February 21, 2026

Newsnap Kannada

The World at your finger tips!

NARESH

ಸಿಡಿ ಕಿಂಗ್ ಪಿನ್ ನರೇಶ್ ಗೌಡ 18 ಲಕ್ಷ ರು ಮೌಲ್ಯದ ಚಿನ್ನ‌ ಖರೀದಿ-ಯುವತಿ ಮನೆಯಲ್ಲಿ 23 ಲಕ್ಷ ರು ವಶ

Spread the love

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಬಗ್ಗೆ ಎಸ್‌ಐಟಿ ತನಿಖೆ ಚುರುಕುಗೊಂಡಿದ್ದು ಮಾಜಿ ಪತ್ರಕರ್ತ ನರೇಶ್‌ ಗೌಡ ಮನೆಯಲ್ಲಿ 18 ಲಕ್ಷ ಮೌಲ್ಯದ ಚಿನ್ನಾಭರಣ ಖರೀದಿ ರಶೀದಿ ಪತ್ತೆಯಾಗಿದೆ.

ತುಮಕೂರಿನ ಶಿರಾ ತಾಲೂಕಿನ ಭುವನಹಳ್ಳಿಯಲ್ಲಿರುವ ಮಾಜಿ ಪತ್ರಕರ್ತ ನರೇಶ್‌ ಗೌಡನ ಮನೆಯ
ಬುಧವಾರ ಎಸ್‌ಐಟಿ ದಾಳಿ ನಡೆಸಿತ್ತು.

ಈ ವೇಳೆ ಲ್ಯಾಪ್‍ಟಾಪ್‌ ಮತ್ತು 18 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಖರೀದಿ ಸ್ಲಿಪ್‍ಗಳು ಪತ್ತೆಯಾಗಿದೆ.

ಯುವತಿ ಮನೆಯಲ್ಲಿ 23 ಲಕ್ಷ ರು ಪತ್ತೆ :

ಯುವತಿ ತಂಗಿದ್ದ ಆರ್‌ಟಿ ನಗರದ ಮನೆಯಲ್ಲೂ 23 ಲಕ್ಷ ರೂ. ಹಣ ಸಿಕ್ಕಿದೆ. ಈಗ ಎಸ್‌ಐಟಿ ಪೊಲೀಸರು ಯುವತಿಗೆ ಇಷ್ಟೊಂದು ಹಣ ಎಲ್ಲಿಂದ ಬಂತು? ಇದರ ಮೂಲ ಯಾವುದು ಎಂಬುದರ ಬಗ್ಗೆ ತನಿಖೆಗೆ ಇಳಿದಿದೆ

ಸಿಡಿ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ನರೇಶ್‌ ಗೌಡ ಮತ್ತು ವಿಜಯಪುರ ದೇವನಹಳ್ಳಿಯ ಮೂಲದ ಹ್ಯಾಕಿಂಗ್‌ ತಜ್ಞ ಶ್ರವಣ್‌ ನಾಪತ್ತೆಯಾಗಿದ್ದಾರೆ.‌ ಇವರ ಪತ್ತೆ ಕಾರ್ಯವನ್ನು ಪೊಲೀಸರು ಮಾಡುತ್ತಿದ್ದಾರೆ.

error: Content is protected !!