ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಕೊರೋನಾ ಸೋಂಕಿನಿಂದಾಗಿ ಚಿಕಿತ್ಸೆಗೆ ದಾಖಲಾಗಿದ್ದ ಸುರೇಶ್ ಎಂಬ ರೋಗಿಯ ಮೃತದೇಹ ಜಿಲ್ಲಾಸ್ಪತ್ರೆಯ ಮುಂಭಾಗ ರಸ್ತೆಯ ಪಕ್ಕದಲ್ಲಿ ಪತ್ತೆಯಾಗಿದೆ.
ಚಾಮರಾಜನಗರ ತಾಲೂಕಿನ ಆಲ್ದೂರು ಗ್ರಾಮದ ಸುರೇಶ್ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಆದರೆ ಸುರೇಶ್ ಆಸ್ಪತ್ರೆಯಿಂದ ನಿನ್ನೆ ರಾತ್ರಿ ಕಾಣೆಯಾಗಿದ್ದರು ಎನ್ನಲಾಗಿದೆ.
ಆದರೆ ಈ ಕುರಿತು ಜಿಲ್ಲಾಸ್ಪತ್ರೆಗೆ ಯಾವುದೇ ಮಾಹಿತಿ ನೀಡಿಲ್ಲ ಎನ್ನಲಾಗಿದೆ. ದುರಂತ ಅಂದ್ರೆ ಅವರ ಮೃತದೇಹ ಇಂದು ಬೆಳಗ್ಗೆ ರಸ್ತೆ ಪಕ್ಕದ ಮೋರಿಯಲ್ಲಿ ಪತ್ತೆಯಾಗಿದೆ.
ಕೊರೊನಾ ರೋಗಿಯನ್ನು ಹೊರಹೋಗಲು ಬಿಟ್ಟು ಆಸ್ಪತ್ರೆ ಸಿಬ್ಬಂದಿ ದೊಡ್ಡ ಯಡವಟ್ಟು ಮಾಡಿಕೊಂಡಿದ್ದಾರೆ.
ಮೃತದೇಹವನ್ನು ಅನಾಥ ಶವವೆಂದು ಪೊಲೀಸರು ಶವಾಗಾರಕ್ಕೆ ಕೊಂಡೊಯ್ದು ಇಟ್ಟಿದ್ದರಂತೆ. ಈ ವಿಚಾರ ಕುಟುಂಬಸ್ಥರಿಗೆ ತಿಳಿಯದ ಹಿನ್ನೆಲೆ ಬೆಳಗ್ಗಿನಿಂದಲೇ ಸೋಂಕಿತ ಸುರೇಶ್ಗಾಗಿ ಹುಡುಕಾಟ ನಡೆಸಿದ್ದಾರೆ.
ಶವಾಗಾರದಲ್ಲಿ ಶವ ಇಟ್ಟಿರುವ ವಿಚಾರ ಮಾಧ್ಯಮಗಳಿಂದಾಗಿ ಕುಟುಂಬಸ್ಥರಿಗೆ ಗೊತ್ತಾಗಿದೆ. ಮೃತದೇಹ ತನ್ನ ಪತಿಯದ್ದೇ ಎಂದು ಗೊತ್ತಾಗಿ ಪತ್ನಿ ತೀವ್ರವಾಗಿ ರೋಧಿಸಿದ್ದಾರೆ.
ಪೊಲೀಸರು ಮೃತದೇಹ ಸಾಗಿಸುವಾಗ ತಮಗೆ ಅದು ಸೋಂಕಿತನ ಮೃತದೇಹವೆಂದು ತಿಳಿಯದೇ ಸಾಗಿಸಿದ್ದಾರೆ. ಇವೆಲ್ಲವುದರ ಪರಿಣಾಮ ಎದುರಿಸುವ ಅನಿವಾರ್ಯತೆ ಇದೆ.
- ರಾಜ್ಯ ಸರ್ಕಾರದಿಂದ 11 ಡಿವೈಎಸ್ಪಿ (ಸಿವಿಲ್) ಅಧಿಕಾರಿಗಳ ವರ್ಗಾವಣೆ
- MUDA ಹಗರಣ: ಜೆಡಿಎಸ್ ಶಾಸಕ ಜಿಟಿಡಿ ವಿರುದ್ಧ ಕಿಕ್ಬ್ಯಾಕ್ ಆರೋಪ, ಲೋಕಾಯುಕ್ತದಲ್ಲಿ ದೂರು
- ನಕಲಿ ಸಿಗರೇಟ್ ತಯಾರಿಸಿ ಮಾರಾಟ – ಕೋಟಿ ಮೌಲ್ಯದ ಸಿಗರೇಟ್ ವಶ
- ರಾಜ್ಯ ಸರ್ಕಾರದಿಂದ 41 ಪೊಲೀಸ್ ಇನ್ಸ್ಪೆಕ್ಟರ್ಗಳ ದಿಢೀರ್ ವರ್ಗಾವಣೆ
- ನಿಮ್ಮ ಮನದ ಭಾವನೆಗಳನ್ನು ಅರ್ಥಮಾಡಿಕೊಳ್ಳುವವರೇ ಇಲ್ಲದಾಗ …?
More Stories
ರಾಜ್ಯ ಸರ್ಕಾರದಿಂದ 11 ಡಿವೈಎಸ್ಪಿ (ಸಿವಿಲ್) ಅಧಿಕಾರಿಗಳ ವರ್ಗಾವಣೆ
MUDA ಹಗರಣ: ಜೆಡಿಎಸ್ ಶಾಸಕ ಜಿಟಿಡಿ ವಿರುದ್ಧ ಕಿಕ್ಬ್ಯಾಕ್ ಆರೋಪ, ಲೋಕಾಯುಕ್ತದಲ್ಲಿ ದೂರು
ನಕಲಿ ಸಿಗರೇಟ್ ತಯಾರಿಸಿ ಮಾರಾಟ – ಕೋಟಿ ಮೌಲ್ಯದ ಸಿಗರೇಟ್ ವಶ