February 22, 2026

Newsnap Kannada

The World at your finger tips!

cbse

ಸಿಬಿಎಸ್ ಸಿ 12ನೇ ತರಗತಿಯ 20 ವಿಷಯಗಳಿಗೆ ಮಾತ್ರ ಪರೀಕ್ಷೆ? ಅಂತಿಮ ನಿರ್ಧಾರ ಮಂಗಳವಾರ

Spread the love

ಸಿಬಿಎಸ್ ಸಿ12ನೇ ತರಗತಿಯ 20 ವಿಷಯಗಳ ಮೇಲೆ ಮಾತ್ರ ಮಂಡಳಿ ಪರೀಕ್ಷೆ ನಡೆಸುವ ಸಾಧ್ಯತೆ ಇದೆ.

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ವಿಚಾರದ ಬಗ್ಗೆ ಚರ್ಚಿಸಲಾಗಿದೆ .ಈ ಬಗ್ಗೆ ಅಂತಿಮ ನಿರ್ಧಾರ ಮಂಗಳವಾರ ಪ್ರಕಟವಾಗಲಿದೆ.

ವಿದ್ಯಾರ್ಥಿಗಳಿಗೆ ಅಬ್ಜೆಕ್ಟೀವ್ ಟೈಪ್ ಪ್ರಶ್ನೆಗಳನ್ನು ಕೇಳಲು ತೀರ್ಮಾನಿಸಲಾಗಿದೆ. ಅಲ್ಲದೇ ಪರೀಕ್ಷೆಗಳನ್ನು ಹೋಂ ಸೆಂಟರ್​​ಗಳಲ್ಲಿಯೇ ಮಾಡಲು ಚಿಂತಿಸಲಾಗಿದೆ ಎಂದು ತಿಳಿದು ಬಂದಿದೆ.

ಇಂದಿನ‌ ಸಭೆಯಲ್ಲಿ ಎಲ್ಲಾ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಶಿಕ್ಷಣ ಸಚಿವರು, ಶಿಕ್ಷಣ ಕಾರ್ಯದರ್ಶಿ ಗಳು, ಪರೀಕ್ಷಾ ಮಂಡಳಿಯ ಮುಖ್ಯಸ್ಥರು ಹಾಗೂ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಕೂಡ ಹಾಜರಾಗಿದ್ದರು.

ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 14 ರಂದು ಸಿಬಿಎಸ್ ಸಿ ಮಂಡಳಿ 10 ಮತ್ತು 12 ನೇ ತರಗತಿಯ ಪರೀಕ್ಷೆಗಳನ್ನು ಮುಂದೂಡಲಾಗಿತ್ತು.‌

error: Content is protected !!