ನ್ಯೂಸ್ ಸ್ನ್ಯಾಪ್.
ಚಿತ್ರದುರ್ಗ.
ಬೆಳ್ಳೂರು ಕ್ರಾಸ್‍ನಿಂದ ಯಡಿಯೂರು ಮಾರ್ಗ ಮಧ್ಯದಲ್ಲಿರುವ ಸುಮಾರು 500 ಎಕರೆ ಪ್ರದೇಶವನ್ನು ಕರ್ನಾಟಕ ಹೌಸಿಂಗ್ ಬೋರ್ಡ್ ವಶಮಾಡಿಕೊಂಡಿದೆ. ಇದರಲ್ಲಿ ಬಹುಪಾಲು ಕೃಷಿ ಭೂಮಿ ಇದೆ. ಇಂತಹ ಅವೈಜ್ಞಾನಿಕ ಸ್ವಾಧೀನ ಪ್ರಕ್ರಿಯೆಗೆ ತಮ್ಮ ವಿರೋಧವಿದೆ ಎಂದು ಮಾಜಿ ಸಚಿವ ಚಲುವರಾಯ ಸ್ವಾಮಿ ಬುಧವಾರ ಹೇಳಿದರು.
ನಗರದ ಕಾಂಗ್ರೆಸ್ ಕಛೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವರಾದ ಎನ್. ಚೆಲುವರಾಯ ಸ್ವಾಮಿ, ಈಗಾಗಲೇ ಹೌಸಿಂಗ್ ಬೋರ್ಡ್ ನವರು ಲೇಔಟ್ ರಚನೆಗೆ ಟೆಂಡೆರ್ ಕರೆದು, ಎಲ್ಲಾ ಕಾರ್ಯಗಳು ಪೂರ್ಣವಾಗಿವೆ” ಎಂದರು.
“ಅಲ್ಲದೇ ಕೆಲವು ವರ್ಷಗಳ ಹಿಂದೆ ಕರ್ನಾಟಕ ಅಭಿವೃದ್ಧಿ ಮಂಡಳಿ (ಕೆಡಿಬಿ) ಯವರು ಪ್ರೇಮ್ ಶುಗರ್ ಎಂಬ ಕಂಪನಿಯ ಮನವಿಯಂತೆ 500 ಎಕರೆ ಜಾಗವನ್ನು ಕಾರ್ಖಾನೆ ನಿರ್ಮಿಸಲು ಇದೇ ಪ್ರದೇಶದಲ್ಲಿ ನೀಡಲಾಗಿದೆ. ಆದರೆ ಅನೇಕ ವರ್ಷಗಳು ಕಳೆದರೂ ಕಾರ್ಖಾನೆಯ ಯಾವ ಕಾಮಗಾರಿಗಳೂ ಪ್ರಾರಂಭವಾಗಿಲ್ಲ ಎಂದರು.
ಈಗ ಕರ್ನಾಟಕ ಅಭಿವೃದ್ಧಿ ಮಂಡಳಿಯು ಒಟ್ಟು 1200 ಎಕರೆ ಭೂಮಿಯನ್ನು ಸ್ವಾಧೀನ ಮಾಡಲು ಪ್ರಯತ್ನಸುತ್ತಿದೆ. ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರದಲ್ಲಿದ್ದಾಗ ಈ ಯೋಜನೆ ಜಾರಿಗೆ ಬಂದಿದೆ. ಈ ಯೋಜನೆಯಿಂದ ಅಲ್ಲಿ ಕೃಷಿ ಭೂಮಿಯನ್ನು ಹೊಂದಿದ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಹಾಗಾಗಿ ಇದೊಂದು ಅವೈಜ್ಞಾನಿಕ ಸ್ವಾಧೀನ ಕ್ರಮವಾಗಿದೆ ಎಂದು ತಿಳಿಸಿದರು.
ನಾನು ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಯೋಜನೆಯನ್ನು ತಡೆಹಿಡಿಯುವಂತೆ ಅಥವಾ ಜನಸಾಮಾನ್ಯರು ಹಾಗೂ ರೈತರಿಗೆ ತೊಂದರೆಯಾಗದಂತಹ ಪ್ರದೇಶದಲ್ಲಿ ಯೋಜನೆಯನ್ನು ಜಾರಿ ಮಾಡುವಂತೆ ಮನವಿ ಮಾಡಿದ್ದೇನೆ. ಹಾಗೂ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯನವರ ಗಮನಕ್ಕೂ ಈ ವಿಚಾರವನ್ನು ತರುತ್ತೇನೆ” ಎಂದರು.
More Stories
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ