February 23, 2026

Newsnap Kannada

The World at your finger tips!

barki

ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ‌ ಚಳ್ಳಕೆರೆ ತಾಪಂ ಇಒ ಬಾರ್ಕಿ

Spread the love

ಲಂಚ ಪಡೆಯುವ ವೇಳೆ ತಾಲೂಕು ಪಂಚಾಯ್ತಿ ಇ.ಓ ಎಸಿಬಿ ಬಲೆಗೆ ಬಿದ್ದ ಘಟನೆ ಚಿತ್ರದುರ್ಗದಲ್ಲಿ ಜರುಗಿದೆ.

ಚಳ್ಳಕೆರೆ ತಾ.ಪಂ ಇಓ ಡಾ.ಶ್ರೀಧರ್ ಬಾರ್ಕಿ ಎಸಿಬಿ ಬಲೆಗೆ ಬಿದ್ದ ಅಧಿಕಾರಿ.

ಬೆಳಗೆರೆ ಗ್ರಾಮ ಪಂಚಾಯ್ತಿಯ 10 ಯೋಜನೆಗಳಿಗೆ ಅನುಮೋದನೆ ನೀಡಲು ಶ್ರೀಧರ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.

ಪಿಡಿಓ ಗುಂಡಪ್ಪ ಬಳಿ ಶ್ರೀಧರ್ 20 ಸಾವಿರ ರೂಪಾಯಿ ಲಂಚ ಪಡೆಯುವ ವೇಳೆ ಎಸಿಬಿ ದಾಳಿ ನಡೆಸಿ, ರೆಡ್​ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.

ಎಸಿಬಿ ಡಿವೈಎಸ್​​ಪಿ ಬಸವರಾಜ ಹಾಗೂ ಪೊಲೀಸ್​ ಇನ್ಸ್​ಪೆಕ್ಟರ್​ ಪ್ರವೀಣ್ ನೇತೃತ್ವದಲ್ಲಿ ದಾಳಿ ನಡೆದಿದೆ

error: Content is protected !!