- ನಟಿ ರಾಧಿಕಾ ವಿಚಾರಣೆಗೆ ನೋಟಿಸ್ ಜಾರಿ ಮಾಡಿದ ಸಿಸಿಬಿ
- 8 ಜನ ನಟಿಯರ ಜೊತೆ ನಂಟು
- ಮಾಜಿ ಶಾಸಕರ 1.50 ಕೋಟಿ ಬೆಲೆಯ ಕಾರನ್ನು 75 ಲಕ್ಷ ರೂ.ಗೆ ಖರೀದಿಸಿದ್ದ ಯುವರಾಜ್ ಸ್ವಾಮಿ
- ಮಾಜಿ ಶಾಸಕ ಸುರೇಶ್ ಬಾಬುಗೆ ಸೇರಿದ ಕಾರು
ವಂಚಕ ಯುವರಾಜ್ ನ ಕರ್ಮಕಾಂಡ ಗಳು ಬಗೆದಷ್ಟು ಬರುತ್ತವೆ ಈಗ ನಟಿ ರಾಧಿಕಾ ಮಾತ್ರವಲ್ಲದೆ 8 ಮಂದಿ ನಟಿಯರಿಗೆ ನೋಟಿಸ್ ನೀಡಲು ಸಿಸಿಬಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈಗಾಗಲೇ ನಟಿ ರಾಧಿಕಾ ವಿಚಾರಣೆಗೆ ಸಿಸಿಬಿ ನೋಟಿಸ್ ಜಾರಿ ಮಾಡಿದೆ.
ವಂಚಕ ಯುವರಾಜ್ ಸ್ವಾಮಿ ಬಳಿ ಹಣ ಪಡೆದ ನಟಿಯರಿಗೆ ಈಗ ಢವಢವ ಶುರುವಾಗಿದೆ. ಸ್ಟಾರ್ ನಟಿಯರನ್ನೂ ಸಹ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಹೀಗಾಗಿ ಸಿಸಿಬಿ ಯಾವುದೇ ಕ್ಷಣದಲ್ಲಿ ನೋಟಿಸ್ ನೀಡಲು ತಯಾರಿ ನಡೆಸಿದೆ ಎಂದು ಗೊತ್ತಾಗಿದೆ.
ಮಾಜಿ ಶಾಸಕನಿಗೆ ಯಾಮಾರಿಸಿದ ಸ್ವಾಮಿ :
ಆಡಿಯೋ ಸುದ್ದಿ ಬಹಿರಂಗಗೊಂಡ ಬಳಿಕ ಇದೀಗ ಒಂದೂವರೆ ಕೋಟಿ ರೂಪಾಯಿ ಬೆಲೆ ಬಾಳುವ ಕಾರನ್ನು ಕೇವಲ 75 ಲಕ್ಷ ರೂ.ಗೆ ಯುವರಾಜ್ ಸ್ವಾಮಿ ಖರೀದಿಸಿ ತುಮಕೂರಿನ ಮಾಜಿ ಶಾಸಕ ಸುರೇಶ್‍ಬಾಬ್‍ನನ್ನು ಯಾಮಾರಿಸಿರುವುದರ ಬಗ್ಗೆ ಅನುಮಾನ ಹುಟ್ಟಿದೆ.
ಸಿಸಿಬಿ ಜಪ್ತಿ ಮಾಡಿರುವ 2 ಕಾರಲ್ಲಿ ಒಂದು ರಾಜಕಾರಣಿಯದ್ದಾಗಿದೆ. ತುಮಕೂರಿನ ಮಾಜಿ ಶಾಸಕ ಸುರೇಶ್‍ಬಾಬ್‍ಗೆ ಸೇರಿದ ಕಾರು
ಬರೋಬ್ಬರಿ ಒಂದೂವರೆ ಕೋಟಿ ರೂಪಾಯಿಯ ರೇಂಜ್ ರೋವರ್ ಕಾರನ್ನು 75 ಲಕ್ಷಕ್ಕೆ ಕೊಡಲಾಗಿದೆಯೆ?
ರಾಧಿಕಾ ಗೆ ಸಧ್ಯದಲ್ಲೇ ನೋಟಿಸ ?
ವಂಚಕ ಯುವರಾಜ್ ನಿಂದ 75 ಲಕ್ಷ ರು ಪಡೆದ ನಟಿ ರಾಧಿಕಾ ಕುಮಾರಸ್ವಾಮಿಗೆ ಸಂಕಷ್ಟ ಎದುರಾಗಿದೆ. ನಟಿ ರಾಧಿಕಾಗೆ ನೋಟಿಸ್ ಕೊಟ್ಟು ವಿಚಾರಣೆ ನಡೆಸಲು ಸಿಸಿಬಿ ಪೊಲೀಸರು ತೀರ್ಮಾನಿಸಿದ್ದಾರೆ.
ಸಾಕ್ಷ್ಯಾಧಾರವಿದ್ದರೂ ಒತ್ತಡದಿಂದ ಸಿಸಿಬಿ ಪೊಲೀಸರು ಸುಮ್ಮನಿದ್ದರು. ಇದೀಗ ಹಣದ ಬಗ್ಗೆ ಸ್ವತಃ ರಾಧಿಕಾ ಬಾಯ್ಬಿಟ್ಟಿರುವುದರಿಂದ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಹಣದ ಮೂಲ, ಯುವರಾಜ್ ಜೊತೆಗಿನ ನಂಟಿನ ಬಗ್ಗೆ ವಿಚಾರಣೆ ನಡೆಸಬಹುದು ಎನ್ನಲಾಗಿದೆ. ಅಲ್ಲದೆ ಹಿರಿಯ ಅಧಿಕಾರಿಗಳ ಜೊತೆ ಸಿಸಿಬಿ ಅಧಿಕಾರಿಗಳು ಈಗಾಗಲೇ ಮಾತುಕತೆಯನ್ನು ಸಹ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ನಟಿ ರಾಧಿಕಾ ಮಾತ್ರವಲ್ಲದೆ 8 ನಟಿಯರಿಗೆ ನೋಟಿಸ್ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆ ನಟಿ ಮಣಿಗಳು ಯಾರು ಎಂಬುದು ಸಧ್ಯದಲ್ಲೇ ಬಹಿರಂಗವಾಗಲಿದೆ.
, ಯಾವುದೇ ಕ್ಷಣದಲ್ಲಿ ಸಿಸಿಬಿ ನೋಟಿಸ್ ನೀಡುವ ಸಾಧ್ಯತೆ ಇದೆ. ಯುವರಾಜ್ ಸ್ವಾಮಿ ಬಳಿ ಹಣ ಪಡೆದ ನಟಿಯರಿಗೆ ಈಗ ಢವಢವ ಶುರುವಾಗಿದೆ. ಸ್ಟಾರ್ ನಟಿಯರನ್ನು ಸಹ ವಿಚಾರಣೆ ನಡೆಸುವ ಸಾಧ್ಯತೆ ಇದೆ.
- ನ.20ರಂದು ಕರ್ನಾಟಕದಲ್ಲಿ ಬಾರ್ ಬಂದ್
- ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
- ಟಿಪ್ಪು ಸುಲ್ತಾನ್ನ ಖಡ್ಗ 3.4 ಕೋಟಿಗೆ ಹರಾಜು
- ಮುಖ್ಯಮಂತ್ರಿ ವಿರುದ್ಧ ಅಪಪ್ರಚಾರ ಆರೋಪ: ಸ್ನೇಹಮಯಿ ಕೃಷ್ಣ ವಿರುದ್ಧ ಎಫ್ಐಆರ್
- ₹5.50 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ, ಇಬ್ಬರು ಬಂಧನ
More Stories
ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
ಮುಖ್ಯಮಂತ್ರಿ ವಿರುದ್ಧ ಅಪಪ್ರಚಾರ ಆರೋಪ: ಸ್ನೇಹಮಯಿ ಕೃಷ್ಣ ವಿರುದ್ಧ ಎಫ್ಐಆರ್
₹5.50 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ, ಇಬ್ಬರು ಬಂಧನ