ಚಾಮರಾಜನಗರ ಆ್ಯಕ್ಸಿಜನ್ ದುರಂತ: ಮೂರು ತನಿಖಾ ತಂಡ – ಗೊಂದಲ ಸೃಷ್ಟಿ

Team Newsnap
1 Min Read

ಚಾಮರಾಜನಗರ ಜಿಲ್ಲೆಯ ಆಕ್ಸಿಜನ್ ದುರಂತ ಪ್ರಕರಣದ ಬಗ್ಗೆ ಮೂರು ತನಿಖಾ ತಂಡಗಳಿಂದ ಪ್ರತ್ಯೇಕವಾಗಿ ತನಿಖೆ ನಡೆಸಲಾಗುತ್ತಿದೆ.‌

ಮೂರು ತನಿಖಾ ತಂಡಗಳಿಂದ ಪ್ರತ್ಯೇಕ ತನಿಖೆ ನಡೆಯುತ್ತಿದೆ.
ನಿವೃತ್ತ ನ್ಯಾಯಮೂರ್ತಿ ಬಿ.ಎ.ಪಾಟೀಲ್ ಏಕಸದಸ್ಯ ಆಯೋಗದಿಂದ ನ್ಯಾಯಾಂಗ ತನಿಖೆ.
ಐಎಎಸ್ ಅಧಿಕಾರಿ ಕೆಎಸ್​​ಆರ್​​ಟಿಸಿ ಎಂ.ಡಿ. ಶಿವಯೋಗಿ ಕಳಸದ್ರಿಂದ ವಿಚಾರಣೆ.ಹಾಗೂ ಹೈಕೋರ್ಟ್ ನೇಮಿಸಿರುವ ನ್ಯಾಯಮೂರ್ತಿ ಕೇಶವನಾರಾಯಣ, ನ್ಯಾ.ವೇಣುಗೋಪಾಲ ನೇತೃತ್ವದ ಸಮಿತಿಯಿಂದ ತನಿಖೆ.

ಈಗಾಗಲೆ  ಶಿವಯೋಗಿ ಕಳಸದ್ ವಿಚಾರಣೆ ನಡೆಸಿ ತೆರಳಿದ್ದಾರೆ. ಇನ್ನೊಂದೆಡೆ ಮುಖ್ಯಕಾರ್ಯದರ್ಶಿಗೆ ಹೈಕೋರ್ಟ್ ಸೂಚನೆ ನೀಡಿದ ಮೇರೆಗೆ ಪೊಲೀಸರು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಶೀಘ್ರದಲ್ಲೇ ನ್ಯಾಯಾಂಗ ತನಿಖೆ ಆರಂಭವಾಗಲಿದೆ.

ಶಿವಯೋಗಿ ಕಳಸದ್ ಅವರಿ​ಗೆ ಸರ್ಕಾರ ಮೂರು ದಿನಗಳ ಒಳಗೆ ವರದಿ ನೀಡುವಂತೆ ಸೂಚಿಸಿತ್ತು. ಆದರೆ, ದುರಂತ ನಡೆದು ಆರು ದಿನಗಳಾಯ್ತು ಇಲ್ಲಿವರೆಗೂ ವರದಿ ಸಲ್ಲಿಕೆಯಾಗಿಲ್ಲ.

Share This Article
Leave a comment