ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಇನ್ನು 2 ದಿನಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಅಧಿಕಾರಿಗಳು ಸಮನ್ಸ್ ನೀಡಿದ್ದಾರೆ. ನಿನ್ನೆ ಡಿಕೆಶಿ ಮನೆಯ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದರು.
ಆದಾಯಕ್ಕೂ ಮೀರಿ ತಮ್ಮ ಕುಟುಂಬದ ಹೆಸರಿನಲ್ಲಿ 74.97 ಕೋಟಿ ಆಸ್ತಿ ಗಳಿಕೆ ಮಾಡಿದ ಆರೋಪ ದ ಮೇಲೆ ನಿನ್ನೆ ಬೆಳ್ಳಂಬೆಳಿಗ್ಗೆ ಸಿಬಿಐ ಅಧಿಕಾರಿಗಳು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸದಾಶಿವನಗರದ ಮನೆ, ಕನಕಪುರ, ದೆಹಲಿ, ಮುಂಬೈ ಸೇರಿದಂತೆ ಒಟ್ಟು 14 ಭಾಗಗಳಲ್ಲಿ
ದಾಳಿ ಮಾಡಿದ್ದರು.
ಐಟಿ ಹಾಗೂ ಇಡಿ ದಾಳಿ ನಂತರ ಡಿಕೆಶಿ ಅವರ ಮನೆಯ ಮೇಲೆ ದಾಳಿ ನಡೆಸಿದ್ದ ಸಿಬಿಐ ಅಧಿಕಾರಿಗಳು 50 ಲಕ್ಷ ಮೊತ್ತದ ಹಣವನ್ನು ವಶಪಡಿಸಿಕೊಂಡಿದ್ದರು. ಮುಂಬರುವ ಉಪಚುಣವಣೆಗಳಿಗೆ ಶೇಖರಿಸಿಟ್ಟಿದ್ದ ಹಣವೇ? ಅದು ಎಂಬ ಅನುಮಾನಗಳು ವ್ಯಕ್ತವಾಗಿದ್ದವು. ಅಲ್ಲದೇ ವಶ ಮಾಡಿಕೊಂಡ ಹಣಕ್ಕೆ ಯಾವುದೇ ದಾಖಲೆಗಳು ಸಹ ಲಭ್ಯವಾಗಿರಲಿಲ್ಲ. ಹಣದ
ಜೊತೆಗೆ ಹಲವು ದಾಖಲೆಗಳು, ಪುತ್ರಿಯ ಮದುವೆಗೆಂದು ತೆಗೆದಿಟ್ಟಿದ್ದ ಚಿನ್ನಭರಣಗಳನ್ನು
ಅಧಿಕಾರಿಗಳು ವಶ ಮಾಡಿಕೊಂಡಿದ್ದರು. 2004ನೇ ಇಸ್ವಿಯಲ್ಲಿ 7 ಕೋಟಿಯಿದ್ದ ಡಿಕೆಶಿ ಅವರ ಆಸ್ತಿ 2018ರ ವೇಳೆಗೆ 800 ಕೋಟಿ ರೂಗಳಾಗಿತ್ತು. ಬಹಳ ದಿನದಿಂದ ಡಿಕೆಶಿ ಮೇಲೆ ಕಣ್ಣಿರಿಸಿದ್ದ ಸಿಬಿಐ ನಿನ್ನೆ ದಾಳಿ ನಡೆಸಿದೆ. ಆದರೆ
ವಿರೋಧ ಪಕ್ಷವಾದ ಕಾಂಗ್ರೆಸ್ ಉಪಚುಣಾವಣೆಯ ಸಂದರ್ಭದಲ್ಲಿ ಸಿಬಿಐ ದಾಳಿ ರಾಜಕೀಯ ಪ್ರೇರಿತ ಎಂದು
ಆಪಾದನೆ ಮಾಡಿವೆ. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ಡಿಕೆಶಿ ತಪ್ಪು ಮಾಡದಿದ್ದರೆ ತನಿಖೆ ಎದುರಿಸಲು ಏಕೆ ಭಯ ಎಂದು ಕೇಳಿವೆ.
More Stories
ಡ್ರಗ್ಸ್ ಕೇಸ್ ಹೆಸರಿನಲ್ಲಿ ಟೆಕಿಗೆ 40 ಲಕ್ಷ ವಂಚನೆ
ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು