಂಶ 29.0°ಸೆಲ್ಸಿಯಸ್, ಕನಿಷ್ಠ 18.2°ಸೆಲ್ಸಿಯಸ್.
ಇನ್ನೂ ವಿಜಯನಗರ, ದಾವಣಗೆರೆ, ಹಾಸನ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಹಾವೇರಿ, ಗದಗ, ಧಾರವಾಡ, ಬೀದರ್, ಬೆಳಗಾವಿ, ಬಾಗಲಕೋಟೆ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.ಇದನ್ನು ಓದಿ –ಮಾಜಿ ಸಿಎಂ ಎಸ್ ಎಂ ಕೃಷ್ಣ ಇನ್ನಿಲ್ಲ
ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ನಾಗರಿಕರಿಗೆ ಹಾಗೂ ಸ್ಥಳೀಯ ಆಡಳಿತಕ್ಕೆ ಸೂಚಿಸಲಾಗಿದೆ.
More Stories
ಮುರುಡೇಶ್ವರ ಬೀಚ್ ದುರಂತ: ನಾಲ್ವರು ಬಾಲಕಿಯರು ನೀರುಪಾಲು, ಪ್ರಾಂಶುಪಾಲು ಅಮಾನತು, 6 ಮಂದಿ ವಜಾ
ಎಸ್.ಎಂ.ಕೃಷ್ಣ ಅಂತ್ಯಕ್ರಿಯೆ: ಹುಟ್ಟೂರ ಸೋಮನಹಳ್ಳಿಯಲ್ಲಿ ಗಣ್ಯರಿಂದ ಅಂತಿಮ ನಮನ
ಪದವೀಧರರಿಗೆ ಸುವರ್ಣಾವಕಾಶ: ಸುಪ್ರೀಂಕೋರ್ಟ್ನಲ್ಲಿ 107 ಹುದ್ದೆಗಳ ನೇಮಕಾತಿ