ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಕುರಿತಂತೆ ಟ್ವಿಟ್ ಮಾಡಿ ಗೋಧಿ, ಮೊಸರು, ಅಥವಾ ಲಸ್ಸಿ, ಅಕ್ಕಿ, ಓಟ್ಸ್, ಹಿಟ್ಟು, ತೊಗರಿಬೆಳೆ, ಮಂಡಕ್ಕಿ, ರವೆ, ಜೋಳ, ಸಣ್ಣ ಗೋಧಿಗಳ ಮೇಲಿನ ಜಿಎಸ್‍ಟಿ ವಿನಾಯಿತಿಯನ್ನು ನೀಡಲಾಗಿದೆ. ಆದರೆ ಇದಕ್ಕೆ ಕೆಲವು ಷರತ್‍ನ್ನು ವಿಧಿಸಲಾಗಿದೆ.DK ಸುರೇಶ್ ಆಪ್ತೆ ಕಾಂಗ್ರೆಸ್ ನಾಯಕಿ ನವ್ಯಶ್ರೀಯಿಂದ ಹನಿಟ್ರ್ಯಾಪ್? : ಅಧಿಕಾರಿಗೆ ಜೀವ ಬೆದರಿಕೆ – ದೂರು
ಈ ಎಲ್ಲಾ ವಸ್ತುಗಳ ಮೇಲೆ ಲೇಬಲ್ ಇದ್ದರೇ ಅಥವಾ ಪ್ಯಾಕ್ ಮಾಡಿದರೆ ಜಿಎಸ್‍ಟಿ ವಿನಾಯಿತಿ ಅನ್ವಯಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಬೇಳೆಕಾಳುಗಳು, ಧಾನ್ಯಗಳು, ಹಿಟ್ಟು ಮುಂತಾದ ನಿರ್ದಿಷ್ಟ ಆಹಾರ ಪದಾರ್ಥಗಳ ಮೇಲೆ ಜಿಎಸ್‌ಟಿ ವಿಧಿಸುವ ಬಗ್ಗೆ ತಪ್ಪು ಕಲ್ಪನೆಗಳಿವೆ. ಇದು ಜಿಎಸ್‌ಟಿ ಕೌನ್ಸಿಲ್‌ನ ಸರ್ವಾನುಮತದ ನಿರ್ಧಾರವಾಗಿದೆ, ಜೂನ್ 28ರಂದು ಚಂಡೀಗಢದಲ್ಲಿ ನಡೆದ 47ನೇ ಸಭೆಯಲ್ಲಿ ದರ ತರ್ಕಬದ್ಧಗೊಳಿಸುವಿಕೆಯ ಕುರಿತು ಈ ವಿಷಯವನ್ನು ಮಂಡಿಸುವಾಗ ಎಲ್ಲಾ ರಾಜ್ಯಗಳು ಜಿಎಸ್‌ಟಿ ಕೌನ್ಸಿಲ್‌ನಲ್ಲಿ ಉಪಸ್ಥಿತರಿದ್ದರು ಎಂದು ತಿಳಿಸಿದ್ದಾರೆ.
ಈ ನಿರ್ಧಾರದಲ್ಲಿ ಸಭೆಯಲ್ಲಿದ್ದ ಬಿಜೆಪಿಯೇತರ ರಾಜ್ಯಗಳಾದ ಪಂಜಾಬ್, ಛತ್ತೀಸ್‌ಗಢ, ರಾಜಸ್ಥಾನ, ತಮಿಳುನಾಡು, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಸೇರಿದಂತೆ ಎಲ್ಲಾ ರಾಜ್ಯಗಳು ಈ ನಿರ್ಧಾರವನ್ನು ಒಪ್ಪಿಕೊಂಡಿವೆ.
ಜಿಎಸ್‌ಟಿ ಕೌನ್ಸಿಲ್‌ನ ಈ ನಿರ್ಧಾರವು ಮತ್ತೊಮ್ಮೆ ಒಮ್ಮತದಿಂದ ಬಂದಿದೆ ಎಂದು ಜಿಎಸ್‌ಟಿ ದರ ಏರಿಕೆಯ ಬಗ್ಗೆ ಸಮರ್ಥಿಸಿಕೊಂಡಿದ್ದಾರೆ.
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ