ಸಿಡಿ ಪ್ರಕರಣ : ವರದಿಗಾರನ ಮನೆ ಮೇಲೆ ದಾಳಿ: ಪೋಲಿಸರ ವಿರುದ್ಧವೆ ಕಂಪ್ಲೆಂಟ್ ಕೊಡುವೆ- ಪೂಜಾ

Team Newsnap
1 Min Read

ಮಾಜಿ ಸಚಿವ ರಮೇಶ್​ ಜಾರಕಿಹೊಳಿಗೆ ‌ಸಂಬಂಧಿಸಿದಂತೆ ಸೆಕ್ಸ್ ಸಿಡಿ ಪ್ರಕರಣ ತನಿಖೆ ಮಾಡುತ್ತಿರುವ ಎಸ್​ಐಟಿ ತಂಡ ಮಿಂಚಿನ ಕಾರ್ಯಾಚರಣೆ ಮುಂದುವರೆಸಿದೆ.

ಸಿಡಿ ಕೇಸ್​ನ ಕಿಂಗ್​ಪಿನ್ ಎನ್ನಲಾದ ಶಿರಾ ತಾಲೂಕು ಭುವನಗಳ್ಳಿ ಗ್ರಾಮದ ನರೇಶ್​ಗೌಡ ಎಂಬಾತನ ನಿವಾಸದ ಮೇಲೂ ಎಸ್​ಐಟಿ ನಿನ್ನೆ ದಾಳಿ ಮಾಡಿದೆ.
ಈ ದಾಳಿ ಖಂಡಿಸಿ ಇದೀಗ ಪೊಲೀಸರ ವಿರುದ್ಧವೇ ದೂರು ಕೊಡುವುದಾಗಿ ನರೇಶ್​ಗೌಡನ ಪತ್ನಿ ಪೂಜಾ ಹೇಳಿದ್ದಾರೆ.

ಭುವನಗಳ್ಳಿಯ ಮನೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಪೂಜಾ, ನಿನ್ನೆ ರಾತ್ರಿ 3.45ಕ್ಕೆ ಎಸ್‌ಐಟಿ ತಂಡ ನನ್ನ ಮನೆಗೆ ಬಂದಿತ್ತು. ಪತಿ ನರೇಶ್ ಎಲ್ಲಿ? ಎಂದು ಕೇಳಿದರು. ನಾನು, ಅವರು ಇಲ್ಲಿಲ್ಲ. 6 ದಿನದಿಂದ ಫೋನ್ ಮಾಡಿಲ್ಲ ಅಂದೆ. ಮನೆಯನ್ನೆಲ್ಲಾ ಸರ್ಚ್ ಮಾಡಿದರು. ನನ್ನ ಮೊಬೈಲ್ ಪರಿಶೀಲನೆ ಮಾಡಿದರು ಎಂದು ವಿವರಿಸಿದರು.

ಮಗಳ ನಾಮಕರಣದ ಫೋಟೋ ವನ್ನೂ ಕೇಳಿದರು. ನಾವು ಆಲ್ಬಂ ಮಾಡಿಸಿರಲಿಲ್ಲ. ಹಾಗಾಗಿ ಕೊಟ್ಟಿಲ್ಲ. ನಾಮಕರಣದ ದಿನ ರಾಜಕಾರಣಿಗಳು ಬಂದಿದ್ದರು. ನನ್ನ ಪತಿ ವರದಿಗಾರ ಆಗಿದ್ದರಿಂದ ಸಹಜವಾಗಿ ಪರಿಚಯದ ರಾಜಕಾರಣಿಗಳು ಬಂದಿದ್ದಾರೆ. ಅದಕ್ಕೇ ಏನೇನೋ ತಪ್ಪು ಕಲ್ಪನೆ ಬೇಡ. ಅಂದು ತುಂಬಾ ಜನ ಅವರ ಸ್ನೇಹಿತರು ಬಂದಿದ್ದರು. ಅವರು ಯಾರ್ಯಾರು ಅಂತಾ ನನಗೆ ಗೊತ್ತಿಲ್ಲ ಎಂದಿದ್ದಾರೆ.

ನನ್ನ ಪತಿ ನರೇಶ್ ಈಗ ಎಲ್ಲಿದ್ದಾರಂತ ನನಗೆ‌ ಗೊತ್ತಿಲ್ಲ. ಅವರ ಮೇಲೆ ಆರೋಪ ಕೇಳಿ ಬಂದಿದೆ. ಈ ಆರೋಪದಿಂದ ಮುಕ್ತರಾಗಿ‌ ಬರುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದರು.

ಎಸ್​ಐಟಿ ಅಧಿಕಾರಿಗಳ ವಿರುದ್ಧ ದೂರು ನೀಡುತ್ತೇನೆ. ಮಧ್ಯರಾತ್ರಿ ಏಕಾಏಕಿ ಬಂದು‌ ವಿಚಾರಣೆ ಮಾಡಿದ್ದಾರೆ. ನಾವು ಮಹಿಳೆಯರು ಮಾತ್ರ ಇದ್ವಿ. ಅವರ ತಂಡದಲ್ಲಿ ಕನಿಷ್ಠ ಮಹಿಳಾ ಸಿಬ್ಬಂದಿಯೂ ಇರಲಿಲ್ಲ ಎಂದು ಪೂಜಾ ಆರೋಪಿಸಿದರು.

Share This Article
Leave a comment